ಶಿವಮೊಗ್ಗ

ಲಾಡ್ಜ್‌ನಲ್ಲಿ ಅವ್ಯವಹಾರ: ನಾಲ್ವರ ಬಂಧನ, ಇಬ್ಬರು ಪರಾರಿ

Published On :

ಶಿವಮೊಗ್ಗ: ವಾಮಾಚಾರದ ಮೂಲಕ ಹಣ ವರ್ಗಾವಣೆ ಮಾಡಿಕೊಡುವುದಾಗಿ ನಂಬಿಸಿ ಕಾರ್ಯಾಚರಣೆಗೆ ಮುಂದಾಗಿ ವಿಫಲವಾಗಿದ್ದ ತಂಡ ಗುರುವಾರ ಪೊಲೀಸರ ಅತಿಥಿಯಾಗಿದೆ.
ನಗರ ಎಲ್‌ಎಲ್‌ಆರ್ ರಸ್ತೆಯ ಸುಭದ್ರ ಕಂಫರ್ಟ್ಸ್ ಲಾಡ್ಜ್‌ನಲ್ಲಿ ಅವ್ಯವಹಾರ ನಡೆಯುತ್ತಿದ್ದ ಮಾಹಿತಿ ಹಿನ್ನೆಲೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದು, ಬೆಂಗಳೂರಿನ ಈಶ್ವರ (35), ಪೂನಾ ನಿವಾಸಿ ಲೂಧಿಸಿಂಗ್ (46), ಚಿತ್ತೂರಿನ ಸುಬ್ರಹ್ಮಣ್ಯ (40), ಕರೀಂನಗರದ ಶಂಕರ ರೆಡ್ಡಿ (45) ಬಂಧಿತರಾಗಿದ್ದಾರೆ. ಉಳಿದಿಬ್ಬರು ಪರಾರಿಯಾಗಿದ್ದಾರೆ.  ಡಾ. ರಸೂಲ್ ಕಲ್ಕುಡ ಸ್ಥಳದಲ್ಲಿದ್ದು, ಅವರೇ ದೂರುದಾರರಾಗಿದ್ದಾರೆ. ವಂಚಕರಿಂದ ಎರಡು ಕಾರು, ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ವಂಚನೆ ನಡೆಸುತ್ತಿದ್ದ ಈ ತಂಡ ಹೆಬ್ರಿ ಬಳಿಯ ಫಾರಂ ಹೌಸ್ ಒಂದರಲ್ಲಿ ಕಾರ್ಯಾಚರಣೆಗೆ ಮುಂದಾಗಿ ವಿಫಲವಾಗಿತ್ತು. ಈ ಹಿನ್ನೆಲೆ ವಂಚನೆ ನಡೆಸಿದವರನ್ನು ಹೋಟೆಲ್ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು ಎಂದೂ ಹೇಳಲಾಗುತ್ತಿದೆ. ಈ ತಂಡ ಬೃಹತ್ ಮೊತ್ತದ ಹಣವನ್ನು ಧನಿಕರು ಅಪೇಕ್ಷೆ ಪಡುವಲ್ಲಿಗೆ ಮಾಯಾರೂಪದಲ್ಲಿ ಸಾಗಿಸುವ ಕಾರ್ಯಾಚರಣೆ ಮಾಡುವುದಾಗಿ ನಂಬಿಸಿ ವಂಚಿಸುತ್ತಿತ್ತು. ಇದನ್ನು ತಿಳಿದ ಕಪ್ಪುಹಣ ಹೊಂದಿದ್ದ ವ್ಯಕ್ತಿಯೊಬ್ಬರು ಹಣ ವರ್ಗಾಯಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ಬೇಡಿಕೆ: ಆರಂಭದಲ್ಲಿ ಪರೀಕ್ಷೆ ನಡೆಸಲು 1.50 ಲಕ್ಷ ವರ್ಗಾಯಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ತಂಡ ಆ ಹಣ ಮಾಯಾರೂಪದಲ್ಲಿ ವರ್ಗಾಯಿಸುವಲ್ಲಿ ವಿಫಲವಾಗಿದ್ದು, ಹಣ ಕೊಟ್ಟವರಿಗೆ ಗೊತ್ತಾಗಿದೆ. ಅವರನ್ನು ಶಿವಮೊಗ್ಗದ ಲಾಡ್ಜ್‌ಗೆ ಕರೆತಂದು ಒತ್ತೆಯಿಟ್ಟುಕೊಳ್ಳಲಾಗಿತ್ತು. ಪೊಲೀಸರು ಸ್ಥಳಕ್ಕಾಗಿಸುವ ಮೊದಲೇ ಮಾಧ್ಯಮದವರು ಅಲ್ಲಿದ್ದರು. ಕ್ಯಾಮರಾ, ಪೊಲೀಸರನ್ನು ಒಟ್ಟಿಗೆ ಕಂಡ ಆರೋಪಿಗಳಾದ ಚಿಕ್ಕಮಗಳೂರಿನ ಸಂತೋಷ್ ಶೆಟ್ಟಿ, ರಾಜು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಉಳಿದವರನ್ನು ವಿಚಾರಣೆಗೊಳಪಡಿಸಿ ಬಂಧಿಸಲಾಯಿತು.
ಮನಿ ಡಬ್ಲಿಂಗ್ ದಂಧೆ, ಖೋಟಾ ನೋಟಿನ ಜಾಲದವರೆಂಬ ಮಾಹಿತಿ ಕೂಡ ಹರಿದಾಡಿತ್ತು. ಸ್ವಾಮೀಜಿಯೊಬ್ಬರೂ ಪ್ರಕರಣದ ಹಿಂದಿದ್ದಾರೆ ಎನ್ನಲಾಗುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.