ಶಿವಮೊಗ್ಗ

ಪ್ರಚಾರದಲ್ಲಿ ನಟ, ನಟಿಯರಉಚಿತ ದರ್ಶನ: ಭಂಡಾರಿ

Published On :

ಹೊಸನಗರ: ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ, ರೈತಪರ ಯೋಜನೆಗಳನ್ನು ಮುಂದಿಟ್ಟು ಚುನಾವಣೆ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಹೇಳಿದರು.
 ತಾಲೂಕಿನ ಯಡೂರು, ಮಾಸ್ತಿಕಟ್ಟೆ, ಸಂಪೇಕಟ್ಟೆ, ನಿಟ್ಟೂರು, ತ್ರಿಣಿವೆ, ಸೊನಲೆ, ಹುಂಚಾ ಮತ್ತು ವಿವಿಧ ಗ್ರಾಪಂ ಮಟ್ಟದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಲೋಕಸಭೆಗೆ ನಾನು ಸ್ಪರ್ಧಿಸಿದ್ದೇನೆ ಎನ್ನುವುದಕ್ಕಿಂತ ದೇಶ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು.
ತ್ರಿಣಿವೆ ಗ್ರಾಪಂ ವ್ಯಾಪ್ತಿಯ ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,  ಸಿನಿಮಾ ಮಂದಿಯನ್ನು ತೆರೆಯ ಮೇಲೆ ನೋಡಲು ದುಡ್ಡು  ನೀಡಬೇಕು. ಆದರೆ ಚುನಾವಣೆ ಅಂಗವಾಗಿ ಜನರು ನಟ ನಟಿಯರನ್ನು ಉಚಿತವಾಗಿ ನೋಡಬಹುದು ಎಂದು ಜೆಡಿಎಸ್ ಹೆಸರು ಹೇಳದೆ ವ್ಯಂಗ್ಯವಾಡಿದರು.
  ಮಾಜಿ ಶಾಸಕ ಬಿ.ಸ್ವಾಮೀರಾವ್ ಮಾತನಾಡುತ್ತಿದ್ದ ವೇಳೆ ಲೋಕಸಭಾ ಅಭ್ಯರ್ಥಿ ಭಂಡಾರಿಯೊಂದಿಗೆ ಜಿಪಂ ವಿಪಕ್ಷನಾಯಕ ಕಲಗೋಡು ರತ್ನಾಕರ್ ವೇದಿಕೆ ಮೇಲೆ ಪಿಸುಮಾತಿನಲ್ಲಿ ತೊಡಗಿದ್ದನ್ನು ಕಂಡು ಸ್ವಾಮೀರಾವ್ ಗರಂ ಆದ ಘಟನೆ ನಡೆಯಿತು.
 ಭಂಡಾರಿಯವರೇ ನಾನು ಮಾತನಾಡುತ್ತಿದ್ದೇನೆ. ಈ ವೇಳೆ ಇಂತಹ ನಡತೆಯನ್ನು ಸಹಿಸುವುದಿಲ್ಲ. ದಯಮಾಡಿ ವೇದಿಕೆಯಲ್ಲಿ ಈ ರೀತಿ ನಡೆದುಕೊಳ್ಳಬೇಡಿ ಎಂದು ಖಾರವಾಗಿ ಹೇಳಿದ್ದು ಮಂಜುನಾಥ ಭಂಡಾರಿ ಕ್ಷಣಕಾಲ ಮಜುಗರಕ್ಕೆ ಒಳಪಡಬೇಕಾಯಿತು. ಹಲವು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.