ಶಿವಮೊಗ್ಗ

ಚಿತ್ರಕಲೆ ಸೂಕ್ಷ್ಮ ಸಂವೇದನೆಯ ಮಾಧ್ಯಮ

Published On :

ಕ.ಪ್ರ.ವಾರ್ತೆ  ಶಿಕಾರಿಪುರ  ಸೆ.14
ಚಿತ್ರಕಲೆ ಸೂಕ್ಷ್ಮ ಸಂವೇದನೆಯ ಭಾಷಾ ಮಾಧ್ಯಮವಾಗಿದ್ದು, ವ್ಯಕ್ತಿಯ ಅಗೋಚರವಾದ ವ್ಯಕ್ತಿತ್ವವನ್ನು ಚಿತ್ರದ ಮೂಲಕ ಬಿಂಬಿಸುವ ಸೂಕ್ಷ್ಮ ಕಲೆಯು ಉತ್ತಮ ಕಲಾವಿದನಿಗೆ ಮಾತ್ರ ಸಾಧ್ಯ ಎಂದು ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ, ರಂಗಕರ್ಮಿ ಇಕ್ಬಾಲ್ ಅಹ್ಮದ್ ತಿಳಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ಶನಿವಾರ ಜೇಸಿ ಸಪ್ತಾಹದ ಅಂಗವಾಗಿ ಇಲ್ಲಿನ ಕಲಾ ಚಿಗುರು ವತಿಯಿಂದ ಚಿತ್ರಕಲಾ ಶಿಕ್ಷಕ ಡಿ. ಆರ್. ಚಂದ್ರಶೇಖರ್ ಅವರು ನಿರ್ಮಿಸಿರುವ ದವಸ ಧಾನ್ಯಗಳ ಗಣೇಶ ಮೂರ್ತಿ, ಸಾಸುವೆಕಾಳು ಗಣಪ, ರಾಗಿಯಲ್ಲಿನ ಕಲಾಕೃತಿ ಜತೆಗೆ ವಿವಿಧ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿತ್ರದ ಮೂಲಕ ವಿವರಣೆ: ಪ್ರಪಂಚದಲ್ಲಿ ನಾಗರಿಕತೆ ಪರಂಪರೆ ಆರಂಭಕ್ಕೂ ಮುನ್ನ ಮಾನವ ತನ್ನ ಅಭಿಪ್ರಾಯ ಬಾಷೆಯ ಮಾಧ್ಯಮವಾಗಿ ಚಿತ್ರದ ಮೂಲಕ ವಿವರಿಸುವ ಪದ್ಧತಿ ಜಾರಿಯಲ್ಲಿದ್ದು, ಈ ದಿಸೆಯಲ್ಲಿ ಗುಹೆಯಲ್ಲಿ ಭರ್ಚಿ ಚುಚ್ಚಿದ ಪ್ರಾಣಿಗಳ ಚಿತ್ರ ರಚಿಸಿ ಬೇಟೆಗೆ ಹೊರಡುತ್ತಿರುವ ಬಗ್ಗೆ ವಿವರಿಸಿರುವುದು ಚಿತ್ರಕಲೆ ಭಾಷಾ ಮಾಧ್ಯಮವಾಗಿತ್ತುಎಂರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಸೈ ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹಲವು ಪ್ರತಿಭಾನ್ವಿತರು ವಿವಿಧ ಕ್ಷೇತ್ರಗಳಲ್ಲಿದ್ದು, ಅವರ ಪ್ರತಿಭೆ ಹೊರಹಾಕುವ ಸೂಕ್ತ ವೇದಿಕೆ,ಅವಕಾಶದ ಕೊರತೆಯಿಂದ ಎಲೆ ಮರೆಯ ಕಾಯಿಯಂತಾಗಿದ್ದಾರೆ ಎಂದರು.
ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿದರು. ಜೇಸಿಐ ಅಧ್ಯಕ್ಷ  ರಾಮಪ್ಪ, ಮಲ್ಲಿಕಾರ್ಜುನ ಕಾನೂರು, ಕಾರ್ಯಕ್ರಮ ನಿರ್ದೇಶಕ ಈಶ್ವರಪ್ಪ, ರಘು, ಅರ್ಬನ್ ಬ್ಯಾಂಕ್ ನಿರ್ದೇಶಕ ಹದಡಿ ಮಂಜುನಾಥ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.