ಸ್ಪೆಷಲ್ ಒಲಂಪಿಕ್ಸ್: ಜಿಲ್ಲೆಯ ಸಾಧನೆ
ಶಿವಮೊಗ್ಗ: ರಾಜಸ್ಥಾನದ ಅಜ್ಮೀರ್ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೆಷಲ್ ಒಲಂಪಿಕ್ಸ್ನಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಶ್ರವಣ ನ್ಯೂನತೆ, ದೈಹಿಕ ನ್ಯೂನತೆ ಮತ್ತು ಬುದ್ದಿಮಾಂದ್ಯತೆ ಹೊಂದಿದ 7 ಮಕ್ಕಳು 4 ಚಿನ್ನದ ಪದಕ, 5 ಬೆಳ್ಳಿಯ ಪದಕ ಹಾಗೂ 1 ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅವರಲ್ಲಿ ಶ್ರೀನಿವಾಸ್ 4-100ರಿಲೇ ಚಿನ್ನದ ಪದಕ ಮತ್ತು 100ಮೀ. ಓಟ-ಕಂಚಿನ ಪದಕ, ಹೇರಂಭ- ಶಾಟ್ಪುಟ್ ಚಿನ್ನದ ಪದಕ, ಪ್ರತಿಭಾ-100 ಮೀ. ಓಟ- ಚಿನ್ನದ ಪದಕ, ಶಾಟ್ಪುಟ್ ಬೆಳ್ಳಿ ಪದಕ, ಸುಹಾಸ- 100ಮೀ. ಓಟ-ಚಿನ್ನದ ಪದಕ, ರಿಲೇ-ಬೆಳ್ಳಿಯ ಪದಕ, ಮಯೂರ ಹೆಗಡೆ- ಬ್ಯಾಡ್ಮಿಂಟನ್ ಬೆಳ್ಳಿಯ ಪದಕ, ಹಳದೀಶ್ ಫುಟ್ಲ್ ಬೆಳ್ಳಿಯ ಪದಕ ಮತ್ತು ರವಿ-ಫುಟ್ಬಾಲ್ ಬೆಳ್ಳಿಯ ಪದಕ ಗಳಿಸಿದವರಾಗಿದ್ದಾರೆ.
ಪ್ರತಿಭಾವಂತ ಕ್ರೀಡಾಪಟುಗಳನ್ನು ಜನವರಿ 8ರಂದು ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಉಪಾಧ್ಯಕ್ಷೆ ಹೇಮಾ ಪಾವನಿ, ಸಂಸದ ಬಿ.ವೈ. ರಾಘವೇಂದ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅಭಿನಂದಿಸಿ ಗೌರವಿಸಿದರು.
ಪ್ರತಿಭಾವಂತ ಮಕ್ಕಳಿಗೆ ಸ್ಪೆಷಲ್ ಒಲಂಪಿಕ್ಸ್ನ ಜಿಲ್ಲಾ ಸಂಯೋಜಕ ಪ್ರದೀಪ್ಕುಮಾರ್, ಎಲ್.ಎಸ್., ಸಂಚಾಲಕ ಮಂಜಯ್ಯ ಬಿ.ಎಸ್., ಮಾರ್ಗದರ್ಶಕರಾದ ಜಯಪ್ಪ, ಹರೀಶ್, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸಮನ್ವಯಾಧಿಕಾರಿಗಳು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

