ಶಿವಮೊಗ್ಗ

'ಕುಡಿವ ನೀರಿನ ಸಮಸ್ಯೆ ಪರಿಹರಿಸಿ'

Published On :

ಸೊರಬ: ಚಂದ್ರಗುತ್ತಿ ಹೋಬಳಿ ಹಿರೆಕಲಗೋಡಿನ ಚೆನ್ನಯ್ಯ ಸಮಾಜದ ಕಾಲೋನಿಯಲ್ಲಿ ನೀರಿಗಾಗಿ ಪರಿತಪಿಸುತ್ತಿದ್ದು, ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ.
ಈ ಕುರಿತು 'ಕನ್ನಡಪ್ರಭ'ದೊಂದಿಗೆ ತಮ್ಮ ಬವಣೆ ತೋಡಿಕೊಂಡಿರುವ ಕಾಲೋನಿಯವರು, ಸ್ಥಳೀಯ ಆಡಳಿತ, ಜನಪ್ರತಿನಿಧಿಗಳ ಮೇಲೆ ಹರಿಹಾಯ್ದಿದ್ದಾರೆ. ಪರಿಶಿಷ್ಟ ಜಾತಿಯ ಸುಮಾರು 15 ಕುಟುಂಬ, 60ಕ್ಕೂ ಹೆಚ್ಚು ಜನರಿರುವ ಇವರಿಗೆ ಇಲ್ಲಿಯವರೆಗೂ ಪ್ರತ್ಯೇಕ ನೀರಿನ ವ್ಯವಸ್ಥೆಯಾಗಿಲ್ಲ. ಬಾವಿ, ಬೋರ್‌ವೆಲ್ ತೆಗೆದಿದ್ದಾರಾದರೂ ನೀರಿಲ್ಲ. ನೆಪಕ್ಕೆ ಇದೇ ಬಾವಿ, ಬೋರ್‌ವೆಲ್‌ಗೆ ಪಂಪ್ ಹಾಕಿ ನೀರೆತ್ತುವ ಸಾಹಸವೂ ನಡೆದಿದೆ. ನೀರು ಮಾತ್ರ ಇಲ್ಲ.
ಸದ್ಯಕ್ಕೆ ಇಲ್ಲಿಯೆ ಇರುವ ಶಾಲೆಯ ಬಾವಿಯಿಂದ ನೀರು ಪಡೆಯಲಾಗುತ್ತಿದೆಯಾದರೂ 2 ಬಿಂದಿಗೆಗಿಂತ ಹೆಚ್ಚು ನೀರು ಸಿಗುವುದಿಲ್ಲ. ನೀರಿನ ಸುರಕ್ಷತೆ, ಸ್ವಚ್ಛತೆ ದೃಷ್ಟಿಯಿಂದ ಶಾಲೆಯ ಬಾವಿಗೆ ಬೀಗ ಹಾಕಿ ಬಂದೋಬಸ್ತು ಮಾಡಿಕೊಂಡಿರುವ ಕಾರಣ ಶಿಕ್ಷಕರು ಬರುವ ತನಕವೂ ನೀರು ತೆಗೆಯುವಂತಿಲ್ಲ. ಈಗ ಶಾಲೆಗೆ ರಜೆ ಇದೆ. ಬಾವಿಯಲ್ಲಿ ನೀರಿರುವುದಿಲ್ಲ.
ಒಂದೂವರೆ ಕಿಮೀ ಕಲ್ಗೋಡು ಹಳ್ಳದಿಂದ ನೀರು ಹೊತ್ತು ತರೋಣವೆಂದರೂ ಈ ಬಾರಿ ಇಲ್ಲಿನ ಬ್ಯಾರೇಜಿನಲ್ಲಿ ನೀರು ಗಣನೀಯ ಇಳಿಮುಖ ಕಂಡಿದೆ. ಮಳೆಯೂ ಆಗಿಲ್ಲ. ಮುಂದಿನ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿರುವ ಅವರು, ನೀರಿಗಾಗಿ ದಿನ ಬೆಳಗಾದರೆ ಹೊಡೆದಾಡುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟವರು ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಹಿರೆಕಲಗೋಡಿನ ವಿನಾಯಕ, ಆಶಾ, ಸುಧಾ, ಇರಾಜಮ್ಮ, ಗುತ್ಯಪ್ಪ, ಸುಮಿತ್ರಾ, ನಿಂಗಮ್ಮ, ನಾಗರಾಜ, ಲಲಿತಮ್ಮ, ಸಣ್ಣಮ್ಮ, ರೇಖಾ, ಹನುಮಂತ, ಗಂಗಾಧರ, ರಾಘವೇಂದ್ರ ಇತರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.