ಶಿವಮೊಗ್ಗ

ಹಾದಿ ತಪ್ಪಿಸುವ ಜ್ಞಾನಿ ಸಮಾಜಕ್ಕೆ ಮಾರಕ

Published On :

ಕ.ಪ್ರ.ವಾರ್ತೆ ಟಿ ಸೊರಬ ಟಿ  ಜ.14
ತಿಳಿವಳಿಕೆ ಇದ್ದೂ ಸ್ವಾರ್ಥಪರ ಚಿಂತನೆಯ ಕಡೆ ನಡೆಸಿ, ಹಾದಿ ತಪ್ಪಿಸುವ ಕ್ರಿಯೆಯಲ್ಲಿ ತೊಡಗುವ ಜ್ಞಾನಿ ಸಮಾಜಕ್ಕೆ ಮಾರಕ ಎಂದು ಸೋಲೂರು ಮಠದ ರೇಣುಕಾನಂದ ಶ್ರೀ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ಈಡಿಗ (ದೀವರ) ನೌಕರರ ಕ್ಷೇಮಾಭಿವೃದ್ಧಿ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದ ಸಾನ್ನಿಧ್ಯ ಅವರು ಮಾತನಾಡಿದರು.
ಮಾನವ ತನ್ನ ಜೀವನದ ಅವಧಿಯಲ್ಲಿ ಗಳಿಸಿದ ಜ್ಞಾನವನ್ನು ನಿರಂತರವಾಗಿ ಸಮಾಜದ ಏಳ್ಗೆಗಾಗಿ ಶ್ರಮಿಸುವ ವ್ಯಕ್ತಿತ್ವ ಹೊಂದಿದ್ದರೆ ಆತ ಸುಜ್ಞಾನಿ ಎನಿಸಿಕೊಳ್ಳುತ್ತಾನೆ ಎಂದರು.
ಸಾಂಸ್ಕೃತಿಕ ಅಸ್ತಿತ್ವ: ಶಿರಸಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್. ನಾಯ್ಕ್ ಯುವಜನ ಶಿಕ್ಷಣ ಮತ್ತು ಸಂಪ್ರದಾಯ ಕುರಿತು ಉಪನ್ಯಾಸ ನೀಡಿ, ಕಾಗೋಡು ಚಳವಳಿ ಮೂಲಕ ಈಡಿಗ ಜನಾಂಗಕ್ಕೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಸ್ತಿತ್ವದ ರೂಪ ದೊರೆತಿದೆ ಎಂದವರು ಹೇಳಿದರು.
ಯಾವುದೇ ಹೋರಾಟಕ್ಕೆ ನಿರಂತರತೆ ಇರುವುದಿಲ್ಲ. ಯುವಜನ ಸಮಾಜವನ್ನು ಒಗ್ಗೂಡಿಸುವುದರ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಹೋರಾಟದ ಮೂಲಕ ಪಡೆಯುವ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದರು.
ಜಿಪಂ ಸದಸ್ಯ ಹುಣವಳ್ಳಿ  ಗಂಗಾಧರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದಭಂದಲ್ಲಿ ನಿವೃತ್ತ ನೌಕರರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಎನ್.ಎಚ್. ಲಿಂಗೇಶ್ ಅಧ್ಯಕ್ಷತೆ ವಹಿಸಿದ್ದರು.
ಶಿವಾನಂದ ಪಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಘದ ಅಧ್ಯಕ್ಷ ಶ್ರೀಧರ ಹುಲ್ತಿಕೊಪ್ಪ, ಜಿಪಂ ಸದಸ್ಯೆ ಕೋಮಲಾ ನಿರಂಜನ, ತಾಲೂಕು ನೌಕರರ ಸಂಘದ ಅಧ್ಯಕ್ಷ ಹೊಳೆಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ್, ಡಾ.ಲೋಕೇಶ್, ಎಚ್. ಗಣಪತಿ, ತಾಪಂ ಸದಸ್ಯ ಬರಗಿ ನಿಂಗಪ್ಪ, ಜೆ.ಡಿ. ನಾಯ್ಕ್, ರಾಜೇಶ್ವರಿ ರಾಜಪ್ಪ, ಲಕ್ಷ್ಮೀ, ಸುಕನ್ಯ, ವಕೀಲ ತಮ್ಮಣ್ಣಪ್ಪ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.