ಶಿವಮೊಗ್ಗ

'ಮನವೊಲಿಸುವೆ: ರಾಘವೇಂದ್ರ'

Published On :

ಹೊಸನಗರ: ಬಿ.ಎಸ್.ಯಡಿಯೂರಪ್ಪ ಬಿಜೆಪಿ ಜತೆ ವಿಲೀನಗೊಂಡಿರುವ ಕಾರಣ ಅಸಮಧಾನಗೊಂಡು ಬಿಜೆಪಿಯಿಂದ ವಿಮುಖರಾಗುತ್ತಿರುವ ಅಪೆಕ್ಸ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮನವೊಲಿಸುವುದಾಗಿ ಸಂಸದ ರಾಘವೇಂದ್ರ  ಹೇಳಿದ್ದಾರೆ. ಮೂಲೆಗದ್ದೆ ಶ್ರೀಗಳ ತುಲಾಭಾರ ಕಾರ್ಯಕ್ರಮದೊಂದಿಗೆ ಆಗಮಿಸಿದ್ದ ಅವರು, “OÚ«Ú­sÚ®Úúڒ¥ÚæàM¦Væ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಜತೆಗೆ ಮಂಜುನಾಥಗೌಡರು ಕೂಡ ನಮ್ಮ ನಾಯಕರು. ಬಿಜೆಪಿ ಬಗ್ಗೆ ಅಸಮಧಾನದ ಬಗ್ಗೆ ಅವರ ಹೇಳಿಕೆ ಗಮನಿಸಿದ್ದೇನೆ. ಆದರೆ, ನಾಯಕರಾದ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಗೌಡರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಕ್ರಿಕೆಟ್ ಪಂದ್ಯ ಉದ್ಘಾಟನೆ
ಭದ್ರಾವತಿ: ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಲ್ಲಿ ಕ್ರೀಡಾ ಮನೋಭಾವ ಹೆಚ್ಚಾಗುವುದಲ್ಲದೆ ಅವರಲ್ಲಿ ದೈಹಿಕ ಸಾಮರ್ಥ್ಯವು ಸಹ ಹೆಚ್ಚಾಗಿ ಅವರು ಹೆಚ್ಚು ಸದೃಢರಾಗಿ ಸಮಗ್ರ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಸಿಬ್ಬಂದಿ ವಿಭಾಗದ ಉಪಮಹಾಪ್ರಬಂಧಕ ಎಂ. ಬಾಲಕೃಷ್ಣ ಶೆಟ್ಟಿ ತಿಳಿಸಿದರು. ಅವರು ಮಂಗಳವಾರ ಪಟ್ಟಣದ ವಿಐಎಸ್ಎಲ್ ರಜತ ಮಹೋತ್ಸವ ಕ್ರೀಡಾಂಗಣದ ಟರ್ಫ್ ಅಂಕಣದಲ್ಲಿ ಪ್ರಾರಂಭಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ ಮೂರು ದಿನಗಳ ಅಂತರ ಪ್ರೌಢಶಾಲಾ ಕ್ರಿಕೆಟ್ ಪಂದ್ಯಾವಳಿಯ ಇ ಗುಂಪಿನ ಪಂದ್ಯಗಳನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದ ಮುಖ್ಯವೇ ಹೊರತು ಅದರ ಫಲಿತಾಂಶವಲ್ಲ. ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿ ಉತ್ತಮವಾಗಿ ಆಡಬೇಕೆಂದು ಅವರು ಆಟಗಾರರನ್ನು ಹುರಿದುಂಬಿಸಿದರು.  ರಾಜ್ಯ ಕ್ರಿಕೆಟ್ ಸಂಸ್ಥೆಯ ಸ್ಥಳೀಯ ಸಂಚಾಲಕ ಎಲ್. ಆನಂದರಾಮನ್, ಪಂದ್ಯದ ತೀರ್ಪುಗಾರರುಗಳಾದ ಎಚ್.ಅರ್. ಬಾಬು ಮತ್ತು ಗಣೇಶ್ ಪ್ರಸನ್ನ ಅವರುಗಳು ಸಹ ಉಪಸ್ಥಿತರಿದ್ದರು.
ನಾಳೆ ಪ್ರತಿಭಟನೆ
ಸಾಗರ: ಅಸಮರ್ಪಕ ವಿದ್ಯುತ್ ಪೂರೈಕೆಯನ್ನು ಖಂಡಿಸಿ ಜ.16ರಂದು ಬೆಳಗ್ಗೆ 11ಕ್ಕೆ ವಿದ್ಯುತ್ ಬಳಕೆದಾರರ ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 11ಕ್ಕೆ ಪಟ್ಟಣದ ಪೊಲೀಸ್ ಠಾಣೆ ವೃತ್ತದಿಂದ ಮೆಸ್ಕಾಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ವಿದ್ಯುತ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ನಾಗರಾಜ್ ಕೋರಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.