ಯಾವ ಪಕ್ಷ ಸೇರಿದರೂ ನಿಮಗೆ ಬೆಂಬಲ: ಭರವಸೆ
ಕ.ಪ್ರ.ವಾರ್ತೆ, ಸಾಗರ, ಜ.17
ರಾಜಕೀಯವಾಗಿ ಸರಿಯಾದ ಆಯ್ಕೆ ಮಾಡಿಕೊಳ್ಳಿ. ನೀವು ಯಾವ ಪಕ್ಷವನ್ನು ಆಯ್ಕೆಮಾಡಿಕೊಂಡರೂ ನಾವು ನಿಮ್ಮ ಹಿಂದೆ ಬರುತ್ತೇವೆ. ಆಯ್ಕೆ ಮಾಡಿಕೊಂಡ ಪಕ್ಷದಲ್ಲಿ ಮುಂದೆ ದೃಢವಾಗಿ ನಿಲ್ಲುವಂತಾಗಬೇಕು ಎಂದು ಗೋಪಾಲಕೃಷ್ಣ ಬೇಳೂರು ಅಭಿಮಾನಿಗಳು ಒಕ್ಕೊರಲಿನಿಂದ ಹೇಳಿದರು.
ಶುಕ್ರವಾರ ತಾಲೂಕಿನ ಉಳ್ಳೂರಿನಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕರೆದಿದ್ದ ಬೆಂಬಲಿಗರ ಹಾಗೂ ಅಭಿಮಾನಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಕೆ. ಅರುಣ್ ಪ್ರಸಾದ್ ಮೊದಲಾದವರು ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಆರಂಭವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿ ಕಾಮಗಾರಿಗೆ ಹಣ ನಿಗದಿ ಮಾಡಲಾಗುತ್ತಿದೆ. ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಯಾವ ಕಾಮಗಾರಿಗಳಿಗೂ ಹಣ ಬಿಡುಗಡೆಯಾಗುತ್ತಿಲ್ಲ. ಇದಕ್ಕೆಲ್ಲ ಪರಹಾರವೆಂದರೆ ಬೇಳೂರು ಅವರಂತಹ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಈ ಕಾರಣದಿಂದ ಬೇಳೂರು ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳಿಗೆ ಬೆಂಬಲಿಗರು, ಕಾರ್ಯಕರ್ತರು ಬದ್ಧರಾಗಿದ್ದು ಅವರನ್ನು ಬೆಂಬಲಿಸುವುದಾಗಿ ಹೇಳಿದರು.
ಒಂದೇ ಪಕ್ಷದಲ್ಲಿರುತ್ತೇನೆ: ನಂತರ ಮಾತನಾಡಿದ ಗೋಪಾಲಕೃಷ್ಣ ಬೇಳೂರು, ರಾಜಕೀಯವಾಗಿ ಕೆಲವು ಅನಿವಾರ್ಯ ಕಾರಣಗಳಿಂದ ಬೇರೆ ಬೇರೆ ಪಕ್ಷಗಳಿಗೆ ಹೋಗಬೇಕಾಗಿ ಬಂತು. ಈಗ ರಾಷ್ಟ್ರೀಯ ಪಕ್ಷವೊಂದನ್ನು ಆಯ್ಕೆಮಾಡಿಕೊಲ್ಳಲಿದ್ದು, ಇನ್ನು ಮುಂದೆ ಸೋಲು ಗೆಲುವು ಏನೇ ಬಂದರೂ, ಅಧಿಕಾರ ಸಿಗಲಿ, ಸಿಗದಿರಲಿ ಅದೇ ಪಕ್ಷದಲ್ಲಿ ಮುಂದುವರೆಯುತ್ತೇನೆ. ಈ ಸಂಬಂಧ ಕಾರ್ಯಕರ್ತರು ಆತಂಕ ಪಡಬೇಕಿಲ್ಲ ಎಂದು ಭರವಸೆ ನೀಡಿದರು.
ಮುಂದಿನ ಕೆಲವೇ ದಿನಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚಿಸುತ್ತೇನೆ. ನಂತರ ಪಟ್ಟಣದಲ್ಲಿ ಸಮಾವೇಶ ನಡೆಸಿ ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದರು.
ಆರ್.ಸಿ.ಮಂಜಪ್ಪ, ಅದರಂತೆ ಚಂದ್ರಶೇಖರ, ಬಿ.ಆರ್.ವೆಂಕಟೇಶ್, ಮಂಡಗಳಲೆ ಗಣಪತಿ, ಮಂಜುನಾಥ ಚಿಪ್ಪಳಿ, ಲಕ್ಷ್ಮಣ ಸಾಗರ್, ಗಣಪತಿ ತ್ಯಾಗರ್ತಿ, ಸೋಮಶೇಖರ್ ಅರಮನೆಕೇರಿ, ಶ್ರೀಮತಿ, ವೆಂಕಟಗಿರಿ, ಶೋಭಾ, ಭೀರೇಶ್, ಲಕ್ಷ್ಮಣ್ ಪ್ರಸಾದ್, ಚಂದ್ರಪ್ಪ, ಇಂದೂಧರ ಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

