ಶಿವಮೊಗ್ಗ

ವಿವೇಕ ವೃದ್ಧಿಗೆ ಸಾಹಿತ್ಯ ಪ್ರೇರೇಕಶಕ್ತಿ

Published On :

ಶಿವಮೊಗ್ಗ: ಸಾಹಿತ್ಯದಿಂದ ತಿಳುವಳಿಕೆ ಹೆಚ್ಚುತ್ತದೆ. ಸುಂದರವಾದ ವಿವೇಚನೆಗೆ ಮತ್ತು ವಿವೇಕದಿಂದ ಬದುಕಲು ಸಾಹಿತ್ಯ ಪ್ರೇರೇಕಶಕ್ತಿಯಾಗುತ್ತದೆ. ಸಾಹಿತ್ಯವು ಬದಲಾವಣೆಗೆ ಸರಿದಾರಿಯನ್ನು ತೋರಿಸುವಂತಹದ್ದು. ಹಸಿ ಹಸಿಯಾಗಿ ಕೊಡುವ ಬದಲು ಸಹೃದಯರಿಗೆ ಸಂವಹನವಾಗುವ ನೆಲೆಯಲ್ಲಿ ರೂಪಕ, ಪ್ರತಿಮೆ ಮತ್ತು ಸಂಕೇತಗಳ ಮೂಲಕ ಸಾಹಿತ್ಯವನ್ನು ಸೃಜಿಸಬೇಕು. ರೂಪಕವೇ ಸಾಹಿತ್ಯ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡಭಾರತಿ ವಿಭಾಗದ ಸಾಹಿತ್ಯ ಸಂಘವು ಏರ್ಪಡಿಸಿದ್ದ ಕಂಬಾರರ ಕಾವ್ಯವಾಚನ ಕಾರ್ಯಕ್ರಮದಲ್ಲಿ ಜನಪದ ಮಟ್ಟುಗಳನ್ನು ಅಳವಡಿಸಿಕೊಂಡು ಕಾವ್ಯ ಬರೆಯುವ ಮೂಲಕ ಹೆಚ್ಚು ಜನರಿಗೆ ಕಾವ್ಯ ತಲುಪಲು ಸಾಧ್ಯವೆಂದು ತಿಳಿಸಿದರು.
ನನ್ನ ಕಾವ್ಯದಲ್ಲಿ ವ್ಯವಸ್ಥೆಯೊಳಗಿನ ಅವ್ಯವಸ್ಥೆ ಮತ್ತು ಅದರ ನಿವಾರಣೆಗೆ ಮಾನವ ಮಾಡಬೇಕಾದ ಪ್ರಯತ್ನಗಳನ್ನು ಸೂಕ್ಷ್ಮವಾದ ನೆಲೆಯಲ್ಲಿ ನಿರೂಪಿಸಿದ್ದೇನೆ ಎಂದರು.
ಪ್ರಾಧ್ಯಾಪಕ ಪ್ರೊ. ಬಸವರಾಜ್ ನೆಲ್ಲಿಸರ, ಸಾಹಿತ್ಯ ಸಂಘದ ಉಪಾಧ್ಯಕ್ಷ ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉಪಸ್ಥಿತರಿದ್ದರು. ಶಶಿಕುಮಾರನಾಯ್ಕ ಎಸ್. ಸ್ವಾಗತಿಸಿದರು. ತಿಮ್ಮೇಗೌಡ ವಂದಿಸಿದರು. ಬಿಂದುರಾಣಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.