ಶಿವಮೊಗ್ಗ

ಉತ್ಸವ ಕಲಾನ್ವೇಷಣೆಯ ಸೇತುವೆಯಾಗಲಿ

Published On :

ಸೊರಬ: ಉತ್ಸವಗಳು ಕೇವಲ ಮನೋರಂಜನಾ ಸಮಾರಂಭಗಳಾಗದೆ ಕಲಾನ್ವೇಷಣೆಯ ಸೇತುವೆಯಂತಾಗಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾಮಲ್ಲಿಕಾರ್ಜುನ್ ತಿಳಿಸಿದರು.
ತಾಲೂಕಿನ ಆನವಟ್ಟಿಯಲ್ಲಿ ನಡೆದ ಆನವಟ್ಟಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಮಹಿಳಾ ಸಮಾನತೆ, ಸಾಧನೆ ಪ್ರಗತಿಯಲ್ಲಿರುವುದರ ನಡುವೆಯೆ ದೌರ್ಜನ್ಯ ಕೂಡ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಇಂತಹ ವಿಚಾರಗಳು ಖಂಡನೀಯ ಎಂದರು.
ಸಾಲಿಗ್ರಾಮ ಡಿವೈನ್ ಪಾರ್ಕಿನ ಶಿವಶಂಕರಪ್ಪ ಬ್ಯಾಡಗಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ರೇಣುಕಾಂಬ ಟ್ರಸ್ಟ್ನ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ ಪಾಲ್ಗೊಂಡಿದ್ದರು.
ಚಟುವಟಿಕೆ: ಆನವಟ್ಟಿ ಸುತ್ತಮುತ್ತಲಿನ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನ, ಸುಜಾತ ಮತ್ತು ಅನುರಾದ ಇವರಿಂದ ಗೀಗಿಪದ, ದೆಹಲಿ ರಾಷ್ಟ್ರಪತಿ ಭವನದಲ್ಲಿ ತೀರ್ಥಹಳ್ಳಿ ಕಮ್ಮರಡಿ ಜ್ಯೋತಿ ನಾಗರಾಜ್ ನಿರ್ದೇಶಿಸಿ, ನೃತ್ಯ ಪ್ರದರ್ಶಿಸಿ, ಪ್ರಶಂಸೆಗೊಳಗಾದ ನಾಟ್ಯ ಭಾರತಿ ಕಲಾ ಮಂದಿರದ  ತಂಡದವರಿಂದ ಸತ್ಯವಿಠಲ ವಿರಚಿತ ನರಸಿಂಹ ಸ್ತೋತ್ರ ಮತ್ತು ಅನ್ನಪೂರ್ಣೇಶ್ವರಿ ವೈಭವದ ನೃತ್ಯ ರೂಪಕ, ಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆಯ ಉಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಿಸ್ ಆನವಟ್ಟಿ ಸ್ಪರ್ಧೆ, ಸಾಧಕರಿಗೆ ಸನ್ಮಾನ ಮುಂತಾದ ಸಾಂಸ್ಕೃತಿಕ, ಸ್ಪರ್ಧಾ ಚಟುವಟಿಕೆಗಳು ನಡೆದವು.
ಸ್ಪರ್ಧಾ ವಿಜೇತರು: ಸೀರೆಯ ಉಡುಗೆ ಸ್ಪರ್ಧೆಯಲ್ಲಿ ಸುಧಾ, ಯಶ್ವಿತಾ, ರಾಜೇಶ್ವರಿ, ರಂಗೋಲಿ ಸ್ಪರ್ಧೆಯಲ್ಲಿ ಆಶಾ ಆಚಾರ್, ಕಲ್ಪನಾ ಶಿವಕುಮಾರ್, ಭೂಮಿಕ ಕ್ರಮವಾಗಿ ಬಹುಮಾನ ಪಡೆದರು.
ಪ್ರಾಯೋಜಕತ್ವ- ಶಿವಮೊಗ್ಗ ಜೀವನದಿ ಪ್ರಕಾಶನ, ಸೊರಬ ದೊಡ್ಮನೆ ರಾಮಪ್ಪ ಜ್ಯೂಯಲರ್ಸ್, ಆನವಟ್ಟಿ ಅರಣ್ಯ ಇಲಾಖೆ,  ಮೆಸ್ಕಾಂ ಇಲಾಖೆ, ಬ್ಯಾಡಗಿ ಬಸನಗೌಡ, ಅಣ್ಣಾಜಿಗೌಡ, ಆನವಟ್ಟಿ ವಿಮಲೇಶ್ವರ ಜ್ಯೂಯಲರ್ಸ್ನ್ ಅರುಣ ಕುಮಾರ್, ಭಾರತ್ ಹಾರ್ಡ್ವೇರ್ ಮಾಲಿಕರು, ಕೃಷ್ಣಾ ಗಾರ್ಮೆಂಟ್ ಮಾಲಿಕರು ಇವರುಗಳು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಸಂಜಯಡೋಂಗ್ರೆ, ಶ್ರೀಧರಾಚಾರ್, ಹೆಚ್.ಜಯಪ್ಪ, ಪದ್ಮಾ ಸುರೇಶ್, ಮೈತ್ರಾ ಸುರೇಶ್, ಬಿ.ಪಾರ್ವತಿ, ಪಂಪಾ ಆರ್. ಮೊದಲಾದವರು ಇದ್ದರು. ಅಶೋಕ ಸ್ವಾಗತಿಸಿದರು. ಎಂ.ಸಿ.ಪರಸಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.