ಒಂದು ಪರ್ಮಿಟ್ನಲ್ಲಿ 2-3 ಬಸ್ ಓಡಿಸಿದ ಜಮೀರ್
ಶಿವಮೊಗ್ಗ: ಒಂದು ಬಸ್ಸಿಗೆ ಪರ್ಮಿಟ್ ಪಡೆದು ಎರಡು- ಮೂರು ಬಸ್ ಓಡಿಸುವ ಜೆಡಿಎಸ್ ಶಾಸಕ ಜಮೀರ್ ಅಹ್ಮದ್, ರಾಜಕೀಯದಲ್ಲೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿ, ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮೀರ್ ಅಹ್ಮದ್ ಎಂಬ ಸಂತರು ಶಿವಮೊಗ್ಗದಲ್ಲಿ ಓಡಾಡುತ್ತಾ, ಬಹಳ ಭವಿಷ್ಯ ನುಡಿಯುತ್ತಿದ್ದಾರೆ. ನಾವು ಯಡಿಯೂರಪ್ಪ ಅವರನ್ನು ಸೋಲಿಸಲ್ಲ. ಈಶ್ವರಪ್ಪ ಮತ್ತಿತರರು ಸೋಲಿಸುತ್ತಾರೆಂದು ಹೇಳುತ್ತಿದ್ದಾರೆ. ಜಮೀರ್ ಅಹ್ಮದ್ನಂತಹ ಶಾಸಕನಿಂದ ಇದಕ್ಕಿಂತ ಬೇರೆ ಏನು ನಿರೀಕ್ಷೆ ಮಾಡಲು ಸಾದ್ಯ ಎಂದರು.
ಕ್ರಿಮಿನಲ್ ಹಿನ್ನೆಲೆ: ಆತನ ಬ್ಯಾಕ್ಗ್ರೌಂಡ್ ಕ್ರಿಮಿನಲ್. ಹೀಗಾಗಿ ಕ್ರಿಮಿನಲ್ ಐಡಿಯಾವೇ ಬರುತ್ತದೆ. ಅನಿತಾ ಕುಮಾರಸ್ವಾಮಿಯವರ ಸೋಲಿಗೆ ಯಾರು ಕಾರಣ ಎಂಬುದು ರಾಜಕೀಯವಾಗಿ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಮನೆಗೆ ಎಷ್ಟು ಬಾರಿ ಹೋಗಿ ಬಂದರು ಎಂಬುದೂ ತಿಳಿದಿದೆ. ಕಾಂಗ್ರೆಸ್ನೊಂದಿಗೆ ಒಳಒಪ್ಪಂದ ಮಾಡಿಕೊಂಡು ರಾಜಕೀಯ ದಲ್ಲಾಳಿಯಾಗಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಪರ ಕೆಲಸ ಮಾಡುತ್ತಿದ್ದಾರೆ, ಜೆಡಿಎಸ್ ಅಭ್ಯರ್ಥಿ ಆಳ್ವ ಅವರ ಪರವಾಗಿ ಪ್ರಚಾರ ಮಾಡುತ್ತಿಲ್ಲ ಎಂದರು.
ಜಮೀರ್ ಅಹ್ಮದ್ ಎರಡು ಪಕ್ಷಕ್ಕೂ ಕ್ಯಾನ್ವಾಸ್ ಮಾಡುತ್ತಾರೆ. ಮೂರು ಪಕ್ಷಕ್ಕೂ ಕ್ಯಾನ್ವಾಸ್ ಮಾಡುತ್ತಾರೆ. ಒಂದು ಪರ್ಮಿಟ್ ತೆಗೆದುಕೊಂಡು ಮೂರು ಬಸ್ ಓಡಿಸಿದವರು ಅವರು, ಶಾಸಕ ಸ್ಥಾನಕ್ಕೆ ಪರ್ಮಿಟ್ ಇಟ್ಟುಕೊಂಡು ಜೆಡಿಎಸ್, ಕಾಂಗ್ರೆಸ್ ಪರವೂ ಕಾರ್ಯನಿರ್ವಹಿಸುತ್ತಾರೆ. ಅನಿತಾ ಕುಮಾರಸ್ವಾಮಿ ಸೋಲಿಸುತ್ತಾರೆ. ನಿಷ್ಠೆ ಜೆಡಿಎಸ್ಗೆ ಇಲ್ಲ ಎಂದು ಟೀಕಿಸಿದರು.
ಹೆಸರಿಗಷ್ಟೇ ಜಾತ್ಯತೀತ: ಜಮೀರ್ ಅಹ್ಮದ್ ಅಂಥವರು ಶಿವಮೊಗ್ಗ ಜಿಲ್ಲೆಯಲ್ಲಿ ಬಂದು ಮಾತನಾಡುವುದು ಕುಮಾರಸ್ವಾಮಿ, ದೇವೇಗೌಡರಿಗೂ ಗೌರವವಲ್ಲ. ಅವರಿಬ್ಬರಿಗೆ ತಮ್ಮದೇ ಆದ ರಾಜಕೀಯ ಮುಖವಿದೆ. ಅವರು ಬಂದು ಮಾತನಾಡಲಿ. ಯಾರ್ಯಾರನ್ನೋ ಕಳುಹಿಸಿ ಜಾತಿ ಸಮಾವೇಶ ಮಾಡಿಸುತ್ತಿದ್ದಾರೆ. ಅದು ಹೆಸರಿಗಷ್ಟೇ ಜಾತ್ಯತೀತ ಪಕ್ಷ. ಅವರು ಜಾತಿ ಮಾಡುತ್ತಿಲ್ಲವೇ ಎಂದು ಕಟಕಿದರು.
ಜಮೀರ್ ಅಹ್ಮದ್ ಮಾತನಾಡಿದ್ದರಿಂದ ಬಿಜೆಪಿಗೆ ನಷ್ಟವೇನಿಲ್ಲ. ಇನ್ನೂ ನಾಲ್ಕು ಬಾರಿ ಕ್ಷೇತ್ರಕ್ಕೆ ಬರಲಿ, ಜೆಡಿಎಸ್ಗೆ ಹೆಚ್ಚು ನಷ್ಟವಾಗುತ್ತದೆ ಎಂದು ಹೇಳಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಮುಸಲ್ಮಾನರು ಜಮೀರ್ ಮಾತನ್ನು ಒಪ್ಪಿಕೊಳ್ಳುವುದೇ ಇಲ್ಲ ಎಂದರಲ್ಲದೇ, ಜೆಡಿಎಸ್ಗೆ
ನಟರು, ಜಮೀರ್ ಬಿಟ್ಟು ಯಾರೂ ಸಿಗುತ್ತಿಲ್ಲವೇ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

