ಶಿವಮೊಗ್ಗ

ಲಯನ್ಸ್ ಕ್ಲಬ್ನಿಂದ ಶಿಕ್ಷಣಕ್ಕೆ ಆದ್ಯತೆ

Published On :

ಶಿಕಾರಿಪುರ: ಸೇವೆ ಸೌಹಾರ್ದತೆಯ ಧ್ಯೇಯ ಹೊಂದಿರುವ ಲಯನ್ಸ್ ಕ್ಲಬ್ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸಮಾಜ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿದೆ ಎಂದು ಲಯನ್ಸ್ ಕ್ಲಬ್ ಡಿ. 317- ಸಿ ರಾಜ್ಯಪಾಲ ಎಚ್.ಎನ್. ಶಿವಕುಮಾರ್ ಅವರು ತಿಳಿಸಿದರು.
ಶುಕ್ರವಾರ ಪಟ್ಟಣದ ಲಯನ್ಸ್ ವಿದ್ಯಾ ಸಂಸ್ಥೆಗೆ ಭೇಟಿ ನೀಡಿ ಪ್ರತಿ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಪರೀಕ್ಷಿಸಿ, ಶಾಲೆಯ ಮೂಲ ಸೌಕರ್ಯ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಬೃಹತ್ ಸೇವಾ ಸಂಸ್ಥೆಯಾಗಿದೆ. ಪ್ರಪಂಚದ 208 ರಾಷ್ಟ್ರಗಳಲ್ಲಿ 46 ಸಾವಿರ ಕ್ಲಬ್ಗಳ ಮೂಲಕ 13.5 ಲಕ್ಷ ಸದಸ್ಯರನ್ನು ಹೊಂದಿದೆ ಎಂದರು.
ಶಿಕಾರಿಪುರ ಕ್ಲಬ್ ವತಿಯಿಂದ ಈಗಾಗಲೇ ಹಲವು ಬಾರಿ ಕಣ್ಣಿನ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಾರ್ಕೂರು, ಬ್ರಹ್ಮಾವರ ಹಾಗೂ ಹಿರಿಯೂರು ಕ್ಲಬ್ ಶಾಶ್ವತ ಕಣ್ಣಿನ ಆಸ್ಪತ್ರೆ ಆರಂಭಿಸಿ ಸಂಸ್ಥೆಯ ಕಾಳಜಿ ಎತ್ತಿ ಹಿಡಿದಿದೆ ಎಂದರು.
ಶಿಕಾರಿಪುರದ ಲಯನ್ಸ್ ವಿದ್ಯಾ ಸಂಸ್ಥೆ ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಿದೆ. ದಾವಣಗೆರೆ, ಹೊಳೆಹೊನ್ನೂರು, ಮಲೇಬೆನ್ನೂರು, ಪಡುಬಿದ್ರೆ, ಸೊರಬದಲ್ಲಿ ಸಂಸ್ಥೆಯ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದು, ಸಂಸ್ಥೆ ಶಾಲೆಯನ್ನು ಹಲವೆಡೆ ದತ್ತು ಪಡೆದು ಅವಶ್ಯಕ ಪರಿಕರ ವಿತರಿಸುವ ಕಾರ್ಯ ಮಾಡುತ್ತಿದೆ ಎಂದರು.
ಶಿಕಾರಿಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಕೆ. ಮಲ್ಲಿಕಾರ್ಜುನ್ ಮಾತನಾಡಿ, ಜ. 5 ರಂದು ಸಂಸ್ಥೆಯ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಜ. 23ರಂದು ಸೀಳು ತುಟಿ ಹಾಗೂ ಹೃದಯ ತಪಾಸಣೆ ಶಿಬಿರ ಆಯೋಜಿಸಿರುವುದಾಗಿ ತಿಳಿಸಿದರು.
ಕಾರ್ಯದರ್ಶಿ ಅನಿಲ್ ಪ್ರಸಾದ್, ಖಜಾಂಚಿ ಕರಿಬಸಪ್ಪ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಶೇಖರಪ್ಪ, ಕಾರ್ಯದರ್ಶಿ ಡಾ. ದಯಾನಂದ್, ವಿಶ್ವನಾಥ ಶಾಸ್ತ್ರಿ, ಮೋಹನ್ಸಾನು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.