ಶಿವಮೊಗ್ಗ

ಯಡಿಯೂರಪ್ಪ ವಿರುದ್ಧ ಆಮ್ ಆದ್ಮಿ ಹುರಿಯಾಳು

Published On :

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಆಮ್ ಆದ್ಮಿ ಪಕ್ಷದ ಕೇಂದ್ರ ಸಮಿತಿಯಲ್ಲಿಯೇ ತೀರ್ಮಾನವಾಗಿದ್ದು, ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ದಿನ ಪ್ರಚಾರ ಕೈಗೊಳ್ಳಲು ನಿರ್ಧರಿಸಿದ್ದಾರೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದ್ದ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿದ್ದವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಸ್ವತಃ ಅವರೇ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ಈ ಪಟ್ಟಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರೂ ಇದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಭೇಟಿ ಮಾಡುವ ದಿನ ನಿಗದಿಗೆ ಚರ್ಚೆ ನಡೆಯುತ್ತಿದೆ ಎಂದು ಪಕ್ಷದ ನಗರ ಸಹ ಸಂಚಾಲಕ ಸುರೇಶ್ ಕೋಟೆಕರ್ “OÚ«Ú­sÚ®ÚúڒOæQ ಸ್ಪಷ್ಟಪಡಿಸಿದ್ದಾರೆ. ಸಾಗರದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಸದ್ಯವೇ ನಡೆಯಲಿದ್ದು, ಈ ವಿಷಯಗಳನ್ನು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಕಣಕ್ಕೆ ಇಳಿಯಬಹುದಾದ ಅಭ್ಯರ್ಥಿಗಳನ್ನು ಪಕ್ಷ ಹುಡುಕುತ್ತಿದೆ. ಈ ನಿಟ್ಟಿನಲ್ಲಿ ಹಲವರನ್ನು ಸಂಪರ್ಕಿಸಿದೆ. ರೈತ ಮುಖಂಡ ಕಡಿದಾಳು ಶಾಮಣ್ಣ ಅವರನ್ನು ಭೇಟಿ ಮಾಡಿದ್ದು, ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹಿಂದೆ ರೈತಸಂಘ ಹಾಗೂ ಇತರೆ ಪಕ್ಷಗಳಿಂದ ಆಹ್ವಾನ ಬಂದಾಗಲೂ ಅವರು ಸ್ಪರ್ಧಿಸಿರಲಿಲ್ಲ. ಈಗ ಆಮ್ ಆದ್ಮಿ ಪಕ್ಷದ ಆಹ್ವಾನವನ್ನೂ ಅವರು ನಿರಾಕರಿಸಿದ್ದಾರೆ. ಜತೆಗೆ ಇನ್ನೂ ಹಲವು ಪ್ರಮುಖರನ್ನು ಸಂಪರ್ಕಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಲ್ಲದೇ, ಪಕ್ಷವು ಪತ್ರಿಕಾ ಪ್ರಕಟಣೆ ನೀಡಿ ಸೂಕ್ತ ಅಭ್ಯರ್ಥಿಯನ್ನು ಸೂಚಿಸುವಂತೆ ಸಾರ್ವಜನಿಕರನ್ನು ಕೋರಿದೆ. ಅಭ್ಯರ್ಥಿಯು ಪ್ರಾಮಾಣಿಕರಾಗಿರಬೇಕು. ಯಾವುದೇ ಭ್ರಷ್ಟಾಚಾರದ ಅರೋಪ, ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರಬಾರದು ಎಂಬ ಷರತ್ತನ್ನೂ ವಿಧಿಸಿದೆ. ಸಾರ್ವಜನಿಕರು ಅಭ್ಯರ್ಥಿ ಹೆಸರನ್ನು ಟೈಪ್ ಮಾಡಿ ಮೊ.9481253130 ಅಥವಾ 9481254130ಗೆ ಎಸ್‌ಎಂಎಸ್ ಕಳುಹಿಸಬಹುದು ಅಥವಾ ಪಕ್ಷದ ಕಚೇರಿಗೆ ಫೆ.22ರೊಳಗೆ ಬರೆದು ತಲುಪಿಸಬಹುದು ಎಂದು ಹೇಳಿದೆ.
ಸಾರ್ವಜನಿಕರರು ಶಿವಮೊಗ್ಗ ಜಿಲ್ಲೆಯ ಅತಿ ಮುಖ್ಯ ಮೂರು ಸಮಸ್ಯೆಗಳನ್ನು ಬರೆದು ಪಕ್ಷದ ಕಚೇರಿಗೆ ತಲುಪಿಸಲು ಕೋರಲಾಗಿದೆ. ಎಸ್‌ಎಂಎಸ್ ಮೂಲಕ ಅಥವಾ ಛಛಠಝ್ಝಟ್ಟ್ಜಛಅ್ಜಟಛ್ಝಟ.್ಛ್ಟಟ ಗೆ ಇ-ಮೇಲ್ ಸಹ ಕಳುಹಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.