ರೈತರಿಗೆ ನೀಡುವ ಪರಿಕರ ಕುರಿತು ಚರ್ಚೆ
ಕ.ಪ್ರ.ವಾರ್ತೆ ಹೊನ್ನಾಳಿ ಸೆ.11 ಶಾಸಕ ಡಿ.ಜಿ. ಶಾಂತನಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸ್ಥಳೀಯ ಸಾಮರ್ಥ್ಯ ಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡಲಾಗುತ್ತಿರುವ ವಿವಿಧ ಪರಿಕರಗಳ ಕುರಿತು ಚರ್ಚೆ ನಡೆಯಿತು.
ಸದಸ್ಯರೊಬ್ಬರು ಕೃಷಿ ಇಲಾಖೆ ಅಧಿಕಾರಿಗಳು ರೈತರಿಂದ ಸಬ್ಸಿಡಿ ಹಣ ತೆಗೆದುಕೊಂಡು ಪರಿಕರ ವಿತರಿಸುವ ಸಂದರ್ಭದಲ್ಲಿ ಸರಿಯಾದ ರಶೀದಿಗಳನ್ನು ನೀಡುವುದಿಲ್ಲ ಎಂದುಆರೋಪಿಸಿದರು.
ಮೇಲ್ಮಟ್ಟದಲ್ಲಿ ನಿಗದಿ: ಇದಕ್ಕೆ ಸ್ಪಂದಿಸಿದ ಶಾಸಕರು ಕೃಷಿ ಅಧಿಕಾರಿ ರೇವಣಸಿದ್ದನ ಗೌಡ ಅವರನ್ನು ಪ್ರಶ್ನಿಸಿದರು. ಸಮಜಾಯಿಷಿ ನೀಡಿದ ಕೃಷಿ ಅಧಿಕಾರಿ ಪ್ರತಿಯೊಂದು ಪರಿಕರಗಳಿಗೆ ಒಂದೊಂದು ರೀತಿಯ ಪ್ರಮಾಣದ ಸಹಾಯಧನ ನೀಡಲಾಗುತ್ತದೆ ಇದನ್ನು ನಿಗದಿಪಡಿಸುವುದು ನಾವಲ್ಲ ಇದು ಮೇಲ್ಮಟ್ಟ ಅಂದರೆ ರಾಜ್ಯ ಮಟ್ಟದಲ್ಲಿಯೇ ನಿಗದಿಪಡಿಸಿರುತ್ತಾರೆ ಎಂದರು.
ಕೃಷಿ ಪರಿಕರಗಳನ್ನು ರಾಜ್ಯ ಮಟ್ಟದ ಅಧಿಕಾರಿಗಳ ಹಂತದಲ್ಲಿಯೇ ಖರೀದಿಸಲಾಗುತ್ತಿದೆ, ಕಾರಣ ಬಿಲ್ ನೀಡುವ ವ್ಯವಸ್ಥೆ ಇರುವುದಿಲ್ಲ. ಕೃಷಿ ಪರಿಕರಗಳ ಖರೀದಿ ಮತ್ತು ದರದ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೂ ಕೂಡ ಮಾಹಿತಿ ಇರುವುದಿಲ್ಲ ಎಂದರು.
ಕೃಷಿ ಪಂಡಿತರು; ಹಿಂದೆ ತಾಲೂಕಿನಿಂದ ರೈತರನ್ನು ವಿದೇಶ ಪ್ರವಾಸಕ್ಕೆ ಕಳಿಸುವ ಸೌಲಭ್ಯವಿತ್ತು. ಈಗ ಯಾವ ರೀತಿ ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷಿ ಅಧಿಕಾರಿ ಈ ಹಿಂದೆ ಸಚಿವರು ರಾಜಕೀಯ ಗಣ್ಯರು ಶಿಫಾರಸು ಮಾಡಿದವರನ್ನು ಕುಳಿಸುವ ಪದ್ಧತಿ ಇದ್ದು, ಹಿಂದಿನ ಸರ್ಕಾರದ ಅಡಳಿತ ಸಂದರ್ಭದಲ್ಲಿ ಇದು ಬೇಡ, ಯಾರು ಕೃಷಿ ಪಂಡಿತ ಅಥವಾ ಕೃಷಿ ಪ್ರಶಸ್ತಿ ಪಡೆದಿರುತ್ತಾರೋ ಆಂತಹವರನ್ನು ಕಳಿಸಬೇಕು ಎಂದು ನಿರ್ದೇಶನ ನೀಡಿದ ಕಾರಣ ತಾಲೂಕಿನಿಂದ ಒಬ್ಬ ರೈತರನ್ನು ಕಳುಹಿಸಲಾಗಿತ್ತು ಎಂದು ಹೇಳಿದರು.
ತಾಪಂ ಸದಸ್ಯ ಎಚ್.ಎಂ. ಗಿರೀಶ್ ಮಾತನಾಡಿ, ಪಕ್ಕದ ಜಿಲ್ಲೆ ಶಿವಮೊಗ್ಗದಲ್ಲಿ ರೈತರಿಗೆ ಟಿಲ್ಲರ್ ಖರೀದಿಗೆ ರೈತರಿಗೆ ರು. 42,000 ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ಇಲಾಖೆಯಲ್ಲಿ ಏಕೆ ರು. 68,000 ಕಟ್ಟಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಮೇಲಧಿಕಾರಿಗಳ ನಿರ್ದೇಶನ: ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ಮೇಲಧಿಕಾರಿಗಳ ನಿರ್ದೇಶನದಂತೆಯೇ ಪಡೆಯಲಾಗುತ್ತಿದೆ ಎಂದು ಹೇಳಿದರು. ರೈತರಿಗೆ ಬೆಳೆ ಪರಿಹಾರ ನೀಡುವ ಬಗ್ಗೆ ಶಾಸಕರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ ಬರಗಾಲವಿದ್ದರೆ ಪರಿಹಾರ ನೀಡಲು ಅವಕಾಶವಿದ್ದು, ಈ ಬಾರಿ ತಾಲೂಕಿನಲ್ಲಿ ಅತಿವೃಷ್ಟಿಯಾಗಿದೆ.
ಇದೀಗ ವಿಷದವಾಗಿ ಮೆಕ್ಕೆಜೋಳ ಮತ್ತು ಶೇಂಗಾ ಅತಿವೃಷ್ಟಿಯಿಂದ ಹಾಳಾಗಿರುವ ಶೇಕಡಾವಾರು ನಷ್ಟ ಅಂದಾಜಿಸಿ, ವರದಿ ಸಲ್ಲಿಸುತ್ತೇವೆ. ಇದರ ಆಧಾರದ ಮೇಲೆ ಬೆಳೆ ನಷ್ಟ ಪರಿಹಾರ ನೀಡುವುದು ಸರ್ಕಾರ ತೀರ್ಮಾನಕ್ಕೆ ಬಿಟ್ಟ ವಿಷಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಪ್ರಭಾವತಿ ಜುಂಜಾನಾಯ್ಕ, ಉಪಾಧ್ಯಕ್ಷೆ ವಿಶಾಲಾಕ್ಷಮ್ಮ ಅಲ್ಬರ್ಟ್ ಸದಸ್ಯರು, ದಾಕ್ಷಾಣಮ್ಮ ಕಾಂತರಾಜ್, ಕೃಷ್ಣಪ್ಪ, ಸುರೇಶ್, ಉಮೇಶ್, ಚಂದ್ರ ಶೇಖರಪ್ಪ ಅನಿತಾ, ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

