ನಿರುಪಯುಕ್ತವಾದ ಸುಲಭ ಶೌಚಾಲಯ
ಸೊರಬ: ಪಟ್ಟಣದ ಕಾನಕೇರಿ ಬಡಾವಣೆಯ ಸಾರ್ವಜನಿಕ ಗ್ರಂಥಾಲಯದ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯ ಕಳೆದ 7 ವರ್ಷಗಳಿಂದ ಪಾಳು ಬಿದ್ದಿದ್ದು, ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
2007ರಲ್ಲಿ ಕುಮಾರ್ ಬಂಗಾರಪ್ಪ ಸಚಿವರಾಗಿದ್ದ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ 5 ಲಕ್ಷ ವೆಚ್ಚದಲ್ಲಿ ನಿರ್ಮಲ ನಗರ ಯೋಜನೆಯಡಿಯಲ್ಲಿ ನಿರ್ಮಾಣವಾದ ಹೈಟೆಕ್ ಸುಲಭ ಶೌಚಾಲಯ ಸಾರ್ವಜನಿಕ ಕೋರಿಕೆಯ ಮೇರೆಗೆ ಮತ್ತು ಸರ್ಕಾರಿ ಗ್ರಂಥಾಲಯಕ್ಕೆ ಅನುಕೂಲವಾಗಲಿ ಎಂದೇ ಈ ಜಾಗದಲ್ಲಿ ನಿರ್ಮಿಸಿ ಉದ್ಘಾಟಿಸಲಾಗಿದೆ.
ಅಕ್ರಮ ಚಟುವಟಿಕೆ: ಉದ್ಘಾಟನೆಯಾದ ಕೆಲವು ದಿನಗಳು ಸಾರ್ವಜನಿಕರು ಇದನ್ನು ಉಪಯೋಗಿಸಿದರು. ನಂತರದ ದಿನಗಳಲ್ಲಿ ಶೌಚಾಲಯ ಸಾರ್ವಜನಿಕ ಸೇವೆಗೆ ಲಭ್ಯವಾಗದೆ ಸದಾ ಬೀಗ ಹಾಕಿರುತ್ತಿತ್ತು. ಆದರೆ, ಕೆಲವರು ಹೈಟೆಕ್ ಶೌಚಾಲಯ ಕಟ್ಟಡದ ಬೀಗ ಮುರಿದು ಅಕ್ರಮ ಚಟುವಟಿಕೆಗಳ ಅಡ್ಡೆಯನ್ನಾಗಿಸಿಕೊಂಡಿದ್ದಾರೆ ಎನ್ನುವ ದೂರು ಸ್ಥಳೀಯರಿಂದ ಕೇಳಿ ಬಂದಿದೆ.
ಶೌಚಾಲಯ ಕಟ್ಟಡದ ಒಳ ಹೊಕ್ಕರೆ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಕಸ- ಕಡ್ಡಿ, ಮಳೆ ನೀರಿನಿಂದಾಗಿ ಕೊಳೆತು ಹುಳು ಆಡುತ್ತಿವೆ. ದುರ್ವಾಸನೆಯಿಂದಾಗಿ ಸಾರ್ವಜನಿರು ಪಕ್ಕದಲ್ಲೂ ನಿಲ್ಲದೆ ಮೂಗು ಮುಚ್ಚಿಕೊಳ್ಳುವಂತಾಗಿದೆ. ಪಟ್ಟಣದಲ್ಲಿರುವ ಎರಡು ಸಾರ್ವಜನಿಕ ಶೌಚಾಲಯಗಳಲ್ಲಿ ಇದೂ ಒಂದಾಗಿದ್ದು, ಕತ್ತಲಾಗುತ್ತಿದ್ದಂತೆ ಆಕ್ರಮಗಳ ಆಗರವಾಗಿ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ದೂರು ಬಂದಿದೆ.
ಶೌಚಾಲಯ ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪಟ್ಟಣ ಪಂಚಾಯಿತಿಯದು. ಪ್ರರ್ತಿವರ್ಷ ಪಟ್ಟಣದ ನೈರ್ಮಲ್ಯಕ್ಕಾಗಿ ಲಕ್ಷಾಂತರ ರುಪಾಯಿ ಹಣ ಬಿಡುಗಡೆಯಾಗುತ್ತಿದೆ. ಎಡ ಭಾಗದಲ್ಲಿ ಗ್ರಂಥಾಲಯ, ಬಲ ಭಾಗದಲ್ಲಿ ಸ್ವಾಮಿ ವಿವೇಕಾನಂದ ಶಾಲೆ ಇದ್ದು, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಶೌಚಾಲಯದ ಆಜುಬಾಜು ಆಟವಾಡುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗಗಳೂ ತಗಲುವ ಭೀತಿ ಇದ್ದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಕ್ಷಣ ಇತ್ತ ಕಡೆ ಗಮನಹರಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬುದು ಸಾಮಾಜಿಕ ಹೋರಾಟಗಾರರ ಎಚ್ಚರಿಕೆ.
- ಶ್ರೀಪಾದ ಬಿಚ್ಚುಗತ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

