ಶಿವಮೊಗ್ಗ

ಶಕುಂತಲಾ ನಿಧನ: ಜಿಲ್ಲೆಯಲ್ಲಿ ದುಃಖದ ಛಾಯೆ

Published On :

ಕ.ಪ್ರ.ವಾರ್ತೆ   ಸೊರಬ   ಏ. 22
ಸಂಸಾರದಲ್ಲಿ ರಾಜಕೀಯ ಬೆರೆಸಿಕೊಳ್ಳಲು ಇಚ್ಛಿಸದ ಸಾಮಾನ್ಯ ಗೃಹಿಣಿಯಾಗಿ ದಿ.ಬಂಗಾರಪ್ಪ ರಾಜಕೀಯ ಪ್ರಜ್ಞೆಯ ಹಿಂದೆ ಶಕ್ತಿಯಾಗಿದ್ದ ಅವರ ಪತ್ನಿ ಶಕುಂತಲಾ ನಿಧನದ ವಿಚಾರ ತಿಳಿಯುತ್ತಿದ್ದಂತೆಯೆ ಸೊರಬದ ಹಲವು ಹಳ್ಳಿಗಳಲ್ಲಿ ದುಃಖದ ಛಾಯೆ ಮೂಡಿದೆ.
ತಾಲೂಕಿನ ಸಾಮಾನ್ಯ ಜನತೆ ಬಂಗಾರಪ್ಪ ನಿವಾಸಕ್ಕೆ ತೆರಳಿದರೆ ಆತ್ಮೀಯ ಆತಿಥ್ಯ ನೀಡುತ್ತಿದ್ದ ಮಹಾತಾಯಿ ಎಂದೇ ಜನಸಾಮಾನ್ಯರಲ್ಲಿ ಮಾತಾಗಿದ್ದ ಶಕುಂತಲ ಬಂಗಾರಪ್ಪ ಅವರನ್ನು ಪ್ರಸಕ್ತ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕರೆತಂದಿದ್ದು ಬೇಸರ ಮೂಡಿಸಿತ್ತು.
ಈ ಇಳಿ ವಯಸ್ಸಿನಲ್ಲಿ, ಕಾಯಿಲೆಯಿಂದ ಬಳಲುತ್ತಿರುವ ಅಮ್ಮನನ್ನು ಕರೆತರುವುದು ಬೇಕಿತ್ತೇ ಎಂದು ಕೊಂಡ ಜನತೆಗೆ ಅವರ ನಿಧನದ ವಿಷಯ ತೀವ್ರ ಅಘಾತ ತಂದಿತು.  
ವೈವಾಹಿಕ ಜೀವನ: ಶಂಕುತಲಾ ಹುಟ್ಟಿದ್ದು, ಬೆಳೆದಿದ್ದು ಕಾರವಾರ ಜಿಲ್ಲೆ ಶಿರಸಿ ತಾಲೂಕಿನ ಮಡಗಾಂವ್‌ನಲ್ಲಿ. ಸ್ವ ಗ್ರಾಮದಲ್ಲಿಯೇ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿದ ಅವರು,1958ರಲ್ಲಿ  ಕುಬಟೂರಿನ ಎಸ್.ಬಂಗಾರಪ್ಪನವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ವಸಂತ್ (ಕುಮಾರ್ ಬಂಗಾರಪ್ಪ), ಸುಜಾತ, ಗೀತಾ, ಮಧು ಬಂಗಾರಪ್ಪ, ಅನಿತಾ ಐವರ ಮಕ್ಕಳ ತಾಯಿಯಾಗಿ ಬೆಳೆದ ಅವರ ಆತ್ಮಸ್ಥೈರ್ಯ ಹಾಗೂ ದೂರ ದೃಷ್ಟಿ ಆಗಾಧವಾದುದು.
ಸಾಮಾಜಿಕ ಕಳಕಳಿಯ ದ್ಯೋತಕವಾಗಿ ಬಂಗಾರಪ್ಪನವರ ಮೂಲಕ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಗಡಿ ಗ್ರಾಮಗಳಿಗೆ ಸಾವಿರಾರು ಕ್ವಿಂಟಾಲಲ್ಭತ್ತ ಹಾಗೂ ಜೋಳದ ಬೀಜಗಳನ್ನು ಉಚಿತವಾಗಿ ನೀಡಿದ್ದು, ಬರಗಾಲದಲ್ಲಿ ಇದ್ದವರಿಗೆ ಪೂರ್ಣವಾಗಿ ಕೈ ಹಿಡಿಯಲು ಸಾಧ್ಯವಾಗದಿದ್ದರೂ ಅಳಿಲು ಸೇವೆಯಿಂದ ಬಂಗಾರಪ್ಪನವರ ಹೆಸರನ್ನು ಉತ್ತುಂಗಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಂಗಾರಪ್ಪನವರ ಅಗಲಿಕೆಯಿಂದ ಘಾಸಿಗೊಳಗಾದ ಶಂಕುತಲಮ್ಮ. ಪತಿಯ ಅಗಲಿಕೆಯ ನಡುವೆಯೂ ಬಂಗಾರಪ್ಪನವರ ಕಡೇ ಆಸೆ ಪುತ್ರ ಮಧು ಬಂಗಾರಪ್ಪನವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಲ್ಲಿ ಮುಂಚೂಣಿ ವಹಿಸಿದ್ದರು.
ಪತಿಯ ಜೀವನದ ಕಡೇ ಚುನಾವಣೆಯಲ್ಲಿ ಆದ ಸೋಲನ್ನು ಗೆಲುವಾಗಿ ಪರಿವರ್ತಿಸಿದ್ದಲ್ಲದೆ, ಮಗಳ ಚುನಾವಣೆ ಸ್ಪರ್ಧೆಗೆ ಅನಾರೋಗ್ಯದ ನಡುವೆಯೂ ನೇತೃತ್ವ ವಹಿಸಿ, ಚುನಾವಣೆ ಎದುರಿಸಿ, ಮತವನ್ನೂ ಹಾಕಿ ತಾವು ಮರೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.