ಶಿವಮೊಗ್ಗ

ಪುರುಷೋತ್ತಮ್ ನಿಧನಕ್ಕೆ ಸಂತಾಪ

Published On :

ಶಿವಮೊಗ್ಗ: ಜಿಲ್ಲಾ ಬೋವಿ ವಿದ್ಯಾವರ್ಧಕ ಸಂಘದ ಮುಖಂಡ ಎಂ.ಪುರುಷೋತ್ತಮ ಅಕಾಲಿಕ ನಿಧನಕ್ಕೆ ಜಿಲ್ಲಾ ಭೋವಿ (ವಡ್ಡರ) ವಿದ್ಯಾವರ್ಧಕ ಸಂಘ ಕಂಬನಿ ಮಿಡಿದಿದೆ.
ಸಂಘದ ಅಧ್ಯಕ್ಷ ಎಚ್.ಹನುಮಂತಪ್ಪನವರ ನೇತೃತ್ವದಲ್ಲಿ ನಡೆದ ಸಂತಾಪ ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. 17 ವರ್ಷ ಕಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪುರುಷೋತ್ತಮ್, ಬಾಲರಾಜ ಅರಸ್ತೆ ರಸ್ತೆಯ ಕ್ಕದಲ್ಲಿ ಭೋವಿ ಕಾಂಪ್ಲೆಕಕ್ಸ್ನಿರ್ಮಾಣಕ್ಕೆ ಆಸಕ್ತಿ ತೋರಿ ಕಟ್ಟಡ ನಿರ್ಮಾಣಕ್ಕೆ ಕಾರಣಕರ್ತರು ಎಂದು ಹನುಮಂತ್ಪ ನೆನಪಿಸಿಕೊಂಡರು.
ಸಂತಾಪ: ಕೆ.ಆರ್.ಪುರಂ ನಲ್ಲಿರುವ ಭಾರತಿ ಕ್ರೆಡಿಟಟ್ಕೋ ಆಪರೇಟಿವ್ ಸೊಸೈಟಿಯು ಸಂಘದ ಅಧ್ಯಕ್ಷ ಎಂ.ಪಿ.ಸಂಪತ್ ಅಧ್ಯಕ್ಷತೆಯಲ್ಲಿ  ತುರ್ತು ಸಭೆ ನಡೆಸಿ ಪುರುಷೋತ್ತಮ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿತು.
ಪುರುಷೋತ್ತಮ್ ಅವರು ಅನೇಕ ಸಂಘ ಸಂಸ್ಥೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸಮಾಜ ಸೇವೆ ಮಾಡಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ, ಅವರ ಕುಟುಂಬ ವರ್ಗಕ್ಕೆ ದು-ಖ ಸಹಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಏಳುಮಲೈ, ನಿರ್ದೇಶಕ ಎಂ. ಸುಬ್ರಮಣಿ, ಕೆ. ಶೇಖರ್, ಜೆ. ರಾಜೇಂದ್ರ, ಎಂ. ಭೂಪಾಲ್, ಎ. ಸಿಂಗಾರವೇಲನ್, ಡಿ. ರಾಜಶೇಖರ್, ಪುಷ್ಪಲತಾ ಮತ್ತಿತರರು ಸಭೆಯಲ್ಲಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.