ಅಭಿಮಾನಿಗಳ ನಿಯಂತ್ರಿಸಲು ಲಘು ಲಾಠಿ ಪ್ರಹಾರ
ಶಿಕಾರಿಪುರ: ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಪರವಾಗಿ ಪಟ್ಟಣಕ್ಕೆ ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಆಗಮಿಸಿದ್ದ ಚಲನಚಿತ್ರ ತಾರೆ ಉಪೇಂದ್ರ ಹಾಗೂ ಶಿವರಾಜ್ಕುಮಾರ್ ಅವರನ್ನು
ವೀಕ್ಷಿಸಲು ಅಸಂಖ್ಯಾತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು ಮುಗಿಬಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೋಲಿಸರು ಲಘು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಸನ್ನಿವೇಶ ಏರ್ಪಟ್ಟಿತು.
ಶಿವಮೊಗ್ಗ ವೃತ್ತದಲ್ಲಿ ಮಧ್ಯಾಹ್ನ 3 ರ ವೇಳೆಯಲ್ಲಿ ಆಗಮಿಸಿದ ಉಪೇಂದ್ರ ಹಾಗೂ ಶಿವರಾಜ್ಕುಮಾರ್ ಅಭ್ಯರ್ಥಿ ಗೀತಾ ಮತ್ತಿತರ ಆಗಮನವನ್ನು 2 ಗಂಟೆ ಕಾಲ ಬಿಸಿಲಿನಲ್ಲಿ ಕಾದು ಬಸವಳಿದಿದ್ದ ಅಭಿಮಾನಿಗಳು ಏಕಾಏಕಿ ತಮ್ಮ ನೆಚ್ಚಿನ ನಾಯಕರನ್ನು ಸಮೀಪದಿಂದ ವೀಕ್ಷಿಸಲು ಮುಗಿಬಿದ್ದು ಗೊಂದಲ ನೂಕು ನುಗ್ಗಲು ಉಂಟಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಪೋಲಿಸರು ಲಘು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ನೆರೆದಿದ್ದ ಅಸಂಖ್ಯಾತ ಅಭಿಮಾನಿಗಳನ್ನು ಉದ್ದೇಶಿಸಿ ನಟ ಉಪೇಂದ್ರ, ಗೀತಾ ಮತನೀಡಿ ಗೆಲ್ಲಿಸಿ ಎಂದರು.
ಆಭಿಮಾನಿಗಳ ಒತ್ತಡಕ್ಕೆ ಮಣಿದು ನಟ ಉಪೇಂದ್ರ ರಕ್ತಕಣ್ಣೀರು ಚಿತ್ರದ ಡೈಲಾಗ್ನಲ್ಲಿ ಕಾಂತಾ ಗೀತಾರಿಗೆ ಮತಹಾಕು ಕಾಂತಾ ಎಂದು, ಹಾಗೂ ಶಿವರಾಜ್ಕುಮಾರ್ ಜೋಗಿ, ಜೋಗಯ್ಯ ಚಿತ್ರದ ಡೈಲಾಗ್ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ಮಧು ಬಂಗಾರಪ್ಪ,ಮುಖಂಡ ಬಳಿಗಾರ್ ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

