ಶಿವಮೊಗ್ಗ

ಬತ್ತ ಖರೀದಿ ಕೇಂದ್ರಕ್ಕೆ ಗೋದಾಮೇ ಇಲ್ಲ

Published On :

ಶಿರಾಳಕೊಪ್ಪ: ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಿರಾಳಕೊಪ್ಪ ಖರೀದಿ ಕೇಂದ್ರದ ಆವರಣದಲ್ಲಿ ಬತ್ತದ ಮೂಟೆಗಳು ಹಾಗೆಯೇ ಬಿದ್ದಿದ್ದು, ಅವುಗಳನ್ನು ತಕ್ಷಣ ಖಾಲಿ ಮಾಡಲು ಗೋಡೌನ್ ಇಲ್ಲ. ಬೇರೆ ಕಡೆ ಸಾಗಿಸಲು ಲಾರಿ ವ್ಯವಸ್ಥೆ ಇಲ್ಲದೇ ಪರಿತಪಿಸುವಂತಾಗಿದೆ.
ಗುರುವಾರ ಶಿರಾಳಕೊಪ್ಪ ಪಟ್ಟಣದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಧರ್ಮೋಜಿರಾವ್ ಅವರಿಗೆ ರೈತರು ಮತ್ತು ಖರೀದಿ ಕೇಂದ್ರದ ವ್ಯವಸ್ಥಾಪಕರು ಖರೀದಿ ಕೇಂದ್ರದ ಆವರಣದಲ್ಲಿ 6000ಕ್ಕೂ ಹೆಚ್ಚು ಬತ್ತದ ಚೀಲಗಳು ಬಿದ್ದಿವೆ. ಅವುಗಳನ್ನು ತಕ್ಷಣ ಖಾಲಿ ಮಾಡಿದರೆ ನಿರೀಕ್ಷೆಯಷ್ಟು ಬತ್ತದ ಖರೀದಿ ಮಾಡಬಹುದು ಎಂದು ಜಿಪಂ ಸದಸ್ಯ ರುದ್ರಪ್ಪ ದಾನೇರ್ ಉಪ ತಹಸೀಲ್ದಾರ್ ಆನಂದ ಗರಡಿ ಮತ್ತು ಖರೀದಿ ಕೇಂದ್ರದ ಸಿಬ್ಬಂದಿ ಮನವಿ ಮಾಡಿದರು.
ಖರೀದಿ ಕೇಂದ್ರಲ್ಲಿ ರೈತರಿಗೆ ಮುಂದಿನ 2 ತಿಂಗಳುಗಳ ನಂತರದ ದಿನಾಂಕವನ್ನು ಕೊಟ್ಟು ಖರೀದಿ ಮಾಡುವುದಾಗಿ ಖರೀದಿ ಕೇಂದ್ರದಲ್ಲಿ ತಿಳಿಸಲಾಗುತ್ತಿದೆ. ಹಾಗೆಯೇ ಬತ್ತ ಸರಬರಾಜು ಮಾಡಲು ಸಾಕಷ್ಟು ಲಾರಿ ಇಲ್ಲದೇ ಗೋಡೌನ್ ಇಲ್ಲದೇ ಬಯಲಲ್ಲಿ ಹಾಕಲಾಗಿದೆ. ಈ ಬಗ್ಗೆ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಲಾಯಿತು.
ಸಾಗಣೆದಾರರಿಗೆ ಪೋನ್ ಮಾಡಿದರೆ ಪೋನ್ ಎತ್ತುತ್ತಿಲ್ಲ. ಲಾರಿ ಕಳಿಸುತ್ತಿಲ್ಲ. ಹೀಗಾಗಿ, ಅವ್ಯವಸ್ಥೆ ಆಗಿದೆ ಎಂದು ತಹಸೀಲ್ದಾರ್ ತಮ್ಮ ಅಸಹಾಯಕತೆ ಹೇಳಿಕೊಂಡರು.
ರೈತರ ಗೋಳು:  ಬತ್ತದ ದರ ಮಾರುಕಟ್ಟೆಯಲ್ಲಿ ಕುಸಿತ ಕಂಡು ಹೆಚ್ಚಿನ ರೈತರು ಖರೀದಿ ಕೇಂದ್ರದಕಡೆ ಒಲವು ತೋರಿಸಿದ್ದು, ಖರೀದಿ ಕೇಂದ್ರಕ್ಕೆ ಬತ್ತ ಮಾರಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ಖರೀದಿ ಕೇಂದ್ರದಲ್ಲಿ ರೈತರಿಗೆ 2 ತಿಂಗಳ ದಿನಾಂಕ ಕೊಡುತ್ತಿರುವುದರಿಂದ ರೈತರು ಮಾರುಕಟ್ಟೆಯಲ್ಲಿ ಬತ್ತವನ್ನು ಮಾರಾಟ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.