ಶಿವಮೊಗ್ಗ

ಶ್ರೀ ರಾಮೇಶ್ವರ ತೆಪ್ಪೋತ್ಸವ ಸಂಪನ್ನ

Published On :

ತೀರ್ಥಹಳ್ಳಿ:  ತುಂಗಾ ತೀರದಲ್ಲಿ  ಅಕರ್ಷಕ ಸಿಡಿಮದ್ದುಗಳ ಪ್ರದರ್ಶನ,  ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವಕ್ಕೆ ಕಳೆಗಟ್ಟಿತು. ಎಳ್ಳವಮಾಸ್ಯೆ  ಜಾತ್ರೆಯ  ಅಕರ್ಷಣೆಯ ಉತ್ಸವವಾದ ಶ್ರೀದೇವರ ತೆಪ್ಪೋತ್ಸವ ಶುಕ್ರವಾರ ರಾತ್ರಿ ತುಂಗಾನದಿಯ ಇಕ್ಕೆಲಗಳಲ್ಲಿ ವಿದ್ಯುತ್ ಆಲಂಕೃತ ಪರಿಸರದಲ್ಲಿ  ಸಂಪನ್ನಗೊಂಡಿತು.  ಸಿಡಿಮದ್ದುಗಳ ಪ್ರದರ್ಶನದ ಜೊತೆಗೆ ನದಿ ದಡದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆಡೆದವು. ರಥಬೀದಿ ಜಾಮ್:  ರಥೋತ್ಸವದ ರಾಜಮಾರ್ಗ ರಥಬೀದಿ ಜನಜಂಗುಳಿಯಿಂದ ತುಂಬಿಹೋಗಿತ್ತು. ತೆಪ್ಪೋತ್ಸವದಲ್ಲಿ ಭಾರಿ ಜನಸ್ತೋಮ ನೆರೆದಿತ್ತು. ಓಡಾಟ ದುಸ್ತರವಾಗಿತ್ತು.      ಶ್ರೀರಾಮೇಶ್ವರ ದೇವರ ಉತ್ಸವಮೂರ್ತಿಯ ಪಲ್ಲಕ್ಕಿ ಉತ್ಸವ ರಥಬೀದಿಯಲ್ಲಿ ಸಾಗಿ, ತುಂಗಾತೀರ ತಲುಪಿದ್ದಂತೇ ಜನರ ಹರ್ಷೋದ್ಘಾರ ಮುಗಿಲುಮುಟ್ಟಿತು. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಮುಜರಾಯಿ ಅಧಿಕಾರಿ, ತಹಸೀಲ್ದಾರ್ ಗಣೇಶ ಮೂರ್ತಿ ಹಾಜರಿದ್ದರು.  ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.