ಶಿವಮೊಗ್ಗ

ಹಾಸ್ಯಪ್ರಜ್ಞೆಯಿಂದ ನೆಮ್ಮದಿಯ ಜೀವನ ಸಾಧ್ಯ

Published On :

ಕ.ಪ್ರ.ವಾರ್ತೆ,ಭದ್ರಾವತಿ,ಫೆ.3
ಹಾಸ್ಯ ಎಂಬ ಎಣ್ಣೆಯನ್ನು ಲೇಪನ ಮಾಡಿಕೊಂಡಾಗ ಜೀವನದಲ್ಲಿನ ಸಮಸ್ಯೆ ಎಂಬ ಹಲಸಿನ ಹಣ್ಣನ್ನು ಸುಲಭವಾಗಿ ಬಿಡಿಸಬಹುದು ಎಂದು ದಾವಣಗೆರೆಯ ಸತ್ಯಸಾಯಿ ವಿದ್ಯಾನಿಕೇತನದ ಪ್ರಾಂಶುಪಾಲ ಜಗನ್ನಾಥ ನಾಡಿಗೇರ್ ತಿಳಿಸಿದರು.
ಭದ್ರಾವತಿಯ ರೋಟರಿ ಕ್ಲಬ್ ಭಾನುವಾರ ಸಂಜೆ ರೋಟರಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಎ ಫ್ರೆಂಡ್ ಆಫ್ ರೋಟರಿ ಕಾರ್ಯಕ್ರಮದಲ್ಲಿ 'ಪ್ರೇಮ, ನಗು ಮತ್ತು ಜೀವನ' ಎಂಬ ವಿಷಯ ಕುರಿತು ಮಾತನಾಡಿದ ಅವರು, ನಗುನಗುತ್ತಾ ಜೀವನ ಸಾಗಿದಾಗ ಸಮಸ್ಯೆಗಳ ಜಟಿಲತೆ ಕಡಮೆ ಆಗುವುದು ಎಂದರು.
ವಿಜ್ಞಾನದಲ್ಲಿ ಸಿಗದ ಪರಿಹಾರಗಳು ಹೃದಯದ ಭಾವನೆಗಳಲ್ಲಿ ಕೆಲವೊಮ್ಮೆ ಸಿಗುತ್ತವೆ ಎಂಬುದನ್ನು ನಾವು ಮರೆತುಬಿಟ್ಟಿದ್ದೇವೆ. ಸಂಬಂಧಗಳನ್ನು ಪ್ರೀತಿಸಿ ವಸ್ತುಗಳನ್ನು ಉಪಯೋಗಿಸುವ ಬದಲು ಸಂಬಂಧಗಳನ್ನು ಉಪಯೋಗಿಸಿ ವಸ್ತುಗಳನ್ನು ಪ್ರೀತಿಸತೊಡಗಿರುವುದು ಒಂದು ಸಾಮಾಜಿಕ ದುರಂತವಾಗಿದೆ. ಒತ್ತಡಮಯ ಜೀವನಶೈಲಿಯ ಕಾರಣ ಮಕ್ಕಳಿಗೆ ಉತ್ತಮ ಆದರ್ಶ ಪೋಷಕರಿಂದ ದೊರಕುತ್ತಿಲ್ಲ. ಹದಗೆಡುತ್ತಿರುವ ರಾಜಕೀಯ ವ್ಯವಸ್ಥೆ, ಶಿಥಿಲವಾಗುತ್ತಿರುವ ಶೈಕ್ಷಣಿಕ ವ್ಯವಸ್ಥೆ ಸಮಾಜವನ್ನು ಮತ್ತಷ್ಟು ಕೆಡಿಸಿವೆ. ನಾವು ಪದೇಪದೇ ಹೇಳುವ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಜ್ಞಾಪ್ರಭುತ್ವ ವ್ಯವಸ್ಥೆಯಾದಾಗ ಮಾತ್ರ ಎಲ್ಲವೂ ಸರಿಹೋಗುತ್ತದೆ ಎಂದು ಅವರು ಒತ್ತಿಹೇಳಿದರು.
ಸಮುದಾಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಸ್. ಶೈಲೇಂದ್ರ, ಕೇಶವಮೂರ್ತಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ಆರ್.ಸಿ. ಬೆಂಗಳೂರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಪ್ರಭಾಕರ ಬೀರಯ್ಯ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.