ಪ್ರಜಾ ಪರಿವರ್ತನಾ ವೇದಿಕೆ ಉದ್ಘಾಟನೆ
ಶಿವಮೊಗ್ಗ: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೇಲ್ವರ್ಗದ ಜನಾಂಗದವರೇ ಹೆಚ್ಚಿನ ಕಾಲ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಆದ್ದರಿಂದ ದೇಶ ಮತ್ತು ರಾಜ್ಯದಲ್ಲಿ ಸಮಾನತೆ ಮೂಡಲು ಸಾಧ್ಯವಾಗಿಲ್ಲ ಎಂದು ಸರ್ವಜನ ಸಮಾಜ ವೇದಿಕೆ ರಾಜ್ಯಾಧ್ಯಕ್ಷ ಬಿ. ಗೋಪಾಲ್ ಹೇಳಿದರು.
ಸರ್ವಜನ ಸಮಾಜ ವೇದಿಕೆ ಜಿಲ್ಲಾ ಘಟಕದಿಂದ ಭಾನುವಾರ ನಗರದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ಆಯೋಜಿಸಿದ್ದ ಪ್ರಜಾ ಪರಿವರ್ತನಾ ವೇದಿಕೆ ಉದ್ಘಾಟಿಸಿ ಅವರು, ಬಹುಸಂಖ್ಯಾತರಾಗಿದ್ದರೂ ಹಿಂದುಳಿದ ವರ್ಗದವರು ಹೆಚ್ಚಿನ ಅಧಿಕಾರ ಅನುಭವಿಸಿಲ್ಲ. ಪರಿಸ್ಥಿತಿ ಹೀಗಿರುವಾಗ ಇನ್ನೆಲ್ಲಿ ರಾಜಕೀಯ ಸಮಾನತೆ ದೊರೆಯುತ್ತಿದೆ. ಇದನ್ನು ಸಮಾಜದ ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ತಿಳಿಸಿದರು.
ಬಹುಸಂಖ್ಯಾತರಾಗಿದ್ದರೂ ಹಿಂದುಳಿದ ವರ್ಗದವರು ಹೆಚ್ಚಿನ ಅಧಿಕಾರ ಅನುಭವಿಸಿಲ್ಲ. ೆನೂರಾರು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ, ವರ್ಗದ ಜನರು ವಿದ್ಯಾಭ್ಯಾಸವಿಲ್ಲದೆ ದೌರ್ಜನ್ಯಗೊಳಗಾಗಿದ್ದರು. ಇಂದಿಗೂ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಹಿಂದುಳಿದವರ ಸಂಖ್ಯೆ ಕಡಿಮೆ ಇದೆ. ಹಿಂದುಳಿದ ಜನರ ಇತಿಹಾಸ, ಅನುಭವಿಸಿದ ಕಷ್ಟಗಳು ಇದ್ಯಾವುದೂ ಪಠ್ಯಪುಸ್ತಕಗಳಲ್ಲಿ ಉಲ್ಲೇಖವಾಗಿಲ್ಲ. ಹೀಗಾಗಿ ಇಂದಿನ ಯುವಪೀಳಿಗೆಗೆ ಸಮಾಜದ ಬಗ್ಗೆ ಯಾವುದೇ ಅರಿವಿಲ್ಲದಿರುವುದು ವಿಷಾದನೀಯವೆಂದರು. ಇತಿಹಾಸ ತಿಳಿಯದವರು ಎಂದು ಇತಿಹಾಸ ನಿರ್ಮಿಸಲಾರರು. ತಮ್ಮ ಸಮಾಜ ನಡೆದು ಬಂದ ದಾರಿ, ಸಮಾನತೆಗಾಗಿ ಹೋರಾಡಿದ ಮಹನೀಯರನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ವೇದಿಕೆ ಜಿಲ್ಲಾಧ್ಯಕ್ಷೆ ಭುವನೇಶ್ವರಿ, ಸಮಾಜದ ಬಿ.ಆರ್. ಪ್ರಕಾಶ್, ಈಶ್ವರಪ್ಪ, ರಾಚಪ್ಪ, ಎನ್.ರಾಮು ಇದ್ದರು.
--
ಅಪಘಾತ: ಬಾಲಕ ಸಾವು
ಶಿವಮೊಗ್ಗ: ಬೈಕ್ ಮತ್ತು ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಹೊನ್ನಾಳಿ ರಸ್ತೆಯಲ್ಲಿ ನಡೆದಿದೆ.
ತ್ಯಾವರೆಚಟ್ನಹಳ್ಳಿ ಬಳಿಯ ವಡ್ಡರಹಟ್ಟಿಯ ವಾಸಿ ಹೇಮಂತ್ ಕುಮಾರ್(15) ಮೃತಪಟ್ಟ ಬಾಲಕ. ಸ್ಥಳೀಯ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಹೇಮಂತ್ ಹೊನ್ನಾಳಿ ರಸ್ತೆಯಲ್ಲಿ ನಡೆದು ಹೋಗುವಾಗ ತಮಿಳುನಾಡಿಗೆ ಸೇರಿದ ಲಾರಿ ಡಿಕ್ಕಿ ಹೊಡೆದಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

