ಭಜ ಗೋವಿಂದಂ ಅಖಿಲಭಾರತ ಮಟ್ಟದ ಸ್ಪರ್ಧೆ
ಹೊಸನಗರ: ಶಂಕರ ತತ್ವ ಪ್ರಚಾರವೂ ಸೇರಿದಂತೆ ಶಂಕರಾಚಾರ್ಯರ ಜೀವನ ವಿಶೇಷ ಅನಾವರಣಗೊಳಿಸುವ ಶಂಕರ ಪಂಚಮಿ ಕಾರ್ಯಕ್ರಮ ಮೇ 3 ರಿಂದ 7 ರವರೆಗೆ ರಾಮಚಂದ್ರಾಪುರಮಠದ ಶಾಖಾ ಮಠ ಸಿದ್ಧಾಪುರ ಭಾನ್ಕುಳಿಯಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಭಜ ಗೋವಿಂದಮ್ ಅಖಿಲ ಭಾರತಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ ಹೇಳಿದರು.
ಈ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಶಂಕರಪಂಚಮಿ ಅಂಗವಾಗಿ ಅತಿರುದ್ರಮಹಾಯಾಗ, ಚತುರ್ವೇದ ಪಾರಾಯಣ, ಶಂಕರ ಗುರುಪೂಜಾ, ಶತರುದ್ರ ಪಾರಾಯಣ, ಮಾತೃವೃಂದದವರಿಂದ ಲಲಿತಾ ಸಹಸ್ರನಾಮ ಪೂರ್ವಕ ಕುಂಕುಮಾರ್ಚನೆ, ಕಾಮಧೇನು ಹವನ, ಗೋಪೂಜೆ ನೆರವೇರಲಿದೆ.
ಪುರಪ್ರವೇಶ: ಮೇ 3 ರಂದು ಗುರುಗಳ ಪುರಪ್ರವೇಶ ಹಾಗೂ ಶಂಕರಗುರುಪೂಜಾದಿಂದ ವಿಧ್ಯುಕ್ತವಾಗಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮೇ 4ರಂದು ವಾರ್ಷಿಕ ಧಾರ್ಮಿಕ ಕಾರ್ಯಕ್ರಮ, ಕಾಮಧೇನು ಹವನ, ಸ್ಪರ್ಧಾಶಂಕರ, ಪುಸ್ತಕ ಶಂಕರ ಉದ್ಘಾಟನೆ ನಡೆಯಲಿದೆ.
ಈಗಾಗಲೇ ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿ ಭಜಗೋವಿಂದಂ ಕಂಠಸ್ಥ ಮಾಡಿ ವಿವಿಧ ಕಡೆಗಳಲ್ಲಿ ನಡೆಸಿರುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಂತಿಮ ಸುತ್ತಿನ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ.
ಮೇ 5 ರಂದು ಸೂತ್ರ ಸಂಗಮ ಹಾಗೂ ಕನ್ಯಾಸಂಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಮೇ 6 ರಂದು ಅತಿರುದ್ರಯಾಗದ ಪೂರ್ವಾಂಗ ಕಾರ್ಯಕ್ರಮ, ಶತಕಂಠಘೋಷ, ಉದಕಶಾಂತಿ, ಪ್ರತಿಸರಬಂಧ ಪಾರಾಯಣ ಹಾಗೂ ಶಂಕಾರ್ಪಿತ ಕಾರ್ಯಕ್ರಮ ನಡೆಯಲಿದೆ. ಮೇ 7 ರಂದು ಅತಿರುದ್ರ ಮಹಾಯಾಗ ಸಂಪನ್ನಗೊಳ್ಳಲಿದೆ.
ಶಂಕರ ಕಿಂಕರ: ಅಲ್ಲದೆ ಶಂಕರ ತತ್ವ ಸಾಹಿತ್ಯದ ಕುರಿತು ಕೆಲಸ ಮಾಡಿರುವ ವಿದ್ವಾನ್ ಭುವನಗಿರಿ ಅನಂತಶರ್ಮರಿಗೆ ಶಂಕರಕಿಂಕರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಿತ್ಯ ಸಂಜೆ 7.30 ರಿಂದ ಕಲಾ ಶಂಕರ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ವಿವಿಧ ಕಲಾ ಪ್ರಕಾರಗಳ ಮೂಲಕ ಶಂಕರ ತತ್ವದ ಕುರಿತು ಕಾರ್ಯಕ್ರಮ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಭಜಗೋವಿಂದಮ ಕುರಿತಾದ ಅನುಪಮ ವಿಶೇಷ ಪ್ರವಚನದ ವಿಶೇಷಾನುಗ್ರಹವನ್ನು ಶ್ರೀರಾಘವೇಶ್ವರಭಾರತೀ ಶ್ರೀಗಳವರು ನಿತ್ಯ ನೀಡಲಿದ್ದಾರೆ ಎಂದರು. ಶಂಕರಕಿಂಕರವೃಂದದ ಆರ್.ಎಸ್. ಹೆಗಡೆ, ಗೌರವ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಜಗದೀಶ್ ಶರ್ಮಾ, ಎಂ.ವಿ. ಹೆಗಡೆ ಸಿದ್ಧಾಪುರ, ಮಂಡಲ ಉಸ್ತುವಾರಿ ರಮೇಶ್ ಹೆಗಡೆ ಗುಂಡೂಮನೆ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

