ಶಿವಮೊಗ್ಗ

ಕಳಪೆ ರಸ್ತೆ ಕಾಮಗಾರಿ: ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜ.13
ಕಳಪೆ ಕಾಮಗಾರಿ, ಭ್ರಷ್ಟಾಚಾರದ ವಿರುದ್ಧ ಪದೇಪದೇ ದನಿ ಎತ್ತುತ್ತಿರುವ ನಾಗರೀಕ ಹಿತರಕ್ಷಣಾ ವೇದಿಕೆಯು ಸೋಮವಾರ ಎರಡು ಹೊಸ ಪ್ರಕರಣಗಳನ್ನು ಎದುರಿಗಿಟ್ಟುಕೊಂಡು ನಗರಪಾಲಿಕೆ ಎದುರು ತೀವ್ರ ಪ್ರತಿಭಟನೆ ನಡೆಸಿತು.
ಕೆ.ಆರ್. ಪುರಂನ ವಂದನಾ ಟಾಕೀಸ್ ಬಳಿಯ ರಸ್ತೆ ಕಾಮಗಾರಿ ಹಾಗೂ ವಿನೋಬನಗರ ಪಾರ್ಕ್-ಗೋಪಾಳದಲ್ಲಿರುವ ಚಂದನಾ ಆರೋಗ್ಯ ಪಾರ್ಕ್ ಕಾಮಗಾರಿ ಕಳಪೆಯಾಗಿದ್ದು, ಸಂಬಂಧಪಟ್ಟ ಎಂಜಿನಿಯರ್ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ನಗರಸಭೆ ಪ್ರವೇಶದಲ್ಲಿ ಪ್ರತಿಭಟನೆ ನಡೆಸಿದರು.
ನಿರ್ಲಕ್ಷ್ಯ ಧೋರಣೆ: ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದು, ವೇದಿಕೆಯಿಂದ ಪ್ರತಿಭಾರಿ ಪ್ರತಿಭಟನೆ ಮಾಡಿತ್ತಿದ್ದರೂ ನಿರ್ಲಕ್ಷ್ಯ ಧೋರಣೆ ತಾಳಲಾಗಿದೆ. ನಗರಪಾಲಿಕೆ ಹಿರಿಯ ಅಧಿಕಾರಿಗಳು, ಆಯುಕ್ತರು, ಪಾಲಿಕೆ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಪಟ್ಟಿಗೆ ಸೇರಿಸಿ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಾಪೌರರಾದ ಖುರ್ಷಿದಾ ಬಾನು, ಆಯುಕ್ತ ಮೂಕಪ್ಪ ಕರೆಭೀಮಣ್ಣನವರು ಅವರು, ಮನವಿ ಸ್ವೀಕರಿಸಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ ಸಹ ಪಟ್ಟು ಬಿಡದೇ ಎಂಜಿನಿಯರ್ ಅಮಾನತು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಆಯುಕ್ತರು, ಸಂಬಂಧಪಟ್ಟ ಎಂಜಿನಿಯರ್ಗೆ ಶನಿವಾರ ನೋಟೀಸ್ ಕೊಟ್ಟಿದ್ದು, ಅವರು ಇನ್ನೊಂದು ವಾರದಲ್ಲಿ ಉತ್ತರಿಸಲಿದ್ದಾರೆ. ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರ ಸಭೆ ಕರೆದು ಅವರಿಗೆ ಎಚ್ಚರಿಕೆ ನೀಡಲಾಗುವುದು ಎಂದರು.
ಒಂದು ವಾರದ ಗಡವು ನೀಡಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕೆ.ವಿ. ವಸಂತಕುಮಾರ್, ಸತೀಶ್ ಶೆಟ್ಟಿ, ಅಶೋಕ್ ಯಾದವ್, ಜನಮೇಜಿರಾವ್, ಅಶೋಕ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆರೋಪಗಳಿವು: ವಂದನಾ ಟಾಕೀಸ್ ಬಳಿ ಕನ್ಸರ್ ವೆನ್ಸಿ ಬಾಕ್ಸ್ ಡ್ರೈನೇಜ್ ಕೆಳಭಾಗದಲ್ಲಿ 4 ಇಂಚು ದಪ್ಪ ಜಲ್ಲಿ ಕಾಂಕ್ರೀಟ್ ಬದಲು 2 ಇಂಚು ಕಾಂಕ್ರೀಟ್ ಹಾಕಲಾಗಿದೆ. ಸಿಮೆಂಟ್ ಮಿಶ್ರಣ ಬಳಸಿಲ್ಲ. ಕಾಮಗಾರಿ ಆದೇಶ ಪಡೆಯದೇ ಗುತ್ತಿಗೆದಾರ ಕಾರ್ಯನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.
ಗೋಪಾಳ ಚಂದನ ಆರೋಗ್ಯ ಪಾರ್ಕ್ ಅಭಿವೃದ್ಧಿ ಕಾಮಗಾರಿಯಲ್ಲಿ ಇಂಟರ್ ಲಾಕಿಂಗ್ ಟೈಲ್ಸ್ ಹಾಕುವಾಗ 500 ಎಂ.ಎಂ.ನಷ್ಟು ಮರಳು ಬಳಸಬೇಕಾಗಿದ್ದರೂ ಸಹ ಈ ರೀತಿ ಕಾಮಗಾರಿ ನಡೆಸದೇ ಏಳೆಂಟು ಲೋಡಿನಷ್ಟು ಮಣ್ಣು ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಾಕ್ಸ್ ಚರಂಡಿ ಕಾಮಗಾರಿಗಿಂತ ಮುಂಚೆ ನೀರು ವಿತರಣೆ ಪೈಪ್ ಲೈನ್ ಹಾಕಿಲ್ಲ. ಟೈಲ್ಸ್ ಗುಣಮಟ್ಟ ಸರಿಯಾಗಿಲ್ಲ. ನಾಲ್ಕೈದು ದಿನದಿಂದ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ನಗರ ಪಾಲಿಕೆ ಎಂಜಿನಿಯರ್ ಗಳು ಇತ್ತ ತಲೆಹಾಕಿಲ್ಲ. ಕಳಪೆ ಕಾಮಗಾರಿಗೆ ಸಹಕಾರ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದೇ ಎಂಜಿನಿಯರ್ ಲಗನ ಮಂದಿರ ಕಲ್ಯಾಣ ಮಂದಿರದ ರಸ್ತೆ ಅಭಿವೃದ್ಧಿಯಲ್ಲೂ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬುದು ಪ್ರತಿಭಟನಾಕಾರರ ಅಸಮಾಧಾನವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.