ಕಳಪೆ ಬೀಜ ವಿತರಣೆ ಪ್ರಕರಣ: ರೈತರಿಗೆ ಪರಿಹಾರ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಜ.1
ಅಮ್ಮಾನ್ ಸೋನಾ ಬೆಳೆದಿದ್ದ ರೈತರಿಗೆ ಅನ್ಯಾಯವಾಗಿದೆ ಎಂದು ಉಡಗಣಿ ತಾಳಗುಂದ ಹೋಬಳಿ ರೈತಹೋರಾಟ ಸಮಿತಿ ಪೋಲೀಸ್ ಠಾಣೆ ಮೆಟ್ಟಲು ಏರಿ ನಂತರ ಹೋರಾಟ ಕೈಗೊಳ್ಳುವದಾಗಿ ಪತ್ರಿಕೆ ಮೋರೆ ಹೋದ ಹಿನ್ನೆಲೆಯಲ್ಲಿ ವಿತರಕರು ಕೊನೆಗೂ ತಪ್ಪಿನ ಅರಿವಾಗಿ ರೈತರಿಗೆ ಪರಿಹಾರ ನೀಡಿದ್ದಾರೆ.
ಅಮ್ಮಾನ್ ಸೋನಾ ಕಳಪೆ ಬತ್ತ ವಿತರಿಸಿದ್ದ ವಿತರಕರ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ ಹಲವು ಬಾರಿ ವರದಿ ಪ್ರಕಟವಾದ ಪರಿಣಾಮ ರೈತರ ಪಾಕೆಟಿಗೆ ರು. 3,000 ಪರಿಹಾರ ದೊರಕಿದಂತಾಗಿದೆ.
ಶಿರಾಳಕೊಪ್ಪ ನಾಡಕಚೇರಿಯಲ್ಲಿ ಬುಧವಾರ ಪರಿಹಾರ ಪಡೆದ ರೈತ ಬಿಳಕಿ ಗ್ರಾಮದ ಶಿವಪ್ಪ, ನೂರಾರು ರೈತರಿಗೆ ಉಪತಹಸೀಲ್ದಾರ್ ಅವರಿಗೆ ನಾಡಕಚೇರಿಯಲ್ಲಿ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು.
ಹಾಗೆಯೇ ಉಡಗಣಿ- ತಾಳಗುಂದ ರೈತ ಹೋರಾಟ ಸಮಿತಿಯ ರಾಜಣ್ಣ, ಹಿರಿಯ ರೈತ ಮುಖಂಡ ಮಾಳಗೊಂಡನಕೊಪ್ಪ ವೀರಣ್ಣ ಮತ್ತು ಪರಿಹಾರ ಪಡೆದ ರೈತರು ಪತ್ರಿಕೆಯೊಂದಿಗೆ ಮಾತನಾಡಿ, ಪತ್ರಿಕೆ ತಮಗೆ ಸಹಕರಿಸಿದ್ದನ್ನು ಸ್ಮರಿಸಿದರು.
ವಿವರ: ಕಳೆದ ಮಳೆಗಾಲದಲ್ಲಿ ಶಿರಾಳಕೊಪ್ಪ ಪಟ್ಟಣದ ಹಲವಾರು ಬೀಜ ಮಾರಾಟ ಅಂಗಡಿಯಲ್ಲಿ ಈ ಭಾಗದ ರೈತರು ಅಮ್ಮಾನ್ ಸೋನಾ ಬತ್ತ ಬೆಳೆಯಲೆಂದು ಬೀಜ ಖರೀದಿಸಿದ್ದರು. ಅಮ್ಮಾನ್ ಸೋನಾ ಬತ್ತಕ್ಕೆ ಹೆಚ್ಚು ಬೆಲೆ ಎಂಬ ಕಾರಣಕ್ಕೆ ಬೆಳೆಯಲು ಮುಂದಾದ ರೈತರಿಗೆ ಬೆಳೆ ಬಂದಾಗ ಅದು ಅಮ್ಮಾನ್ ಸೋನಾ ಬತ್ತ ಅಲ್ಲ ಎಂದು ತಿಳಿದು ಪತ್ರಿಕೆಗೆ ತಿಳಿಸಿದ್ದರು.
ನಂತರ ಪೊಲೀಸ್ ಠಾಣೆಗೆ ದೂರು ನೀಡಿದಾಗ ಎಸ್ಐ ಗುರುಪ್ರಸಾದ್ ವಿತರಕರೊಂದಿಗೆ ಮಾತುಕತೆ ನಡೆಸಿ ರೈತರ ಸಮಸ್ಯೆ ತಕ್ಷಣ ಬಗೆಹರಿಸುವಂತೆ ತಿಳಿಸಿದ್ದರು.
ರು. 3,000 ಪರಿಹಾರ: ಆದರೆ ವಿತರಕರು ಬಾರದ ಕಾರಣ ಪತ್ರಿಕೆ ಮುಖಾಂತರ ರೈತರು ಹೋರಾಟದ ಮಾರ್ಗಹಿಡಿಯಲು ಮುಂದಾದಾಗ ಕೊನೆಗೆ ದಿ.31ರಂದು ಸಂಜೆ ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಪಾಕೇಟ್ ಒಂದಕ್ಕೆ ರು. 3,000 ಕೊಡಲು ಒಪ್ಪಿ ಹಣ ಕೊಡುವುದರೊಂದಿಗೆ ಸಮಸ್ಯೆ ಬಗೆಹರಿಯಿತು ಎಂದು ರೈತ ಮುಖಂಡರು ಪತ್ರಿಕೆಗೆ ತಿಳಿಸಿದ್ದಾರೆ.
ರೈತರಿಗೆ ಈ ಕಳಪೆ ಬತ್ತ ಬೆಳೆದ ಕಾರಣ ಕ್ವಿಂಟಲ್ಗೆ ಕನಿಷ್ಠ ರು. 2000 ನಷ್ಟ ಸಂಭವಿಸಿದೆ. ಆದರೂ ರೈತರು ಸಮಸ್ಯೆ ಬಗೆಹರಿಯಲೆಂದು ಸಣ್ಣ ಪರಿಹಾರಕ್ಕೆ ಒಪ್ಪಿದ್ದಾರೆ ಎಂದು ತಿಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

