ಮಲ್ಲಿಕಾರ್ಜುನ ಕೋಠಿ ನಿಧನ
ಭದ್ರಾವತಿ: ಸ್ವಾಂತಂತ್ರ್ಯ ಹೋರಾಟಗಾರ ಎಂ.ಮಲ್ಲಿಕಾರ್ಜುನ ಕೋಠಿ (84) ಸೋಮವಾರ ಮಧ್ಯಾಹ್ನ 1.20 ಗಂಟೆಗೆ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಮಲ್ಲಿಕಾರ್ಜುನ ಅವರು ತಮ್ಮ ನೇತ್ರಗಳನ್ನು ದಾನ ಮಾಡಿದ್ದು, ಅವರ ಮರಣದ ನಂತರ ನೇತ್ರತಜ್ಞ ಡಾ. ಕುಮಾರಸ್ವಾಮಿ ಸೋಮವಾರ ಮಧ್ಯಾಹ್ನ ಅವರ ನಿವಾಸಕ್ಕೆ ತೆರಳಿ ಮೃತರ ನೇತ್ರಗಳನ್ನು ಸಂಗ್ರಹಿಸಿದರು.
ವೀರಶೈವ ಸೇವಾ ಸಮತಿ ಅಧ್ಯಕ್ಷರಾಗಿ ದುಡಿದಿದ್ದ ಕೋಠಿ ಅಳರು ರಾಷ್ಟ್ರಪತಿಗಳ ಪ್ರಶಸ್ತಿ ವಿಜೇತರು. ನಿವೃತ್ತ ಗೃಹ ರಕ್ಷಕದಳದ ಸಮಾದೇಷ್ಟರೂ, ನೇತ್ರದಾನಿಗಳೂ ಎನಿಸಿದ್ದಾರೆ. ಪ್ರಥಮ ಚಿಕಿತ್ಸೆ ತರಬೇತುದಾರ, ನಾಗರಿಕ ಬಂದೂಕು ತರಬೇತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು.
ಸಂತಾಪ: ಶಾಸಕ ಎಂ.ಜೆ.ಅಪ್ಪಾಜಿ ದೂರವಾಣಿ ಮೂಲಕ ತಮ್ಮ ಸಂತಾಪ ಸೂಚಿಂಸಿದರು. ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ ಮತ್ತು ಪಟ್ಟಣದ ಇತರ ಗಣ್ಯರು ಹಾಗೂ ವೀರಶೈವ ಸಮಾಜದ ಅನೇಕ ಪ್ರಮುಖರು ಮೃತರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.
ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

