ಶಿವಮೊಗ್ಗ

ಕಟ್ಟೆಹಕ್ಲು ಶಾಲೆಯಲ್ಲಿ ಸೈಕಲ್ ವಿತರಣೆ

Published On :

ತೀರ್ಥಹಳ್ಳಿ: ಇಲ್ಲಿಗೆ ಸಮೀಪದ ಕಟ್ಟೆಹಕ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಸೈಕಲ್ ವಿತರಿಸುವ ಕಾರ್ಯಕ್ರಮ ನಡೆಯಿತು. ಸಾಂಕೇತಿಕವಾಗಿ ಸೈಕಲ್ ವಿತರಿಸಿ ಮಾತನಾಡಿದ ಜಿಪಂ ಸದಸ್ಯ ಹಾರೊಗೊಳಿಗೆ ಪದ್ಮನಾಭ, ಶೈಕ್ಷಣಿಕ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಯೋಜನೆ ನೀಡುತ್ತಿದೆ. ಶೈಕ್ಷಣಿಕಮಟ್ಟ ಉತ್ತಮವಾಗಬೇಕೆಂದು ಸರ್ಕಾರದ ಆಶಯ. ಮಕ್ಕಳು ಯೋಜನೆ ಸದುಪಯೋಗಪಡೆದುಕೊಂದು ಉತ್ತಮ ಸಾಧನೆ ತೋರುವಂತೆ ಕರೆ ನೀಡಿದರು. ಕಟ್ಟೆಹಕ್ಲು ಪ್ರೌಢಶಾಲೆಗೆ ಈಗಾಗಲೇ 3 ಲಕ್ಷ ಅನುದಾನ ಕೊಡಲಾಗಿದೆ. ಮುಂದೆ ಈ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದರೆ ಇನ್ನಷ್ಟು ಅನುದಾನ ಕೊಡುವುದಾಗಿ ಘೋಷಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತಾಲೂಕು ಪಂಚಾಯಿತಿ ಸದಸ್ಯ ಎಚ್.ಎಸ್. ಕಿರಣ್ ಮಾತನಾಡಿ, ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಯೋಜನೆ ಇದ್ದು, ಅದರ ಸದ್ಭಳಕೆಯಾಗಬೇಕು ಎಂದರು. ಗ್ರಾಪಂ ಅಧ್ಯಕ್ಷ ಶಾರದಾ ಬಾಬು ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಕೂಳೂರು ಕೃಷ್ಣಮೂರ್ತಿ, ಸದಸ್ಯರಾದ ರತ್ನಾಕರಾಚಾರ್, ವತ್ಸಲಾ, ಜ್ಯೋತಿ, ಹಸನಬ್ಬ, ಕೆ.ಜಿ. ಹಸನ್ ಕಟ್ಟೆಹಕ್ಲು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.