ಹಿಂದುತ್ವ ಕೋಮುವಾದವಲ್ಲ
ತೀರ್ಥಹಳ್ಳಿ: ಹಿಂದುತ್ವ ಕೋಮುವಾದ ಅಲ್ಲ. ಹಿಂದುತ್ವ ಪ್ರತಿಪಾದಕರು ಕಮ್ಯುನಿಸ್ಟ್ಗಳಿಗಿಂತ ಪ್ರಗತಿಶೀಲರು ಎಂದು ತೇಜಸ್ವಿನಿ ಗೌಡ ಹೇಳಿದರು. ಬಿಜೆಪಿ ಪರ ಮತಯಾಚಿಸಲು ತೀರ್ಥಹಳ್ಳಿಗೆ ಭೇಟಿ ನೀಡಿದಾಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಎಸ್ವೈ ಗೆಲ್ಲುತ್ತಾರೆ. ಗೆದ್ದು ಮೋದಿ ಪಕ್ಕದಲ್ಲಿ ಕೂರುತ್ತಾರೆ. ಹಾಗೆಯೇ ಬಿ.ಎಸ್. ರಾಘವೇಂದ್ರ ಅವರ ಅವಶ್ಯಕತೆ ರಾಜ್ಯಕ್ಕೆ ಇದೆ ಎಂದರು. ಕಾಂಗ್ರೆಸ್ಸಿನಲ್ಲಿ ಈಗ ಅಹಿಂದ ಇಲ್ಲ. ಬರೀ ಅಹಂ ಇದೆ ಎಂದು ತಮ್ಮ ವಾದ ಮಂಡಿಸಿದರು. ಅಹಿಂದ ರಾಜಕಾರಣವೇ ಒಂದು ನೀಚತನ. ಇಂದು ರಾಜಕೀಯ ಅಸ್ತ್ರ್ತವಾಗಿದೆ ಅಷ್ಟೆ ಎಂದವರು ಹೇಳಿದರು.
ಯಡಿಯೂರಪ್ಪ ಶ್ರಮಜೀವಿ ರಾಜಕಾರಣಿ. ಕೇಂದ್ರದಲ್ಲಿ ಬಲಿಷ್ಠ ಭಾರತ ನಿರ್ಮಾಣಕ್ಕೆ ಮೋದಿ ಅಗತ್ಯವಾಗಿದ್ದಾರೆ ಎಂದವರು ಹೇಳಿದರು.
ಖಲಿಸ್ಥಾನ ನಿರ್ಮಾಣ: ಹಿಂದೆ ಕಾಂಗ್ರೆಸ್ ನಾಯಕತ್ವದಲ್ಲೇ ಪಾಕಿಸ್ಥಾನ ನಿರ್ಮಾಣವಾಗಿದ್ದು ಇದರಿಂದ ಉತ್ತೇಜಿತರಾದ ಸಿಖ್ಖರು ಖಲಿಸ್ಥಾನ ನಿರ್ಮಾಣಕ್ಕೆ ಬೇಡಿಕೆಯಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಹತ್ಯೆಯಾಗುವಂತಹ ಸಂದರ್ಭಗಳೇ ಕಾಂಗ್ರೆಸ್ ಪಕ್ಷದ ಸಾಧನೆಯಲ್ಲ ಎಂದು ಹೇಳಿದ ಅವರು ಇಂದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟ ಸಜ್ಜನ ರಾಜಕಾರಣಿಗಳು ಗೆಲ್ಲುವ ಅಗತ್ಯವಿದೆ ಎಂದು ಹೇಳಿದರು.
ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ, ನಾಗರಾಜ ಶೆಟ್ಟಿ, ಸುವರ್ಣ ಶಂಕರ್, ವಿದ್ಯಾ, ಪದ್ಮಿನಿ, ಸುಮಾ ರಾಮಚಂದ್ರ, ಡಿ.ಲಕ್ಷ್ಮಣ್, ಸಾಲೇಕೊಪ್ಪ ರಾಮಚಂದ್ರ, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ ಈ ಸಂದರ್ಭದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

