ಶಿವಮೊಗ್ಗ

ಆಶ್ರಮದ ಮಹಾದ್ವಾರಗಳಿಗೆ ಬಣ್ಣ: ಪ್ರತಿಭಟನೆ

Published On :

ಶಿಕಾರಿಪುರ: ಶಿವಮೊಗ್ಗ ನಗರ ಸಮೀಪದ ಕಲ್ಲಗಂಗೂರು ಗ್ರಾಮದಲ್ಲಿನ ರಾಮಕೃಷ್ಣ ಆಶ್ರಮದ ಮಹಾದ್ವಾರಗಳಿಗೆ ಬಣ್ಣ ಬಳಿದಿರುವ ಕಿಡಿಗೇಡಿಗಳ ಕೃತ್ಯ ಖಂಡಿಸಿ ಶಿಕಾರಿಪುರ ತಾಲೂಕು ಎಬಿವಿಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಗಳಿಗೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು,
ಈ ಸಂದರ್ಬದಲ್ಲಿ ಎಬಿವಿಪಿ ಉಪಾಧ್ಯಕ್ಷ ವೀರಣ್ಣಗೌಡ ಮಾತನಾಡಿ, ಶಿವಮೊಗ್ಗದ ಶ್ರೀ ರಾಮಕೃಷ್ಣ ಆಶ್ರಮ ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿಗೊಂಡು ಜಿಲ್ಲೆಯಲ್ಲಿ ಸರ್ವ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದೆ.
ಇದುವರೆಗೂ ವಿದ್ಯಾರ್ಥಿ ಜಾಗೃತಿಯ ಹಲವು ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಿ ಯುವ ಪೀಳಿಗೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದರು. ಜಾತಿ ಪಂಗಡಗಳಿಗೆ ಸೀಮಿತವಾಗದ ಆಶ್ರಮ ಸರ್ವ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿದೆ. ಹಾಗೂ ಸಂವಿಧಾನದ ಧ್ಯೇಯಗಳನ್ನು ನಿಸ್ವಾರ್ಥವಾಗಿ ಪಾಲಿಸುತ್ತಿದೆ ಎಂದ ಅವರು ಇಂತಹ ಪ್ರಬುದ್ಧ ಧ್ಯೇಯವನ್ನು ಹೊಂದಿರುವ ಆಶ್ರಮದ ಮಹಾದ್ವಾರಗಳಿಗೆ ಕಿಡಿಗೇಡಿಗಳು ಏಕಾಏಕಿ ಬಣ್ಣ ಬಳಿಯುವ ಮೂಲಕ ಆಶ್ರಮಕ್ಕೆ ಆಗಮಿಸುವ ಎಲ್ಲ ವರ್ಗದ ಜನತೆ, ಯುವಕರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾರೆ ಎಂದರು.
ಇಂತಹ ಕೃತ್ಯದ ಮೂಲಕ ಸಮಾಜದಲ್ಲಿ ಶಾಂತಿ ಭಂಗಕ್ಕೆ ಯತ್ನಿಸುವ ಕಿಡಿಗೇಡಿಗಳನ್ನು ಈ ಕೂಡಲೇ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮದ ಮೂಲಕ ಆಶ್ರಮದಲ್ಲಿ ನಂಬಿಕೆಯಿರಿಸಿಕೊಂಡಿರುವ ಸಹಸ್ರಾರು  ಶ್ರದ್ಧೆಯ ಮನಸ್ಸುಗಳನ್ನು ಸಮಾಧಾನಿಸಿ ಶಾಂತ ವಾತಾವರಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಅವರು, ಭವಿಷ್ಯದಲ್ಲಿ ಶಾಂತಿ ಭಂಗದ ಇಂತಹ ಕೃತ್ಯ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಸಂದರ್ಬದಲ್ಲಿ ಎಬಿವಿಪಿ ಸಹಕಾರ್ಯದರ್ಶಿ ಬೆಣ್ಣೆ ಪ್ರವೀಣ್, ಮಂಜುನಾಥ್, ಪ್ರಮುಖರಾದ ಮೋಹನ್, ಸಂತೋಷ್, ಶ್ರೀಕಾಂತ್, ಶ್ರವಣಕುಮಾರ್, ಗೋಪಾಲ್, ಜಗದೀಶ್, ಸಂಕೇತ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.