ಶಿವಮೊಗ್ಗ

ಉತ್ತಮ ನಡವಳಿಕೆಯಿಂದ ಸಂಸ್ಕಾರವಂತ ಸಮಾಜ

Published On :

ಕ.ಪ್ರ.ವಾರ್ತೆ ,  ಜೋಗ್ ಫಾಲ್ಸ್ ,  ಫೆ. 24
ಉತ್ತಮ ನಡವಳಿಕೆ, ಶುದ್ಧ ಸಾತ್ವಿಕ ಆಹಾರ, ಶಾಸ್ತ್ರೀಯ ವಿವಾಹ ಸಂಸ್ಕಾರ ಮೊದಲಾದ ತಿಳಿವಳಿಕೆಯಿಂದ ಸಂಸ್ಕಾರವಂತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ರಾಮಚಂದ್ರಾಪುರಮಠದ ಮಹಾಮಂಡಲ ಮಾತೃ ವಿಭಾಗದ ಪ್ರಮುಖರಾದ ಈಶ್ವರಿ ಅಕ್ಕ ಬೇರ್ಕಡವು ಹೇಳಿದರು.
ಸಮೀಪದ ಭಾನ್ಕುಳಿಯ ರಾಮದೇವ ಮಠದ ಸಭಾ ಭವನದಲ್ಲಿ ಮಾತೃ ಮಂಡಲದಿಂದ ನಡೆದ ಉಡಿ ತುಂಬಿಕೆ, ಭಜನಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ, ಮನುಷ್ಯನಿಗೆ ಏನು ಕೊಟ್ಟರೂ ತೃಪ್ತಿಗೊಳಿಸಲು ಸಾಧ್ಯವಿಲ್ಲ. ಆದರೆ, ಊಟ ಮಾಡಿದರೆ ಹೊಟ್ಟೆ ತುಂಬಿ ತೃಪ್ತಿಯಿಂದ ಸಾಕು ಎನ್ನುತ್ತಾನೆ. ಇಂತಹ ತೃಪ್ತಿ ನೀಡುವ ಯೋಜನೆ ಮುಷ್ಟಿ ಭಿಕ್ಷಾ ಯೋಜನೆಗಳಾಗಿದ್ದು, ಅದರಲ್ಲಿ ಮಹಿಳೆಯರು ತೊಡಗಿಕೊಳ್ಳಬೇಕು ಎಂದರು.
ಶ್ರೀಮಠದ ಗ್ರಾಮರಾಜ್ಯ ಯೋಜನೆಯ ಪ್ರಧಾನ ಆರ್.ಎಸ್. ಹೆಗಡೆ ಹರಗಿ ಮಾತನಾಡಿ, ನಗರದತ್ತ ಮುಖ ಮಾಡಿದ ಗ್ರಾಮ ವಾಸಿಗಳಿಂದ ಹಳ್ಳಿ ನಿರ್ವಸತಿಯಾಗುತ್ತಿದೆ. ಗ್ರಾಮೀಣ ಯುವಶಕ್ತಿ ಪಟ್ಟಣದ ಗ್ಯಾರೇಜು, ಹೋಟೆಲ್, ಫ್ಯಾಕ್ಟರಿಗಳು, ಸಾಫ್ಟ್‌ವೇರ್ ಕಂಪನಿಯಲ್ಲಿ ಕರಗಿ ಹೋಗುತ್ತಿದ್ದು, ಹಳ್ಳಿಗಳನ್ನು ಉಳಿಸಿಕೊಳ್ಳುವುದು ಯೋಜನೆಯ ಉದ್ದೇಶ ಎಂದರು. ಕೇಂದ್ರ ಗ್ರಾಮರಾಜ್ಯ ಯೋಜನೆಯ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ, ಮಧ್ಯವರ್ತಿಗಳ ಶೋಷಣೆಯಿಲ್ಲದೆ ಬೆಳೆದ ಬೆಳೆಯನ್ನು ನೇರ ಬಳಕೆದಾರರ ಕೈಸೇರುವ ಗುಣಾತ್ಮಕವಾಗಿ ಬದಲಾವಣೆಯ ಉದ್ದೇಶ ಗ್ರಾಮರಾಜ್ಯ ಯೋಜನೆ ಹೊಂದಿದೆ ಎಂದರು.
ಮಂಡಲ ಕಾರ್ಯದರ್ಶಿ ಜಿ.ಎಸ್. ಭಟ್ ಬಲ್ಲಾಳ, ಮಂಡಲ ಮಾತೃವಿಭಾಗದ ಪ್ರಧಾನರಾದ ಕಲ್ಪನಾ ತಲವಾಟ, ಶ್ಯಾಮಲಾ ಹೆಗಡೆ ಹೂವಿನಮನೆ, ರಮೇಶ್ ಹೆಗಡೆ ಗುಂಡೂಮನೆ ಹಾಜರಿದ್ದರು.
ಭಜನಾ ಸ್ಪರ್ಧೆ: ಮಂಡಲದ ಹತ್ತು ವಲಯಗಳ ಮಹಿಳೆಯರಿಗಾಗಿ ಭಜನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟು 18 ತಂಡದವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ದೊಡ್ಮನೆ ವಲಯದ ಮಾಲತಿ ಹೆಗಡೆ ಸಂಗಡಿಗರು ಪ್ರಥಮ, ತಾಳಗುಪ್ಪ ಇಡುವಾಣಿ ವಲಯದ ಶೈಲಶ್ರೀ ಸಂಗಡಿಗರು ದ್ವಿತೀಯ, ಅಂಬಾಗಿರಿ ವಲಯದ ಶ್ಯಾಮಲಾ ಸಂಗಡಿಗರು ತೃತೀಯ ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.