ಶಿವಮೊಗ್ಗ

ಬಾಣದಂತೆ ತೂರಿಬಂದ ವಿದ್ಯಾರ್ಥಿಗಳ ಪ್ರಶ್ನೆ...

Published On :

ರಾಜನೀತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿಧಾನ ಪರಿಷತ್ತು ಸಭಾಪತಿ ಡಿ.ಎಚ್. ಶಂಕರಮೂರ್ತಿಯವರತ್ತ ಬಾಣದಂತೆ ಪ್ರಶ್ನೆಗಳು ತೂರಿಬಂದವು.
ಆದರೆ, ಸಮರ್ಥವಾಗಿ ಉತ್ತರ ನೀಡಿದ ಶಂಕರಮೂರ್ತಿಯವರು, ವಿದ್ಯಾರ್ಥಿಗಳ ಗೊಂದಲವನ್ನು ಪರಿಹರಿಸುವ ಪ್ರಯತ್ನ ಮಾಡಿದರು.
ಅವಕಾಶ ಬೇಕು: ಭ್ರಷ್ಟಾಚಾರದ ವಿರುದ್ಧ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿ, ಅದೇ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವುದರಿಂದ ಯುವ ಜನತೆಗೆ ಯಾವ ರೀತಿಯ ಪ್ರೇರಣೆ ನೀಡಿದಂತಾಗುತ್ತದೆ ಎಂಬ ಪತ್ರಿಕೋದ್ಯಮ ವಿದ್ಯಾರ್ಥಿ ವಿನಯ್ ಅವರ ಪ್ರಶ್ನೆಯಾಗಿತ್ತು.
ಇದಕ್ಕೆ ಉತ್ತರಿಸಿದ ಶಂಕರಮೂರ್ತಿಯವರು, ತಪ್ಪು ಯಾರೇ ಮಾಡಿದ್ದರೂ, ಅದು ತಪ್ಪೇ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು. ಜತೆಗೆ ಅವರಿಗೆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವನ್ನೂ ನೀಡಬೇಕು ಎಂದು ಹೇಳಿದರು.
ಮೀಸಲಾತಿ ಕುರಿತಂತೆ ವಿದ್ಯಾರ್ಥಿನಿ ಸಿಂಧು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಂಕರಮೂರ್ತಿಯವರು, ಹಿಂದುಳಿದಂತಹ ಸಮಾಜವನ್ನು ಮೇಲೆತ್ತಬೇಕು ಎಂಬ ಉದ್ದೇಶದಲ್ಲಿ ದೇಶದಲ್ಲಿ ಮೀಸಲಾತಿ ಜಾರಿಗೆ ತರಲಾಯಿತು. ಆದರೆ, ಇಂದಿಗೂ ಎಲ್ಲರೂ ಸಮಾನರಾಗಲು ಸಾಧ್ಯವಾಗದಿರುವುದು ಬೇಸರದ ಸಂಗತಿ. ಯುವ ಜನತೆ ಮನಸ್ಸು ಮಾಡಿದರೆ ಶೀಘ್ರವಾಗಿ ಎಲ್ಲರೂ ಸಮಾನರಾಗುವ ಮೂಲಕ ಮೀಸಲಾತಿ ಕೊನೆಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ ವಹಿಸಿದ್ದರು


.ಕೆಲವರು ರಾಜ್ಯಾಂಗದ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ನಕ್ಸಲಿಸಂ ಹೆಸರಿನಲ್ಲಿ ಪೊಲೀಸರು, ಮುಗ್ಧರನ್ನು ಕೊಲ್ಲುತ್ತಿದ್ದಾರೆ. ಬಂದೂಕು ಹಿಡಿದರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ಗೋಡೆಗಳ ಮೇಲೆ ದಾರಿತಪ್ಪಿದವರು ಬರೆಯುತ್ತಿದ್ದು, ಈ ಮೂಲಕ ನ್ಯಾಯಾಂಗವನ್ನು ಅಣಕಿಸುತ್ತಿದ್ದಾರೆ. ಅದೇ ರೀತಿ ಸರ್ವಾಧಿಕಾರಿ ಆಡಳಿತದಿಂದ ಯಾವುದೇ ದೇಶ ಉದ್ಧಾರವಾಗಿಲ್ಲ. ಇದನ್ನು ನಾವು ಇತಿಹಾಸದಿಂದ ತಿಳಿದುಕೊಳ್ಳಬಹುದು.
    ಡಿ.ಎಚ್.ಶಂಕರಮೂರ್ತಿ,    
      ಮೇಲ್ಮನೆ ಸಭಾಪತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.