ಶಿವಮೊಗ್ಗ

ಸಾಹಿತಿ ನಾ. ಡಿ'ಸೋಜಾಗೆ ನೀರಿನ ಮೇಲೆ ಸನ್ಮಾನ

Published On :

ಹೊನ್ನೇಮರಡು (ಸಾಗರ): ಮಲೆನಾಡಿನೊಳಗೆ ಹಾಳಾಗುತ್ತಿರುವ ಮಾನವೀಯ ಸಂಬಂಧಗಳು, ಮನುಷ್ಯತ್ವ ಹಾಗೂ ಅದು ಸರಿದಾರಿಗೆ ಬರಬೇಕಾದ ರೀತಿಯ ಕುರಿತು ಮೆದು ದನಿಯಲ್ಲಿ ಮನಮುಟ್ಟುವಂತೆ ಸಾಹಿತ್ಯ ಕಟ್ಟಿ ಕೊಟ್ಟ ಸಾಹಿತಿ ನಾ. ಡಿ'ಸೋಜಾ. ಅವರು ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಯೋಜಿತಗೊಂಡ ಹಿನ್ನೆಲೆಯಲ್ಲಿ ಅವರಿಗೆ ನೀರ ಮೇಲೆಯೇ ಶುಕ್ರವಾ ಸನ್ಮಾನಿಸಲಾಯಿತು. ಡಿ'ಸೋಜಾ ಅವರ ಸಾಹಿತ್ಯದ ಮೂಲ ವಿಷಯವೇ ಮಲೆನಾಡು, ಶರಾವತಿ, ಮುಳುಗಡೆ. ಅವರ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸ್ಥಳದಲ್ಲಿಯೇ ಸಾಹಿತ್ಯಾಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ್ದು ವಿಶೇಷವಾಗಿತ್ತು. ಭಾರತೀಯ ಸಾಹಸ ಸಮನ್ವಯ ಕೇಂದ್ರ ಹೊನ್ನೇಮರಡು ಹಿನ್ನೀರಿನ ಮೇಲೆ ನಾ. ಡಿ'ಸೋಜಾ ಅವರನ್ನು ಆತ್ಮೀಯವಾಗಿ ಗೌರವಿಸಿತು. ವಿಶೇಷವೆಂದರೆ, ತೆಪ್ಪದಲ್ಲಿ ನಾ. ಡಿ'ಸೋಜಾ ದಂಪತಿಯನ್ನು ಕೂರಿಸಿ ಶರಾವತಿ ನದಿ ನೀರಿನ ಮಧ್ಯೆಯೇ ಗೌರವಿಸಲಾಯಿತು. ಕಾರ್ಯಕ್ರಮ ಆಯೋಜಕ ಸಂಸ್ಥೆಯ ಪರವಾಗಿ ಪ್ರಸಾರ ಭಾರತಿ ಕಾರ್ಯಕ್ರಮ ನಿರ್ಮಾಪಕ ಎಚ್.ಎನ್. ಆರತಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾ. ಡಿಸೋಜ ಅವರು, ನೀರಿನ ಮೇಲೆ ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ವಿಶೇಷವೆನಿಸುತ್ತಿದೆ. ಹಾಗೆಯೇ ಬೇಸರವೂ ಇದೆ. ಇದೇ ಹಿನ್ನೀರಿನ ಕೆಳಗೆ ಹಿಂದೆ ಹಲವಾರು ಹಳ್ಳಿಗಳಿದ್ದು, ಅನೇಕರು ಕೃಷಿ ಮೂಲಕ ಬದುಕು ಕಟ್ಟಿಕೊಂಡಿದ್ದರು. ಎಲ್ಲವೂ ಇವತ್ತು ಡ್ಯಾಂ ಕಟ್ಟಿದ್ದರಿಂದ ನೀರಿಗೆ ಬಲಿಯಾಗಿವೆ. ಅದು ಅನಿವಾರ್ಯ ಅನ್ನಿಸಿದರೂ ಮಾನವೀಯವಾಗಿ ನೋಡುವಾಗ ನನ್ನನ್ನು ಕಾಡುತ್ತಿದೆ ಎಂದರು. ನಾನು ಖಂಡಿತವಾಗಿ ಪ್ರಗತಿಯ ವಿರೋಧಿಯಲ್ಲ. ಪರಿಸರ ಉಳಿಸಿಕೊಂಡೇ ಪ್ರಗತಿ ಸಾಧಿಸಬೇಕೆಂಬುದು ನನ್ನ ಆಶಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.