ಹೊಂಪೊಳೆ, ಸಕ್ಸೇನಾ ವಿರುದ್ಧ ಖಾಸಗಿ ದೂರು
ಶಿವಮೊಗ್ಗ: ಐಎಫ್ಎಸ್ ಅಧಿಕಾರಿ ನಾಗರಾಜ್ ಹೊಂಪೊಳೆ ಮತ್ತು ಐಎಎಸ್ ಅಧಿಕಾರಿ ಮೀರಾ ಸಕ್ಸೇನ ವಿರುದ್ದ ಶಿವವೊಗ್ಗ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಸೋಮವಾರ ಖಾಸಗಿ ದೂರು ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯದ ಕುಳ್ಳುಂಡೆ ಗ್ರಾಮದಲ್ಲಿ ಮರಗಳ ಕಡಿತಲೆಗೆ ಅವಕಾಶವಿಲ್ಲವೆಂದು ಶಿವಮೊಗ್ಗ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ತಿಳಿಸಿದರೂ ಕೂಡ, ನಿಯಮ ಉಲ್ಲಂಘಿಸಿ ಮರಗಳ ಮಲ್ಕಿಯನ್ನು ಹಳೆಯ ದರದಂತೆ ನಿಗದಿಪಡಿಸಿ ಕಡಿತಲೆಗೆ ಅನುಮತಿ ನೀಡಲಾಗಿದೆ. ನಂತರ ಹಲವು ಕಾನೂನು ಉಲ್ಲಂಘನೆ ಸಂಭವಿಸಿದೆ ಎಂದು ಆರೋಪಿಸಿ, ವಕೀಲ ಬಿ. ವಿನೋದ್ ಅವರು ದೂರು ಸಲ್ಲಿಸಿದ್ದಾರೆ. ಅಧಿಕಾರಿಗಳ ಈ ಕಾನೂನುಬಾಹಿರ ಕ್ರಮದಿಂದಾಗಿ ಸರ್ಕಾರಕ್ಕೆ ಭಾರಿ ನಷ್ಟವಾಗಿದೆ. ಪಿತೂರಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ವಿಶೇಷ ಲೋಕಾಯುಕ್ತ ನ್ಯಾಯಾಲಯದ ನ್ಯಾಯಮೂರ್ತಿ ಶರಶ್ಚಂದ್ರ ಅಂಗಡಿ ಅವರು ಅರ್ಜಿಯನ್ನು ಸ್ವೀಕರಿಸಿ, ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

