ವೃತ್ತಿಯೊಂದಿಗೆ ಸೇವೆಗೂ ಗಮನ ನೀಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.1
ಪ್ರತಿನಿತ್ಯ ನಾವು ನಮ್ಮ ವೃತ್ತಿ ಮಾಡುತ್ತಿರುವಾಗ ಅದರ ಜೊತೆಜೊತೆಗೆ ಸೇವೆಯ ಕಡೆಗೂ ಗಮನ ಹರಿಸಬೇಕು ಎಂದು ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಿ. ವಿಜಯ್‌ಕುಮಾರ್ ಸಲಹೆ ನೀಡಿದರು.
ಕಲಾ ತರಂಗದ ವತಿಯಿಂದ ನಿಜಲಿಂಗಪ್ಪ ಸಭಾಂಗಣದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಕ್ತದಾನ ಪವಿತ್ರ ದಾನ. ಹೊಸ ವರ್ಷ ಆಚರಣೆ ರಕ್ತದಾನ ಹಾಗೂ ಸೇವೆ ಮೂಲಕ ಮಾಡಿದರೆ ಒಂದು ಪವಿತ್ರ ಕೆಲಸ ಮಾಡಿದಂತಾಗುತ್ತದೆ ಎಂದರು.
ಅವಶ್ಯಕತೆ ಹೆಚ್ಚು: ನಗರದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು, ದಾನಿಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂದು ವಿಶಾದ ವ್ಯಕ್ತಪಡಿಸಿದ ಅವರು, ಕಲಾ ತರಂಗದ ಸದಸ್ಯರೆಲ್ಲಾ ಉತ್ಸಾಹಿ ಯುವಕರಾಗಿದ್ದು, ತಾವು ರಕ್ತದಾನ ಮಾಡುವುದರ ಜೊತೆಗೆ ಇತರರಿಗೆ ಪ್ರೇರೇಪಿಸಿ ರಕ್ತದಾನ ಮಾಡಿಸಿದಾಗ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.
ಕಲಾತರಂಗದ ಅಧ್ಯಕ್ಷ ಎಸ್.ಸಿ ನಾಗರಾಜ್ ಮಾತನಾಡಿ, ಈ ಹೊಸ ವರ್ಷ ಆಚರಣೆಯಲ್ಲಿ ನಗರದ ಎಲ್ಲಾ ಸರ್ಕಲ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸ್‌ನವರಿಗೆ ಉಚಿತವಾಗಿ ಮಾಸ್ಕ್, ಸಿಹಿ ಹಾಗೂ ವಾಟರ್ ಬಾಟಲ್‌ಗಳನ್ನು ವಿತರಿಸಿದ್ದೇವೆ ಎಂದರು.
ಧರಣೇಂದ್ರ ದಿನಕರ್ ಮಾತನಾಡಿ, ದಾನಿಗಳ ದೇಹದಲ್ಲಿ ಎಷ್ಟು ಪ್ರಮಾಣ ರಕ್ತವಿರಬೇಕು ಹಾಗೂ ದಾನದಿಂದ ಪ್ರಯೋಜನಗಳು ಮತ್ತು ಆರೋಗ್ಯದ ಲಕ್ಷಣಗಳು ಇದರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹರ್ಷ ಭಟ್, ಕಾರ್ಯದರ್ಶಿ ವಿಶಾಲ್, ನಿರ್ದೇಶಕ ಬಸವಗೌಡ ಟಿ.ಎಸ್. ಸಂಜಯ್, ರಮ್ಯ ಪಾಟೀಲ್, ನಿತಿನ್, ಸಂತೋಷ ಎಸ್.ಆರ್. ಹಾಗೂ ಪದಾಧಿಕಾರಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

