ಫೆ. 23ರಂದು ವೈದ್ಯಕೀಯ ಸಾಹಿತ್ಯ ಸಮ್ಮೇಳನ
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.14 ರಾಜ್ಯ ವೈದ್ಯ ಸಾಹಿತ್ಯ ಪರಿಷತ್ತು ಶಿವಮೊಗ್ಗ ಶಾಲೆ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ಅಖಿಲ ಕರ್ನಾಟಕ ವೈದ್ಯ ಸಾಹಿತ್ಯ ಸಮ್ಮೇಳನ ಏರ್ಪಡಿಸಿವೆ.
ಫೆ. 23ರಂದು ಇಲ್ಲಿನ ಕರ್ನಾಟಕ ಸಂಘ ಭವನದಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು, ಇದಕ್ಕಾಗಿ ಪೂರ್ವಭಾವಿ ತಯಾರಿ ನಡೆಸಿದೆ.
ಭ್ರೂಣಹತ್ಯೆ, ಸಾಮಾಜಿಕ ಕ್ರೌರ್ಯ, ಲೈಂಗಿಕ ಅಪರಾಧ, ಮೂಢನಂಬಿಕೆಗಳು, ಮಾಧ್ಯಮದಿಂದ ಸಮಾಜದ ಮೇಲಾಗುವ ಪರಿಣಾಮ ಮುಂತಾದ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಸಾರ್ವಜನಿಕರು ಮುಕ್ತ ಸಂವಾದದಲ್ಲಿ ಭಾಗವಹಿಸಲೂ ಅವಕಾಶ ಕಲ್ಪಿಸಿದ್ದು, ಈ ಸಮ್ಮೇಳನವನ್ನು ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ನಾ. ಡಿಸೋಜ ಉದ್ಘಾಟಿಸುವರು.
ವೈದ್ಯ ಸಾಹಿತಿ ಡಾ.ಪಿ.ಎಸ್. ಶಂಕರ್, ಡಾ.ಸಿ.ಆರ್. ಚಂದ್ರಶೇಖರ್, ನಾ. ಸೋಮೇಶ್ವರ, ಎಂ.ಕೆ.ಭಟ್, ಡಾ. ವಸಂತ ಕುಲಕರ್ಣಿ, ಡಾ. ಗಿರಿಜಮ್ಮ, ಡಾ. ಕೆ.ಆರ್.ಶ್ರೀಧರ್, ಡಾ. ಕೆ.ಎ. ಅಶೋಕ್ ಪೈ, ವಿಜಯ ಶ್ರೀಧರ್ ಮೊದಲಾದವರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಯೋಜಕ ಸಂಘಟನೆಗಳು ಕೋರಿವೆ. ವಿವರಗಳಿಗೆ ಕನ್ನಡ ವೈದ್ಯಕೀಯ ಪರಿಷತ್ತಿನ ಡಾ. ಕೇಶವಮೂರ್ತಿ (9448871431), ಡಾ. ಕದಂ (9448594646) ಅವರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

