ಶಿವಮೊಗ್ಗ

ಗಾಯತ್ರಿ ಸದಸ್ಯತ್ವ ಅನರ್ಹಕ್ಕೆ ಆಗ್ರಹ

Published On :

ಶಿವಮೊಗ್ಗ: ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ಜಿಪಂ ಉಪಾಧ್ಯಕ್ಷರಾಗಿರುವ ಗಾಯತ್ರಿ ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾ ಬಿಜೆಪಿಯು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಪತ್ರ ಸಲ್ಲಿಸಿದೆ.
2010ನೇ ಇಸವಿಯಲ್ಲಿ ನಡೆದ ಜಿಪಂ ಸದಸ್ಯರ ಚುನಾವಣೆಯಲ್ಲಿ ಗಾಯತ್ರಿ ಅವರು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಶಿವಮೊಗ್ಗ ತಾಲೂಕಿನ ಹೊಳಲೂರು ಜಿಪಂ ಕ್ಷೇತ್ರದಿಂದ ಚುನಾಯಿತರಾದ ಸದಸ್ಯರಾಗಿರುತ್ತಾರೆ.
ಜು. 18ರಂದು ಶಿವಮೊಗ್ಗ ಜಿಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ 3ನೇ ಅವಧಿಗಾಗಿ ಚುನಾವಣೆ ನಡೆದ ಸಂದರ್ಭದಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಚ್. ಈಶ್ವರಪ್ಪ ಅವರನ್ನು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಬಿ. ಅಶೋಕ ಅವರನ್ನು ಅಭ್ಯರ್ಥಿಗಳನ್ನಾಗಿ ಸ್ಪರ್ಧಿಸಲು ಪಕ್ಷವು ತೀರ್ಮಾನಿಸಿತ್ತು. ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಲು ಪಕ್ಷವು ಸದಸ್ಯರಿಗೂ ವಿಪ್ ಜಾರಿಗೊಳಿಸಿತ್ತು. ಗಾಯಿತ್ರಿಯವರಿಗೂ ವಿಪ್ ಜಾರಿಯಾಗಿರುತ್ತೆ ಎಂದು ಬಿಜೆಪಿ ಪತ್ರದಲ್ಲಿ ತಿಳಿಸಿದೆ.
ಆದರೆ, ಗಾಯತ್ರಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಾರೆ. ಅಲ್ಲದೆ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿ ನಿಯಮ ಉಲ್ಲಂಘಿಸಿದ್ದಾರೆ. ಈ ನಡವಳಿಕೆಯು ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಕಾಯ್ದೆ 1987ರ ಸೆಕ್ಷನ್ 3(1)(ಬಿ) ಪ್ರಕಾರ ಜಿಪಂನ ಸದಸ್ಯತ್ವದ ಅನರ್ಹಗೊಳ್ಳಲು ಯೋಗ್ಯ ಪ್ರಕರಣವಾಗಿದೆ.
ಆದ್ದರಿಂದ, ಗಾಯತ್ರಿ ಅವರನ್ನು ಶಿವಮೊಗ್ಗ ಜಿಪಂ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಆದೇಶ ಹೊರಡಿಸಲು ಪ್ರಾರ್ಥಿಸುವುದಾಗಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.