ಶಿವಮೊಗ್ಗ

ಗುಣಮಟ್ಟದ ಶಿಕ್ಷಣ; ಅಗತ್ಯ ಪಠ್ಯಕ್ರಮಕ್ಕೆ ಚಿಂತನೆ

Published On :

ಕ.ಪ್ರ.ವಾರ್ತೆ, ಸೊರಬ, ಫೆ. 5
ಶಿಕ್ಷಣ ಕ್ಷೇತ್ರದ ಭೌತಿಕ ಉನ್ನತೀಕರಣದೊಂದಿಗೆ, ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಿರುವ ಪಠ್ಯಕ್ರಮಗಳ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಪಟ್ಟಣಕ್ಕೆ ಬುಧವಾರ ಸಂಜೆ ಆಗಮಿಸಿ, ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಮಟ್ಟದ ಸಭೆ ಹಾಗೂ ಕಾಂಗ್ರೆಸ್ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸೇವೆಗೆ ಅವಕಾಶ:  ಪ್ರಸ್ತುತ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಭೌತಿಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ, ಶಿಕ್ಷಕರನ್ನು ಅನಿವಾರ್ಯ ತೊಡಗಿಸುವ ಅನಿವಾರ್ಯತೆ ಇದೆ. ದೇಶದ ಆರ್ಥಿಕ ಸ್ಥಿತಿ ಗತಿಗಳನ್ನು ಅವಲೋಕಿಸಿ ಯೋಜಿಸುವಲ್ಲಿ ಇಂತಹ ಒತ್ತಡ, ಪಾಲ್ಗೊಳ್ಳುವಿಕೆ ತೀರಾ ಅನಿವಾರ್ಯ. ಈ ನಿಟ್ಟಿನಲ್ಲಿ ಕಾರ್ಯ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಶಿಕ್ಷಕರ ಕೊರತೆ ನೀಗಿಸುವಲ್ಲಿ ಸರ್ಕಾರ ತಾತ್ಕಾಲಿಕ ಶಿಕ್ಷಕರ ನೇಮಕಾತಿ ನಡೆಸಿ ಸ್ವಲ್ಪವಾದರೂ ಒತ್ತಡ ತಗ್ಗಿಸಿದೆ.
ಶೈಕ್ಷಣಿಕ ಅವಧಿಯಲ್ಲಿ ನಿವೃತ್ತರಾದ ಶಿಕ್ಷಕರಿಗೆ ಶೈಕ್ಷಣಿಕ ಅವಧಿಯ ಮುಕ್ತಾಯದವರೆಗೂ ಸೇವೆ ಸಲ್ಲಿಸಲು ಅವಕಾಶ ನೀಡಿದೆ ಎಂದರು.
ಟೂಲ್ಕಿಟ್:  ಈ ವರ್ಷದ ಮಕ್ಕಳಿಗೆ ಉಚಿತ ಸೈಕಲ್ ವಿತರಿಸುವಲ್ಲಿ ವಿಳಂಬ ಆಗಿರುವುದಕ್ಕೆ ಕಾರಣ ಹಿಂದಿನ ಸರ್ಕಾರ, ಮುಂದಿನ ಸಾಲಿನಲ್ಲಿ ಹಾಗಾಗುವುದಿಲ್ಲ. ಶಾಲಾ ಆರಂಭವಾಗುತ್ತಿದ್ದಂತೆಯೆ ಸೈಕಲ್ ವಿತರಿಸುವ ಕುರಿತು ಈಗಾಗಲೆ ಟೆಂಡರ್ ಕರೆದು ಸಮರ್ಪಕ ಅವಧಿಯಲ್ಲಿ ಒದಗಿಸಿಕೊಡಲು ಸೂಚಿಸಿದೆ. ಇದರೊಂದಿಗೆ ಸೈಕಲ್ ನಿರ್ವಹಣೆಗೆ ಅಗತ್ಯ ಟೂಲ್ ಕಿಟ್ ಹಾಗೂ 3 ತಿಂಗಳಿಗೊಮ್ಮೆ ಸರ್ವೀಸ್ ಮಾಡಿಕೊಡುವಂತೆ ಹೇಳಿದೆ ಎಂದರು. ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ ರಾಜ್ಯದ ಎಲ್ಲ ಎಂಪಿ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ನಮಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಕುಮಾರ ಬಂಗಾರಪ್ಪ, ತಬಲಿ ಬಂಗಾರಪ್ಪ, ಕೆ.ಮಂಜುನಾಥ್, ಕೆ.ಶಿವಾನಂದಪ್ಪ, ಯೂಸೂಫ್ ಸಾಬ್, ಎಂ.ಡಿ.ಉಮೇಶ್, ಕೆ.ಅಜ್ಜಪ್ಪ, ಮಲ್ಲಿಕಾರ್ಜುನ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.