ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿ 28ರಿಂದ
ಶಿವಮೊಗ್ಗ: ಇಲ್ಲಿನ ನಳಂದ ಚೆಸ್ ಅಕಾಡೆಮಿ ರಾಷ್ಟ್ರ ಮಟ್ಟದ ನಳಂದ ಕಪ್ 2014 ಚೆಸ್ ಪಂದ್ಯಾವಳಿಯನ್ನು ಆಯೋಜಿಸಿದೆ.
ಏಪ್ರಿಲ್ 28ರಿಂದ ಮೇ 1ರವರೆಗೆ ನಗರದ ಬಿ.ಎಚ್. ರಸ್ತೆಲ್ಲಿರುವ ಸೆಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿರುವ ಸ್ನೇಹ ಭವನ ಸಭಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಒಂದು ಲಕ್ಷ ನಗದು ಬಹುಮಾನವಿದೆ. ವಿವಿಧ ವಯೋವರ್ಗಗಳಲ್ಲೂ ವಿಶೇಷ ಬಹುಮಾನ ನೀಡಲಾಗುತ್ತದೆ.
ಈ ಪಂದ್ಯಾವಳಿಯಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳಿಂದ ಆಟಗಾರರು ಬರಲು ಆಸಕ್ತಿ ತೋರಿಸಿದ್ದು, ಇದು ಮುಕ್ತ ಪಂದ್ಯಾವಳಿಯಾಗಿರುತ್ತದೆ ಎಂದು ಅಕಾಡೆಮಿಯ ಕಾರ್ಯದರ್ಶಿ ಶ್ರೀಕೃಷ್ಣ ಉಡುಪ ತಿಳಿಸಿದ್ದಾರೆ.
ನಳಂದ ಚೆಸ್ ಅಕಾಡೆಮಿ 14 ವರ್ಷಗಳಿಂದ ಶಿವಮೊಗ್ಗ ನಗರವನ್ನು ಕೇಂದ್ರವಾಗಿಟ್ಟುಕೊಂಡು ಶಿವಮೊಗ್ಗ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚೆಸ್ ತರಬೇತಿ ನೀಡುತ್ತಾ ಬಂದಿದೆ. ನಮ್ಮ ವಿದ್ಯಾರ್ಥಿಗಳು ಹೆಚ್ಚಿನವರು ಮಧ್ಯಮವರ್ಗಕ್ಕೆ ಸೇರಿದವರಾಗಿದ್ದು, ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿಗಳು ದೂರದ ದೊಡ್ಡ ನಗರಗಳಲ್ಲಿ ನಡೆಯುವುದರಿಂದ ಇವರು ಪಾಲ್ಗೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನಿಸಿ ಪ್ರತಿಭೆ ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ರಾಷ್ಟ್ರಮಟ್ಟದ ಚೆಸ್ ಪಂದ್ಯಾವಳಿ ಹಮ್ಮಿಕೊಂಡಿರುವುದಾಗಿ ಉಡುಪ ವಿವರಿಸಿದ್ದಾರೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಮೊ. 9844436276ಗೆ ಸಂಪರ್ಕಿಸಬಹುದು.
ಇಂದು ಯಕ್ಷಗಾನ ಪ್ರದರ್ಶನ: ಸನ್ಮಾನ
ಸಾಗರ: ತಾಲೂಕಿನ ಸಿರಿವಂತೆ ಯಕ್ಷಸಂಭ್ರಮ ಸಂಸ್ಥೆ ಆಶ್ರಯದಲ್ಲಿ ಏ.23 ರಂದು ರಾತ್ರಿ 9.30 ಗಂಟೆಗೆ ಸಿರಿವಂತೆಯಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆಸರಾಂತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣಯಾಜಿ ಹಾಗೂ ನಾಟಿ ವೈದ್ಯ ಕೇಶವ ಹೆಗಡೆ ಅವರನ್ನು ಸನ್ಮಾನಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿರಸಿ ಟಿಎಸ್ಎಸ್ ಸಂಸ್ಥೆ ಅಧ್ಯಕ್ಷ ಶಾಂತಾರಾಮ ಹೆಗಡೆ ಉಪಸ್ಥಿತರಿರುವರು.
ನಂತರ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರಿಂದ “¥ÚÈÚß¾ÚßM~ ಪುನರ್ ÑÚʾÚßMÈÚÁÚ’ ಹಾಗೂ “^æÄßÈæ _}ÛÃÈÚ~’ ಯಕ್ಷಗಾನ ಪ್ರದರ್ಶನ ಇರುತ್ತದೆ. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಮಯ್ಯ ರಾಮಕೃಷ್ಣ ಹೆಗಡೆ, ಉದಯಕುಮಾರ್, ಶಿವಾನಂದ ಕೋಟ ಪಾಲ್ಗೊಳ್ಳಲಿದ್ದು, ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣಯಾಜಿ, ಹಳ್ಳಾಡಿ ಜಯರಾಮ ಶೆಟ್ಟಿ, ಸಿದ್ದಕಟ್ಟೆ, ಹುಡುಗೋಡು, ಪ್ರಸನ್ನ ಶೆಟ್ಟಿಗಾರು, ಶಶಿಕಾಂತ ಶೆಟ್ಟಿ ರಮೇಶ್ ಭಂಡಾರಿ ಪಾಲ್ಗೊಳ್ಳಲಿದ್ದಾರೆ.
ವಿಶ್ವ ಭೂ ದಿನ ನಾಳೆ
ಶಿವಮೊಗ್ಗ: ಏ.24 ರಂದು ಸಂಜೆ 5 ಗಂಟೆಗೆ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿಶ್ವ ಭೂ ದಿನ ಆಚರಣೆ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕೋರಿದ್ದಾರೆ.
ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯಲ್ಲಿ ಖಾಲಿ ಇರುವ ಸಾಮಾನ್ಯ ವರ್ಗದ-7, ಪರಿಶಿಷ್ಟ ಜಾತಿಯ-2, ಪ್ರವರ್ಗ 2(ಎ) ವರ್ಗದ-2, ಪ್ರವರ್ಗ 2(ಬಿ) ವರ್ಗದ -1 ಹಾಗೂ ಪ್ರವರ್ಗ 3(ಎ) ವರ್ಗದ -1 ಹುದ್ದೆಗೆ ಸೇರಿದಂತೆ ಒಟ್ಟು 13 ಶೀಘ್ರಲಿಪಿಗಾರರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 7 ಕೊನೆ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯನ್ನು ಸಂಪರ್ಕಿಸುವಂತೆ ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

