ಜಿಲ್ಲಾದ್ಯಂತ ಪೈಗಂಬರ್ ಜನ್ಮದಿನ ಆಚರಣೆ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜ.14
ಮೊಹ್ಮದ್ಪೈಗಂಬರ್ ಹುಟ್ಟುಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು.
ಮಧ್ಯಾಹ್ನ ವಿವಿಧ ಬಡಾವಣೆಗಳಿಂದ ಆಗಮಿಸಿದ ಮುಸ್ಲಿಮರು ನಗರದ ಗಾಂಧಿ ಬಜಾರಿನಲ್ಲಿರುವ ಜಾಮಿಯಾ ಮಸೀದಿಯಿಂದ ಹೊರಟು ಲಷ್ಕರ್ ಮೊಹಲ್ಲಾ, ಬಾರ್- ಲೈನ್ ರಸ್ತೆ, ಪೆನ್ಷನ್ ಮೊಹಲ್ಲಾ, ಬಿ.ಎಚ್. ರಸ್ತೆ, ಮೀನಾಕ್ಷಿ ಭವನ ಪಕ್ಕದ ರಸ್ತೆ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಬಾಲರಾಜ ಅರಸ್, ಮಹಾವೀರ ರಸ್ತೆ, ಗೋವಿ ವೃತ್ತ, ಬಸ್ ನಿಲ್ದಾಣ, ಎನ್ಟಿ ರಸ್ತೆ, ಆಜಾದ್ ನಗರದಿಂದ ಅಷೂರ ಖಾನಕ್ಕೆ ಬಂದು ತಲುಪಿಸಿದರು.
ರಾತ್ರಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆದ ನಂತರ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಕುರಿತು ಮೌಲಾರವರು ಪ್ರವಚನ ನೀಡಿದರು. ತಡ ರಾತ್ರಿ ವರೆಗೂ ಕಾರ್ಯಕ್ರಮ ನಡೆದಿತ್ತು.
ಸೊರಬ
ಸೊರಬ: ಪಟ್ಟಣದಲ್ಲಿ ಮುಸ್ಲಿಮರು ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಮಂಗಳವಾರ ಸಡಗರದಿಂದ ಆಚರಿಸಿದರು. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿದರು. ಬಡವರಿಗೆ ದವಸ- ಧಾನ್ಯ ವಿತರಿಸಿದರು.
ಮೆರವಣಿಗೆಯಲ್ಲಿ ಸುನ್ನಿ ಜಾಮೀಯಾ ಮಸೀದಿಯ ಗುರುಗಳಾದ ಮೌಲಾನ ಅಹ್ಮದ್ ರಜಾಕ್, ಸಿ.ಆರ್. ಇಸ್ಮಾಯಿಲ್ಖಾನ್, ಸೈಯದ್ ಮುಬಾರಕ್, ಇದಾಯತ್ವುಲ್ಲಾ, ಮುಕ್ತಿಯಾರ್ ಬಾಷಾ, ಮುಖಂಡರಾದ ಬಾಬೂ ಸಾಬ್, ಖಲೀಲ್ಸಾಬ್, ಅಹ್ಮದ್ಸಾಬ್, ಮಕ್ಬೂಲ್ ಅಹ್ಮದ್, ಅನ್ಸರ್ ಅಹ್ಮದ್, ರಿಜ್ವಾನ್ ಅಹ್ಮದ್, ಮುಸ್ತಾಕ್ ಅಹ್ಮದ್, ನಿಸಾರ್ ಅಹ್ಮದ್, ಅಬ್ದುಲ್ ಖಾದರ್, ಸೈಯದ್ ಅಮೀರ್, ಫಾರೂಕ್ ಅಹ್ಮದ್ ಮೊದಲಾದವರು ಇದ್ದರು.
ಶಿರಾಳಕೊಪ್ಪ
ಶಿರಾಳಕೊಪ್ಪ: ಮಹಮದ್ ಪೈಗಂಬರ ಜನ್ಮದಿನವನ್ನು ಸಾವಿರಾರು ಮುಸಲ್ಮಾನರು ಒಟ್ಟಾಗಿ ಸೇರಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ನಂತರ ದರ್ಗಾದಲ್ಲಿ ಸಭೆ ನಡೆಸಲಾಯಿತು. ಪತ್ರಿಕೆಯೊಂದಿಗೆ ಮಾತನಾಡಿದ ಸಮಾಜದ ಪ್ರಮುಖ ನಿಸಾರ್ ಅಹಮದ್ ಮಾತನಾಡಿದರು. ಹಬ್ಬದ ಪ್ರಯುಕ್ತ ಶಿರಾಳಕೊಪ್ಪ ಬಸ್ಸು ನಿಲ್ದಾಣ ವೃತ್ತ ಹಾಗೂ ಹಿರೇಕೆರೂರ ರಸ್ತೆಯನ್ನು ದೀಪಾಲಂಕಾರ ಮತ್ತು ಬಾವುಟಗಳನ್ನು ಕಟ್ಟಿ ಅಲಂಕರಿಸಲಾಗಿತ್ತು.
ಭದ್ರಾವತಿ
ಭದ್ರಾವತಿ: ಈದ್ ಮಿಲಾದ್ ಮೆರವಣಿಗೆ ಮಂಗಳವಾರ ಶಾಂತಿಯುತವಾಗಿ ನಡೆಯಿತು. ಅಂಜುಮನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಪೀರ್ ಷರೀಫ್ ಮೆರಣಿಗೆಯನ್ನು ಪಟ್ಟಣದ ಹೊಳೆಹೊನ್ನರು ವೃತ್ತದ ಬಳಿ ಉದ್ಘಾಟಿಸಿದರು. ಪಟ್ಟಣದ ಮುಖ್ಯರಸ್ತೆಗಳನ್ನು ಹಸಿರು ಬಾವುಟ, ಬಂಟಿಂಗ್ಸ್ ಮತ್ತು ವರ್ಣರಂಜಿತ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಅಂಜುಮನ್ ಸಂಘಟನೆಯ ಉಪಾಧ್ಯಕ್ಷ ಹಾಜಿ ದಿಲ್ದಾರ್, ಹಾಜಿ ಅಮೀರ್ಜಾನ್, ಕಾರ್ಯದರ್ಶಿ ಗೌಸ್ಖಾನ್, ಸಿ.ಎಂ. ಸಾದಿಕ್, ಮಾಜಿ ಉಪಮೇಯರ್ ಮಹಮದ್ ಸನಾವುಲ್ಲಾ, ಬಾಬಾಜಾನ್, ಮಹಮದ್ ಸಾದಿಕ್, ರಹಮತುಲ್ಲಾ ಬೇಗ್, ಮಹಮದ್ ಗೌಸ್, ಅಹಮದ್ ಸಯೀದ್ ಮೊದಲಾದರು ಮೆರವಣಿಗೆ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

