ಶಿವಮೊಗ್ಗ

ಬಿಪಿಎಲ್ ಕಾರ್ಡ್ ವಿತರಣೆ ವೇಳೆ ದಾಂಧಲೆ

Published On :

ಶಿವಮೊಗ್ಗ:  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯವೈಖರಿಯಿಂದ ಬೇಸತ್ತ ಸಾರ್ವಜನಿಕರು ಇಲಾಖೆಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಸಂಗ ಸೋಮವಾರ ನಡೆಯಿತು.
ಇಲ್ಲಿನ ಗೋಪಾಳದ ಕಚೇರಿ ಮುಂದೆ ಸೇರಿದ್ದ ಜನರು ಏಕಾಏಕಿ ಆಕ್ರೋಶ ಭರಿತರಾದರು. ಕಚೇರಿಯ ಬೋರ್ಡ್ ಕಿತ್ತುಹಾಕಿದರಲ್ಲದೇ, ಅರ್ಜಿಯನ್ನು ಚೆಲ್ಲಾಪಿಲ್ಲಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಮಾಡಿದ್ದಾರೆ. ಹಣ ಕೊಟ್ಟರಷ್ಟೆ ಬಿಪಿಎಲ್ ಮಾಡಿಕೊಡುತ್ತಾರೆ. ಇಲಾಖೆಯಿಂದ ಪ್ರಿಂಟ್ ಮಾಡಿಸುವ ಬದಲು ಖಾಸಗಿಯಾಗಿ ಪ್ರಿಂಟ್ ಮಾಡಿಸುತ್ತಾರೆ. ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು, ಸಾರ್ವಜನಿಕರು ಛೀಮಾರಿ ಹಾಕುವುದನ್ನು ನೋಡುತ್ತಾ ಅಸಹಾಯಕರಾಗಿದ್ದು ಕಂಡುಬಂತು.
ಇಲಾಖೆಯ ಸಹಾಯಕ ನಿರ್ದೇಶಕ ರುದ್ರೇಶ್ ಹೇಳುವಂತೆ, ಈಗಾಗಲೇ ನಿಗದಿತ ಪ್ರಮಾಣಕ್ಕಿಂತ ಅಧಿಕ ಸಂಖ್ಯೆಯಲ್ಲಿ ಬಿಪಿಎಲ್ ಕಾರ್ಡು ವಿತರಿಸಲಾಗಿದೆ. ಸರ್ಕಾರದ ಮಾನದಂಡದ ಆಧಾರದ ಮೇಲೆ ನಮ್ಮ ಇಲಾಖೆಯಲ್ಲಿನ ಪರಿವೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಅರ್ಹರೆಂದು ಪರಿಗಣಿಸಿದಲ್ಲಿ ಅವರಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು. ನಿತ್ಯ ನೂರಾರು ಮಂದಿ ಕಾರ್ಡ್ ಕೊಡುವಂತೆ ಒತ್ತಡ ಹೇರುತ್ತಿದ್ದಾರೆ. ಸಿಬ್ಬಂದಿ ಕೊರತೆ ಇದೆ. ಕಂಪ್ಯೂಟರ್ ಸಮಸ್ಯೆ ಇದೆ. ಲಭ್ಯವಿರುವ ಸಿಬ್ಬಂದಿ ಮೇಲೆ ಒತ್ತಡವಿದೆ. ಹೀಗಾಗಿ ಅನಾನುಕೂಲವಾಗಿದೆ ಎಂದರು.


ನಾಳೆ ರಕ್ತದಾನ ಶಿಬಿರ
ಸಾಗರ: ಇಲ್ಲಿನ ಸ್ನೇಹಿತರು ಸಾಗರ ಇವರಿಂದ ಮಾರಿಕಾಂಬಾ ಜಾತ್ರೆಯ ಅಂಗವಾಗಿ ಫೆ.12ರಂದು ಸಾಗರ ಹೋಟೆಲ್ ವೃತ್ತದಲ್ಲಿರುವ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಕ್ತದಾನ ಮಾಡುವವರು ಬಸವೇಶ್ (ಮೊ.9880028486) ಅಥವಾ ದೀಪಕ್ (9448721564) ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಫೆ.19ರಿಂದ ಫೆ.26ರವರೆಗೆ ಪ್ರತಿದಿನ ಮಧ್ಯಾಹ್ನ ಉಚಿತ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.