ಶಿವಮೊಗ್ಗ

ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ: ಬಾಲರಾಜು

Published On :

ಶಿವಮೊಗ್ಗ: ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ಶ್ರದ್ಧೆಯಿಂದ ಕಲಿತರೆ ಆ ಭಾಷೆಯನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎನ್. ಬಾಲರಾಜು ಹೇಳಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆ, ಪ್ರಿಯದರ್ಶಿನಿ ಡಿ.ಇಡಿ ಕಾಲೇಜು ಆಶ್ರಯದಲ್ಲಿ ಭಾನುವಾರ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನುರಿತ ಉಪನ್ಯಾಸಕರಿಂದ ಉಚಿತ ಇಂಗ್ಲಿಷ್ ವಿಷಯದ ಪರೀಕ್ಷೆಗೆ ಪೂರ್ವಭಾವಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇಂದು ಇಂಗ್ಲಿಷ್ ಅನಿವಾರ್ಯ ಮತ್ತು ಅಗತ್ಯ ಇಂತಹ ಭಾಷೆಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬೇಕು. ಆದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಸು ಕಷ್ಟವೇ. ಇದನ್ನು ಮನಗಂಡು ಇಲಾಖೆ ಈ ಕಾರ್ಯಾಗಾರ ಹಮ್ಮಿಕೊಂಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳು ಸತತ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ತಮ್ಮ ಭವಿಷ್ಯವನ್ನು ಭವ್ಯವಾಗಿ ರೂಪಿಸಿಕೊಳ್ಳಬಹುದು ಎಂದರು.
ತಾಲೂಕು ಸಮಾಜ ಕಲ್ಯಾಣಧಿಕಾರಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಒಂದಿಷ್ಟು ಶ್ರದ್ಧೆ, ಆಸಕ್ತಿ ಆತ್ಮವಿಶ್ವಾಸವಿದ್ದರೆ ಯಾವ ಭಾಷೆಯನ್ನಾದರೂ ಕಲಿಯಬಹುದು. ಹಾಗಾಗಿ ಇಂಗ್ಲಿಷ್ ಕಷ್ಟವೇನಲ್ಲ. ಇಂತಹ ಕಾರ್ಯಾಗಾರಗಳಿಂದ ಮಕ್ಕಳು ಉಪಯೋಗ ಪಡೆದು ಹೆಚ್ಚು ಅಂಕ ಪಡೆಯಲಿ ಎಂದು ಕರೆ ನೀಡಿದರು.
ಇಂಗ್ಲಿಷ್ ಉಪನ್ಯಾಸಕಿ ರಮಾಮಣಿ ಮಾತನಾಡಿ, ಇಂಗ್ಲಿಷ್ ಬಗ್ಗೆ ಮಕ್ಕಳಿಗೆ ಕೀಳರಿಮೆ ಬೇಡ. ಅದು ಕಷ್ಟವಲ್ಲ. ಗ್ರಾಮೀಣರಿಗಿಂತ ನಗರ ಪ್ರದೇಶದವರೆ ಇಂಗ್ಲಿಷ್ ಭಾಷೆಯನ್ನು ತಪ್ಪಾಗಿ ಮಾತನಾಡುತ್ತಾರೆ. ಹಾಗಾಗಿ ನಮ್ಮ ಹಳ್ಳಿ ಮಕ್ಕಳು ಕಡಿಮೆಯೆನ್ನಲ್ಲ. ತಪ್ಪಾದರೂ ಚಿಂತೆಯಿಲ್ಲ, ಪರಸ್ಪರ ಮಾತನಾಡುವಾಗ ಇಂಗ್ಲಿಷ್ ಮಾತಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ಲೋಬಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ನುರಿತ ತಜ್ಞ ಉಪನ್ಯಾಸಕರು ಮಕ್ಕಳಿಗಾಗಿ ಪಾಠ ಮಾಡುತ್ತಾರೆ. ಇಂತಹ ಒಳ್ಳೆಯ ಅವಕಾಶವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕು ಎಂದರು.
ಶಿವಗಂಗಮ್ಮ ವಂದಿಸಿದರು. ಕೋಟ್ರೆಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.