'ಸಮಾಜದಲ್ಲಿ ಹೆಣ್ಣು ಗಾದೆ ಮಾತಿಗೆ ಸೀಮಿತ'
ಶಿವಮೊಗ್ಗ: ಕಲೆ ಇಲ್ಲದೇ ಹೆಣ್ಣಿಲ್ಲ. ತಂದೆ ಇತಿಹಾಸ ಸೃಷ್ಟಿಸಿದರೆ ತಾಯಿ ಪುರಾಣ ಸೃಷ್ಟಿಸುತ್ತಾಳೆ. ಆಕೆ ಬಳಪವಾಗಿ ಬದುಕುವುದನ್ನು ಕಲಿಯುತ್ತಾಳೆ ಮತ್ತು ಕಲಿಸುತ್ತಾಳೆ. ನಂತರ ತಂದೆ ಅಧಿಕಾರ ಮತ್ತು ಆಡಳಿತ ಪಡೆಯಲು ಪ್ರಯತ್ನಿಸುತ್ತಾನೆ ಎಂದು ವಿಶ್ಲೇಷಿಸಿದ ಅವರು, ಸಮಾಜದಲ್ಲಿ ಹೆಣ್ಣು ಮಾತ್ರ ಬೈಗುಳಕ್ಕೆ, ಗಾದೆ ಮಾತಿಗೆ ಸೀಮಿತ. ಆದರೆ ಪುರುಷ ಅಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ಚಂದ್ರಶೇಖರ ಕಂಬಾರ ವಿಶ್ಲೇಷಿಸಿದರು.
ಕಮಲಾ ನೆಹರೂ ಕಾಲೇಜಿನ ಸಾಂಸ್ಕೃತಿಕ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆ- ಪರಂಪರೆ ಮತ್ತು ಆಧುನಿಕತೆ ಮುಖಾಮುಖಿ ಕುರಿತ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಅವರು, ಯಾವಾಗ ಮರಾಠಿ ಮಹಿಳೆಯರ ಆತ್ಮಚರಿತ್ರೆ ಹುಟ್ಟಿತೋ ಅಂದು ಸಮಾಜಕ್ಕೆ ನೊಂದ ಹಾಗೂ ಶೋಷಣೆಗೆ ಒಳಪಟ್ಟ ಮಹಿಳೆಯ ಪರಿಸ್ಥಿತಿ ಪರಿಚಯವಾಯಿತು ಎಂದರು.
ರಾಜಕಾರಣ, ನಂಬಿಕೆ, ಆಚರಣೆ, ಪುರುಷ ಸಮಾಜ ಇವೆಲ್ಲವನ್ನೂ ಮೀರಿದ ಇನ್ನೊಂದು ಸಮಾಜವನ್ನು ಹೆಣ್ಣು ವಿವೇಚನೆಯಿಂದ ಸೃಷ್ಟಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಹೆಣ್ಣು ಹಿಂಜರಿಕೆಯಿಂದ ಬದುಕು ಸಾಗಿಸುತ್ತಿದ್ದಾಳೆಯೇ ಹೊರತು ಅವಳಿಗಿನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಏನೇ ಆದರೂ ಆಕೆಯೇ ಧೈರ್ಯ, ಸಹನೆ ಹಾಗೂ ವಿವೇಚನೆಯಿಂದ ತನ್ನ ಬದುಕನ್ನು ಕಟ್ಟಿಕೊಳ್ಳುವುದು ಇಂದು ಅನಿವಾರ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸತ್ಯನಾರಾಯಣ, ಪ್ರೊ. ಓಂಕಾರಪ್ಪ, ಪ್ರೊ. ಮಹೇಶ್ವರಿ, ಡಾ. ಬಸವರಾಜ ನೆಲ್ಲಿಸರ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಕಿರಣ್ ದೇಸಾಯಿ ನಿರೂಪಿಸಿದರು. ದಾಕ್ಷಾಯಣಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

