ಶಿವಮೊಗ್ಗ

'ವಿಶೇಷ ಲೋಕ್ ಅದಾಲತ್‌'ನಲ್ಲಿ ಶೀಘ್ರ ನ್ಯಾಯ

Published On :

ಶಿವಮೊಗ್ಗ: ವಿವಿಧ ಕಾರಣಗಳಿಂದ ಕೆನರಾ ಬ್ಯಾಂಕ್‌ಗೆ ಸುಸ್ತಿದಾರರಾಗಿರುವವರಿಗೆ ಅನುಕೂಲವಾಗುವಂತೆ “ÉËæÞÎÚ ಲೋಕ್ @¥ÛÄ}é’ ಆಯೋಜಿಸಲಾಗಿದ್ದು, ಇಲ್ಲಿ ಶೀಘ್ರ ಹಾಗೂ ಸುಲಭವಾಗಿ ನ್ಯಾಯ ದೊರಕಿಸಿ, ಋಣಮುಕ್ತರಾಗಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಶರಶ್ಚಂದ್ರ ಬ. ಅಂಗಡಿ ತಿಳಿಸಿದರು.
ಶುಕ್ರವಾರ ಜಿಲ್ಲಾ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ವಾರ್ತಾ ಇಲಾಖೆ, ಕೆನರಾ ಬ್ಯಾಂಕ್ ಸಹಯೋಗದಲ್ಲಿ ಬ್ಯಾಂಕ್ ಸಂಬಂಧಿ ವ್ಯಾಜ್ಯಗಳ ಮೆಗಾ ಲೋಕ್ ಅದಾಲತ್ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರು ಫೆ. 28ರವರೆಗೆ ಕೆನರಾ ಬ್ಯಾಂಕ್ ವೃತ್ತ ಕಚೇರಿ ಆವರಣದಲ್ಲಿ ನಡೆಯುವ ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ, ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೆನರಾ ಬ್ಯಾಂಕ್ ಶಿವಮೊಗ್ಗ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ಕೃಷಿ, ಟ್ರ್ಯಾಕ್ಟರ್, ವಿದ್ಯಾಭ್ಯಾಸ, ವ್ಯಾಪಾರ-ವಹಿವಾಟು, ಗೃಹಸಾಲ ಒಳಗೊಂಡಂತೆ ಸುಮಾರು 83.80 ಕೋಟಿ ಮೊತ್ತದ 11 ಸಾವಿರ ಸಾಲ ಬಾಕಿ ಸುಸ್ತಿ ಖಾತೆಗಳನ್ನು ಇತ್ಯರ್ಥಗೊಳಿಸುವ ಗುರಿ ಇದ್ದು, ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವವರು ರಾಜಿ ಸಂಧಾನದ ಮೂಲಕ ಪ್ರತಿದಿನ ಈ ತಿಂಗಳ ಅಂತ್ಯದವರೆಗೆ ವ್ಯಾಜ್ಯ ಬಗೆಹರಿಸಿಕೊಂಡು ಋಣಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಮಧ್ಯಸ್ಥಿಕೆ: ಈ ಸಂಬಂಧ ಇಬ್ಬರು ನ್ಯಾಯಾಧೀಶರನ್ನು ಸಂಧಾನಕಾರರಾಗಿ ನೇಮಿಸಲಾಗಿದೆ. ಅಲ್ಲದೆ, 10 ನುರಿತ ವಕೀಲರನ್ನು ಮಧ್ಯಸ್ಥಿಕೆಗೆ ನಿಯೋಜಿಸಲಾಗಿದೆ. ಈ ಅವಧಿಯಲ್ಲಿ ಸುಸ್ತಿದಾರರು ತಮ್ಮ ಪ್ರಕರಣ ಅಂತಿಮಗೊಳಿಸಿಕೊಳ್ಳಲು ಲೋಕ್ ಅದಾಲತ್‌ನಲ್ಲಿ ಭಾಗವಹಿಸಬೇಕು. ಸಂಧಾನ ಸಂದರ್ಭದಲ್ಲಿ ಸುಸ್ತಿದಾರರಿಗೆ ಬಡ್ಡಿ ರಿಯಾಯಿತಿ ಹಾಗೂ ಕಂತುಗಳ ಮೂಲಕ ಮರುಪಾವತಿ ಮಾಡುವ ಅವಕಾಶವನ್ನೂ ನೀಡಲಾಗುತ್ತದೆ ಎಂದು ಹೇಳಿದರು.
ಹೊಸ ಹೆಜ್ಜೆ: ಲೋಕ್ ಅದಾಲತ್‌ನಲ್ಲಿ ಬಗೆಹರಿದ ಪ್ರಕರಣ ಅಂತಿಮವಾಗಲಿದ್ದು, ಮೇಲ್ಮನವಿಗೆ ಅವಕಾಶವಿಲ್ಲದಿರುವುದರಿಂದ ಗ್ರಾಹಕರ ಮನೆ ಬಾಗಿಲಿಗೆ ಶೀಘ್ರ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ನೀಡುವ ಹೊಸ ಹೆಜ್ಜೆಗೆ ಸ್ಪಂದಿಸಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.
ಜನವರಿ 6ರಿಂದ ಫೆಬ್ರವರಿ 20ರ ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದ 2634 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಹೊಸ ಸಾಲ ಭರವಸೆ: ಕೆನರಾ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ್ ಮಾತನಾಡಿ, ಬ್ಯಾಂಕ್‌ನಿಂದ ಸುಸ್ತಿದಾರರಾಗಿರುವವರಿಗೆ ಜನತಾ ನ್ಯಾಯಾಲಯದಲ್ಲಿ ನ್ಯಾಯ ದೊರಕಿಸಿಕೊಡುವ ಈ ಪ್ರಯತ್ನಕ್ಕೆ ಬ್ಯಾಂಕ್ ಸಂಪೂರ್ಣ ಸಹಕಾರ ನೀಡಿದ್ದು, ಒಂದು ವಾರದ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಕಿ ವಸೂಲಿ ಮಾಡುವುದಲ್ಲದೆ, ಮುಂದೆ ಅವರಿಗೆ ಹೊಸ ಸಾಲ ನೀಡುವ ಭರವಸೆಯನ್ನೂ ನೀಡಲಾಗುವುದು ಎಂದರು.
ಹೆಚ್ಚುವರಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಚ್.ಎಂ. ನಂಜುಂಡಸ್ವಾಮಿ ಮಾತನಾಡಿ, ಗ್ರಾಹಕರಿಗೆ ಲೋಕ್ ಅದಾಲತ್‌ನಲ್ಲಿ ಸುಲಭವಾಗಿ ನ್ಯಾಯ ಸಿಗುವ ಬಗ್ಗೆ ಅನುಮಾನಗಳು ಬೇಡ. ಗ್ರಾಹಕರಿಗೂ ಹಾಗೂ ಬ್ಯಾಂಕ್ ನಡುವೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ್ ಜಿ. ಭಟ್, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.