ಶಿವಮೊಗ್ಗ

ಹೆಣ್ಣು ಸಮಾಜದ ಕಣ್ಣು: ಹನುಮಂತಪ್ಪ

Published On :

ಜೋಗ್‌ಫಾಲ್ಸ್:  ಹೆಣ್ಣು ಸಮಾಜದ ಕಣ್ಣು. ಸಾಮಾಜಿಕ, ರಾಜಕೀಯ, ವಿಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ, ಸಾಮರ್ಥ್ಯ ಮತ್ತು ಪ್ರಭಾವ ಇದೆ ಎಂದು ಕೆಪಿಸಿ ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ತಿಳಿಸಿದರು. ಅವರು ಶರಾವತಿ ಮಹಿಳಾ ಉದ್ಯೋಗಿಗಳ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಇಂದು ಮಹಿಳೆ ಆರ್ಥಿಕ ಸ್ವಾವಲಂಬಿಯಾಗಿದ್ದಾಳೆ ಎಂದರು. ಲೆಕ್ಕಪತ್ರ ವಿಭಾಗದ ಸಹಾಯಕ ಪ್ರಧಾನ ಪ್ರಬಂಧಕ ಬಿ.ನಿಜೇಂದ್ರ, ವಾರ್ಷಿಕೋತ್ಸವ ಆಚರಣೆಗಳು ಬರೀ ವರದಿ- ವಾಚನಗಳಲ್ಲ, ಮಹಿಳೆಯರಲ್ಲಿ ಅಡಗಿರುವ ಸುಪ್ರ ಪ್ರತಿಭೆಗಳಿಗೆ ವೇದಿಕೆ ಆಗಬೇಕು ಎಂದರು. ಸಂಘದ ಅಧ್ಯಕ್ಷೆ ಶ್ವೇತಾ ವಿಜಯಕುಮಾರ್, ಇಂದು ಮಹಿಳೆಯರು ಪುರುಷರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದು, ಪುರುಷರಿಗಿಂತ ಉನ್ನತ ಮಟ್ಟಕ್ಕೆ ಬೆಳೆಯುತ್ತಿದ್ದಾಳೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚಂದ್ರಕಲಾ ಸ್ವಾಗತಿಸಿ, ಹೆಚ್.ವಿ. ಪೂರ್ಣಿಮಾ ನಿರೂಪಿಸಿದರು. ಉಷಾ ವಂದಿಸಿದರು.


ಕಲೆ ಮನರಂಜನೆಗಷ್ಟೇ ಸೀಮಿತವಾಗದಿರಲಿ: ರವಿಶಂಕರ್ ಭಟ್

ಹೊಸನಗರ: ಕಲೆ ಕೇವಲ ಮನರಂಜನೆಗೆ ಸೀಮಿತವಾಗಬಾರದು. ಜೀವನಕ್ಕೆ ಜ್ಞಾನ ಸಂದೇಶ ನೀಡುವ ಪ್ರಬಲ ಮಾಧ್ಯಮವಾಗಿರಬೇಕು ಎಂದು ಕಲಾವಿದ ರವಿಶಂಕರ್ ಭಟ್ ಸಾಗರ್ ಹೇಳಿದರು.
ಮಾರುತಿಪುರ ಶ್ರೀರಾಮಾರ್ಪಣ ಕಲಾ ವೇದಿಕೆ ಗುಬ್ಬಿಗ ಕಲಾ ಕೇಂದ್ರದಲ್ಲಿ ಏರ್ಪಡಿಸಿದ್ದ ಯಕ್ಷ ಕಿರೀಟ ಪೂಜೆ ರಾಮಾಯಣ ಕಥಾ ತಾಳ ಮದ್ದಲೆ ಸಮಾರೋಪ ಮತ್ತು ಯಕ್ಷಗಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯರು ಕಂಡುಕೊಂಡ ಜೀವನಶೈಲಿಯಲ್ಲಿಯೂ, ಇಲ್ಲಿನ ಕಲೆಗಳಲ್ಲಿಯೂ ಆನಂದ, ನೆಮ್ಮದಿ ನೀಡುವ ಪ್ರಮುಖ ಅಂಶಗಳು ಅಡಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯಂತೆ ನಿತ್ಯ ಸಂತೋಷ, ನೆಮ್ಮದಿ ಹುಡುಕಿಹೋಗುವ ಸ್ಥಿತಿ ಎಂದಿಗೂ ನಮಗಿಲ್ಲ. ನಮ್ಮ ಬದುಕು ಅಂತಹ ಶ್ರೇಷ್ಠ ಕಲೆಗಳಿಂದಾವೃತವಾಗಿದೆ ಎಂದರು.
ಯಕ್ಷಗಾನ ಪ್ರೋತ್ಸಾಹಕ ಎಂ.ಎಲ್. ರಾಮರಾವ್ ಮಾತನಾಡಿದರು. ಸುಬ್ರಾಯ ಹೆಗಡೆ, ಜಿ.ಎನ್. ಶ್ರೀಧರ ಇದ್ದರು. ಶ್ರೀರಾಮಾರ್ಪಣ ಕಲಾ ವೇದಿಕೆಯ ಅಧ್ಯಕ್ಷ ಎಂ.ಜಿ. ಲಕ್ಷ್ಮಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಎಂ.ಎಸ್. ವಿಶ್ವೇಶ್ವರ ಸ್ವಾಗತಿಸಿ, ಗಣೇಶ್ ಹುಲಿಮನೆ ವಂದಿಸಿದರು. ನಂತರ ಭಾಗವತ ಸೂರ್ಯನಾರಾಯಣ, ಎಂ.ಎಂ. ರಾಘವೇಂದ್ರ, ಎಂ.ಎಸ್. ಶ್ರೀನಾಥ, ಅಮಿತ್‌ಕುಮಾರ್ ಹಾಗೂ ಸೃಜನ್ ಗಣೇಶ್ ಹಿಮ್ಮೇಳದಲ್ಲಿ ರಾವಣ ಮೋಕ್ಷ ತಾಳ ಮದ್ದಲೆ, ವಿಶ್ವ ಮಾತೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಅಶೋಕಕುಮಾರ್, ರವಿಶಂಕರ್, ವಿಶ್ವ, ರಮೇಶ್ ಹೆಗಡೆ, ಎಂ.ಜಿ. ಲಕ್ಷ್ಮಣ, ಆರ್.ಜಿ. ಹೆಗಡೆ, ಅರ್ಚನಾ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.