ಅಪಘಾತ ಹೆಚ್ಚಳಕ್ಕೆ ವಾಹನ ದಟ್ಟಣೆ ಕಾರಣ
ಕ.ಪ್ರ.ವಾರ್ತೆ, ಶಿಕಾರಿಪುರ, ಜ.20 ಪ್ರತಿಯೊಬ್ಬರ ಜೀವನಮಟ್ಟ ಸುಧಾರಣೆ ಹಾಗೂ ಜನಸಂಖ್ಯೆ ಹೆಚ್ಚಳದಿಂದ ವಾಹನ ದಟ್ಟಣೆ ವಿಪರೀತವಾಗಿ ಸಂಚಾರಿ ನಿಯಮ ಪಾಲನೆಯನ್ನು ಸೂಕ್ತವಾಗಿ ಪಾಲಿಸದೆ ಇತ್ತೀಚೆಗೆ ಅಪಘಾತಗಳು ಹೆಚ್ಚುತ್ತಿವೆ ಎಂದು ಇಲ್ಲಿನ ಜೆಎಂಎಫ್ಸಿ ಕಿರಿಯ ಶ್ರೇಣಿ ನ್ಯಾಯಾಧೀಶ ಜಗದೀಶ ಶಿವಪೂಜಿ ಕಳವಳ ವ್ಯಕ್ತಪಡಿಸಿದರು.
25 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಂಗಳವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಜನತೆಯ ಜೀವನ ಪದ್ಧತಿ ಸುಧಾರಿಸಿ ವಾಹನಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ ಎಂದರು.
ಸವಾರರಿಗೆ ತರಬೇತಿ: ವಾಹನ ಸವಾರರಿಗೆ ಸೂಕ್ತ ಶಿಕ್ಷಣ ತರಬೇತಿಯಿಂದ ಮಾತ್ರ ಅಪಘಾತ ಕಡಿಮೆಗೊಳಿಸಲು ಸಾಧ್ಯವಿದ್ದು, ಈ ದಿಸೆಯಲ್ಲಿ ಪೊಲೀಸ್ ಇಲಾಖೆಯ ಸಹಕಾರ ಸಪ್ತಾಹ ಮತ್ತಿತರ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ತಹಸೀಲ್ದಾರ್ ಧರ್ಮೋಜಿರಾವ್ ಮಾತನಾಡಿ, ಸುರಕ್ಷತೆ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅರಿವು ಅತ್ಯಗತ್ಯವಾಗಿದ್ದು, ಸುರಕ್ಷತಾ ಚಾಲನೆಯ ಕ್ರಮವನ್ನು ಸೂಕ್ತವಾಗಿ ಪಾಲಿಸದಿದ್ದಲ್ಲಿ ಅಮಾಯಕ ಪಾದಚಾರಿಗಳು ಬಲಿಯಾಗುವ ಸಂದರ್ಭ ಹೆಚ್ಚಿದೆ ಎಂದ ಅವರು, ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಬಳಕೆ ಅತ್ಯಂತ ಅಪಾಯಕಾರಿಯಾಗಿದ್ದು, ಇದರಿಂದ ಜೀವನ ಕಡಮೆ ಅವಧಿಯಲ್ಲಿಯೇ ಅಂತ್ಯಗೊಳಿಸಬೇಕಾದೀತು ಎಂದು ಎಚ್ಚರಿಸಿದರು.
ತಿಳಿವಳಿಕೆ ಕೊರತೆ: ತಾಲೂಕು ಕಸಾಪ ಅಧ್ಯಕ್ಷ ಶಿವರಂಜಿನಿ ಸುದರ್ಶನ್ ಮಾತನಾಡಿ, ವಾಹನ ಚಲಾವಣೆ ನಿಯಮಪಾಲನೆಯಿಲ್ಲದೆ ಇದರೊಂದಿಗೆ ತಿಳಿವಳಿಕೆ ಕೊರತೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ವಾಹನ ಚಲಾವಣೆ ಜೀವದೊಂದಿಗೆ ಚೆಲ್ಲಾಟವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿಕಾರಿಪುರ ಪೊಲೀಸ್ ಉಪಾಧೀಕ್ಷಕ ಸೈಯದ್ ಇಸಾಕ್ ಮಾತನಾಡಿ, ಪ್ರತಿಯೊಬ್ಬರರೂ ವಾಹನ ಚಲಾಯಿಸುವಾಗ ನಂಬಿರುವ ಕುಟುಂಬದ ಸದಸ್ಯರನ್ನು ಮರೆಯದೆ ನಿರ್ದಿಷ್ಟ ವೇಗದಲ್ಲಿ ಚಲಿಸಿದಾಗ ಅಪಘಾತ ಕಡಿಮೆಯಾಗಲಿದೆ ಎಂದರು.
ತಾಪಂ ಇಒ ಡಾ. ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕ ಡಾ. ಪ್ರಭಾಕರ್, ಸಹಾಯಕ ತೋಟಗಾರಿಕಾ ನಿರ್ದೇಶಕ ಸಿದ್ದಲಿಂಗೇಶ್, ಸಿಪಿಐ ಮಾದಪ್ಪ, ಪಿಎಸ್ಸೈ ಕಿರಣ ಕುಮಾರ್, ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಪಟ್ಟಣದ ಪುಷ್ಪಾ ಹಿರಿಯ ಪ್ರಾಥಮಿಕ ಶಾಲೆ, ಚನ್ನಮಲ್ಲಿಕಾರ್ಜುನ ಶಾಲೆ, ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

