ಬದುಕು ವಿಶ್ವಾಸದ ಮೇಲೆ ಅವಲಂಬಿತ: ಅಪ್ಪಾಜಿ
ಭದ್ರಾವತಿ: ಮಾನವನ ಬದುಕು ಪ್ರೀತಿ ವಿಶ್ವಾಸಗಳ ಮೇಲೆ ಅವಲಂಬಿತವಾಗಿದೆಂಬ ಸತ್ಯವನ್ನು ಅರಿಯದೆ ನಾವಿಂದು ಐಹಿಕ ಸುಖಗಳ ಬೆನ್ನತ್ತಿ ಬದುಕಿನಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆಂದು ಶಾಸಕ ಎಂ.ಜೆ. ಅಪ್ಪಾಜಿ ನುಡಿದರು.
ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಪಟ್ಟಣದ ಲಯನ್ಸ್ ಕ್ಲಬ್ನ ಎಸ್.ಎಂ. ಮಂಜುನಾಥ್ ಸ್ಮಾರಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಮತ್ತು ಸರ್ಕಾರಿ ಶಾಲೆಗಳಿಗೆ ನೀರಿನ ಟ್ಯಾಂಕ್ಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಮೆರಿಕದಲ್ಲಿ ವಾಸಿಸುತ್ತಿದ್ದರೂ ಭದ್ರಾವತಿಯ ಸರ್ ಎಂ.ವಿ. ವಿಜ್ಞಾನ ಕಾಲೇಜಿನ ಕಟ್ಟಡ ದುರಸ್ತಿ ಮತ್ತು ನೂತನ ಕೊಠಡಿಗಳ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ ವಿಐಎಸ್ಎಲ್ ಕಾರ್ಮಿಕ ಕೆ.ಎನ್. ಭೈರಪ್ಪಗೌಡರ ಪುತ್ರ ಬಿ. ರವಿಶಂಕರ್ ಅವರ ಸೇವಾಮನೋಭಾವವನ್ನು ಶ್ಲಾಘಿಸಿದರು. ಬಿ. ರವಿಶಂಕರ್, ದುಬೈನಲ್ಲಿ ವಾಸವಾಗಿರುವ ಶಿವನಂಜೇಗೌಡ ಹಾಗೂ ಬೆಂಗಳೂರಿನ ಕೈಗಾರಿಕೋದ್ಯಮಿ ಎಲ್. ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು. ಎಲ್. ಲಕ್ಷ್ಮೀನಾರಾಯಣ ಅವರು ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟಿಗೆ 1 ಲಕ್ಷ ದೇಣಿಗೆಯಾಗಿ ನೀಡಿದರು.
ಟ್ರಸ್ಟಿ ಅಧ್ಯಕ್ಷ ಮಾದೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. ಪಂಚಮ್ ಪ್ರಾರ್ಥಿಸಿದರು. ಟ್ರಸ್ಟಿನ ಧರ್ಮದರ್ಶಿ ಪುಟ್ಟಸ್ವಾಮಿ ಸ್ವಾಗತಿಸಿದರು. ಎಸ್.ಬಿ. ಶಿವಲಿಂಗಪ್ಪ ಶ್ರೀ ಬಾಲಗಂಗಾಧರನಾಥ ಸ್ವಾಮಿಯವರಿಗೆ ಗೀತನಮನ ಸಲ್ಲಿಸಿದರು. ಬಿ.ಎಸ್. ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನ್ನಪೂರ್ಣ ಸತೀಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

