ಶಿವಮೊಗ್ಗ

'ಸಾಹಿತ್ಯ ರಚನೆಯಲ್ಲಿ ಪರಿಸರ ಮಹತ್ವದ್ದು'

Published On :

ಕ.ಪ್ರ.ವಾರ್ತೆ, ಹೊಸನಗರ, ಜ.2
ಸಾಹಿತ್ಯ ರಚನೆ ಮತ್ತು ಅಧ್ಯಯನಕ್ಕೆ ವ್ಯಕ್ತಿ ಬೆಳೆಯುವ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಕ್ಕೇರಿ ಹೇಳಿದರು.
ಇಲ್ಲಿನ ರಾಮಕೃಷ್ಣ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೆಸಿಐ ಹೊಸನಗರ ಡೈಮಂಡ್ ಆಶ್ರಯದಲ್ಲಿ ನಡೆದ ಭಾವಗೀತೆಗಳ ಗಾಯನದ ಭಾವ ಸಂಗಮ, ಯುವಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಮನಸ್ಸುಗಳು ಇಂದು ವಿದೇಶಿ ಸಂಸ್ಕೃತಿಯತ್ತ ಮನಸ್ಸು ಹರಿಸುತ್ತಿದ್ದು, ಮಧುರ ಕಲ್ಪನೆಗಳನ್ನು ಕಟ್ಟಿಕೊಡುವಂಥ ಭಾವಗೀತೆ ಗಾಯನ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕಿದೆ. ಇಲಾಖೆ ಅದಕ್ಕೆ ಸದಾ ಪ್ರೋತ್ಸಾಹ ನೀಡಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಮಕೃಷ್ಣ ವಿದ್ಯಾಲಯದ ವ್ಯವಸ್ಥಾಪಕ ಸುಧಾಕರ್ ಮಾತನಾಡಿ, ಕನ್ನಡದ ಪ್ರಸಿದ್ಧ ಕವನಗಳು ಹಾಡುಗಾರರ ಮೂಲಕ ಯಶಸ್ವಿಗೊಂಡಿವೆ.
ಕವಿ ಒಂದು ಮನೋಧರ್ಮದಲ್ಲಿ ಪದ್ಯವನ್ನು ಬರೆದಿರೆ, ಅದು ಗೇಯತೆಗೆ ಒಳಪಟ್ಟಾಗ ಹೊಸ ಆವರಣ ತೆರೆದಿಡುತ್ತದೆ. ಕವಿ ತನ್ನ ಕಾವ್ಯಗುಣಗಳ ಮೂಲಕ ಜನರ ಹತ್ತಿರಕ್ಕೆ ಹೋಗುತ್ತಾನೆ ಎಂದರು.
ಡೈಮಂಡ್ ಜೆಸೀಸ್ ಅಧ್ಯಕ್ಷ ಕಾನುಮನೆ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ವಿನಾಯಕ ಅರೆಮನೆ, ಗಿರೀಶ್, ಆದರ್ಶ ಹಿರೆಮಣತಿ, ಕಾರ್ಗಡಿ ಸಂತೋಷ್, ಸ್ವರೂಪ್ ಮತ್ತಿತರರಿದ್ದರು.
ಮನಸೂರೆಗೊಂಡ ಗಾಯನ:  ಬೃಂದಾವನಕೆ ಹಾಲನು ಮಾರಲು, ಓ ಬಂದ ಗುರು ವಿವೇಕಾನಂದ, ಬೆಣ್ಣೆ ಕದ್ದ ನಮ್ಮ ಕೃಷ್ಣ, ಹೊಸ ಹಾದಿಯನು ಹಿಡಿದು ಮುಂತಾದ ಗೀತೆಗಳನ್ನು ಸಾಗರದ ಸಹನಾ ಜಿ. ಭಟ್ ಸುಶ್ರಾವ್ಯವಾಗಿ ಹಾಡಿದರು.
ಹೊಸನಗರದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಆಯೋಜಿಸಿದ್ದ ಯುವ ಸೌರಭದಲ್ಲಿ ಗುರುವಾರ ಗಾನಪ್ರಭೆ ಶ್ರೋತ್ರುಗಳನ್ನು ರಂಜಿಸಿತು.
ಕುವೆಂಪು, ಗೋಪಾಲಕೃಷ್ಣ ಅಡಿಗ, ಡಾ.ಚಂದ್ರಶೇಖರ ಕಂಬಾರ, ದ.ರಾ.ಬೇಂದ್ರೆ, ಡಾ. ಜಿ.ಎಸ್. ಶಿವರುದ್ರಪ್ಪ ಮೊದಲಾದ ಕವಿಗಳ ಕವನಗಳನ್ನು ಸಹನಾ ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.