'ಸಿನಿಮಾದಿಂದ ಸ್ವಸ್ಥ ಸಮಾಜ ಅಸಾಧ್ಯ'
ಶಿವಮೊಗ್ಗ: ಭ್ರಮೆಗಳನ್ನು ಕಟ್ಟಿಕೊಡುವುದರ ಮೂಲಕ ವಾಸ್ತವವನ್ನು ಮರೆಮಾಚುವ ಚಿತ್ರಗಳು ಸಮಾಜವನ್ನು ಸ್ವಾಸ್ಥ್ಯವಾಗಿ ಕಟ್ಟಲಾರದು. ದುರದೃಷ್ಟವಶಾತ್ ಇಂದಿನ ಯುವಜನತೆ ಈ ಭ್ರಮೆಗಳಿಂದಲೇ ಆಕರ್ಷಿತರಾಗಿ ನಿಜವಾದ ಸಿನಿಮಾ ಅನಂದದಿಂದ ದೂರ ಉಳಿದಿದ್ದಾರೆ ಶಿವಮೊಗ್ಗ ಜಿಲ್ಲಾ ಬೆಳ್ಳಿಮಂಡಲದ ಸಂಚಾಲಕ ವೈದ್ಯ ಹೇಳಿದರು.
ಸಮೀಪದ ಮತ್ತೋಡು ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಚಲನಚಿತ್ರ ಮತ್ತು ಯುವಜನತೆ ಕುರಿತು ಮಾತನಾಡಿದರು.
ಯಾವ ಚಿತ್ರ ನಿರಂತರವಾಗಿ ಕಾಡುತ್ತಾ, ಮನಸ್ಸನ್ನು ಆವರಿಸಿಕೊಳ್ಳುತ್ತದೋ ಅದು ನಿಜವಾಗಿಯೂ ಯಶಸ್ವೀ ಚಿತ್ರ. ಕೇವಲ ಬಾಕ್ಸ್ ಆಫೀಸ್ಗಳಿಕೆಯೊಂದೇ ಯಶಸ್ವೀ ಚಿತ್ರದ ಮಾನದಂಡ ಅಲ್ಲ ಎಂದು ಅವರು ವಿಶ್ಲೇಷಿಸಿದರು.
ಚಿತ್ರರಂಗ ಈಗ ಶತಮಾನದ ಸಂಭ್ರಮದಲ್ಲಿದೆ. ಈ ಕಾಲಘಟ್ಟದಲ್ಲಿ ನಿಂತು ಯೋಚಿಸಿದಾಗ, ಇಡೀ ಚಿತ್ರರಂಗ ಹಲವು ಮಜಲುಗಳನ್ನು ದಾಟಿ, ಕೇವಲ ಮನರಂಜನೆಗಾಗಿ ಸಿನಿಮಾ ಎಂಬ ಹಂತಕ್ಕೆ ಬಂದು ನಿಂತಿದೆ. ಈ ಹಿನ್ನೆಲೆಯಲ್ಲಿಯೇ ಈಗ ಡಬ್ಬಿಂಗ್ ಕೂಗು ಕೇಳಲಾರಂಭಿಸಿದೆ. ಡಬ್ಬಿಂಗ್ ಕೇವಲ ನಮ್ಮ ಕನ್ನಡತನ ಅಷ್ಟೇ ಅಲ್ಲ ಅನ್ಯ ಭಾಷೆಯ ಉತ್ತಮ ಚಿತ್ರಗಳ ಅವಸಾನಕ್ಕೂ ಕಾರಣವಾಗಲಿದೆ ಎಂದು ಎಚ್ಚರಿಸಿದ ಅವರು, 70ರ ದಶಕದಲ್ಲಿ ಶ್ರೀಮಂತವಾಗಿದ್ದ ಕನ್ನಡ ಚಿತ್ರ ಸಂಸ್ಕೃತಿ ಇಂದು ಆ ಶ್ರೀಮಂತಿಕೆಯನ್ನು ಕಳೆದುಕೊಂಡಿರುವುದಕ್ಕೆ ಮುಖ್ಯವಾಗಿ ಚಲನಚಿತ್ರ ಒಂದು ಕ್ರಿಯಾಶೀಲ ಮಾಧ್ಯಮ ಎಂದು ಯಾರೂ ಪರಿಗಣಿಸದಿರುವುದೇ ಕಾರಣ ಎಂದು ಪ್ರತಿಪಾದಿಸಿದರು.
ವರನಟ ಡಾ. ರಾಜ್ಕುಮಾರ್ ಅವರು ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಯಾವ ಒಂದು ಚಿತ್ರವೂ ಎ ಸರ್ಟಿಫಿಕೇಟ್ ಪಡೆದಿರಲಿಲ್ಲ. ಸಕುಟುಂಬ ಸಮೇತ ನೋಡುವಂತಹ ಚಿತ್ರಗಳಾಗಿದ್ದವಲ್ಲದೇ ಸಮಾಜಕ್ಕೂಂದು ಗಟ್ಟಿ ಸಂದೇಶವನ್ನು ನೀಡಿದ್ದವು. ಈ ಹಿನ್ನೆಲೆಯಲ್ಲಿ ಇಂದಿನ ಚಿತ್ರರಂಗದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದು ಸಾಗುತ್ತಿರುವ ದಾರಿ ಅಂಬಿಗನಿಲ್ಲದ ನಾವೆಯಂತೆ ತೇಲುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿಯ ಜಿ.ವಿಜಯಕುಮಾರ್, ಕಾರ್ಯಕ್ರಮಾಧಿಕಾರಿ ಎಂ.ಬಸವಣ್ಯಪ್ಪ, ಜಿ.ಎಸ್. ಅಶೋಕ್, ಸಹಾಯಕ ಪ್ರಾಧ್ಯಾಪಕ ಮಂಜುನಾಥ್, ಕೆ.ನಾಗೇಂದ್ರ ನಾಯಕ್, ಆರ್.ವೆಂಕಟೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

