'ಪ್ರತಿಭೆಗಳು ಹೊರಹೊಮ್ಮಿದರೆ ಯೋಜನೆಗಳಿಗೆ ಅರ್ಥ'
ಜೋಗ್ಫಾಲ್ಸ್: ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದು, ವಿದ್ಯಾರ್ಥಿಗಳು ಕೈ ಜೋಡಿಸುವ ಮೂಲಕ ಜ್ಞಾನಚಕ್ಷುಗಳಾಗಿ ಹೊರಹೊಮ್ಮಿದರೆ ಸರ್ಕಾರದ ಯೋಜನೆಗಳಿಗೆ ಅರ್ಥ ಬರುತ್ತದೆ ಎಂದು ಜೋಗ್- ಕಾರ್ಗಲ್ ಪಪಂ ಅಧ್ಯಕ್ಷ ಕೆ.ಸಿ. ಹರೀಶ್ಗೌಡ ತಿಳಿಸಿದರು.
ಕೆಪಿಸಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಗೆ ವಿತರಣಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅಭಿಯಂತರ ಜಿ. ಹನುಮಂತಪ್ಪ, ದೂರದ ಹಳ್ಳಿಯಿಂದ ಬರುವ ಮಕ್ಕಳಿಗೆ ಸೈಕಲ್ ಕೊಡುಗೆಯಿಂದ ತುಂಬಾ ಅನುಕೂಲವಾಗುತ್ತದೆ. ಸೈಕಲ್ ಓಡಿಸುವುದರಿಂದ ಆರೋಗ್ಯವು ಸದೃಢವಾಗುತ್ತದೆ. ಇದು ಒಂದು ರೀತಿ ವ್ಯಾಯಾಮವಾಗಿದ್ದು, ಪ್ರಕೃತಿ ಮೇಲೆ ಬೇರೆ ವಾಹನಗಳ ತರಹ ಯಾವುದೇ ದುಷ್ಪರಿಣಾಂಗಳನ್ನು ಬಿರುವುದಿಲ್ಲ ಹಾಗೂ ಇಂಧನದ ಅವಶ್ಯಕತೆ ಇರುವುದಿಲ್ಲ. ಚೀನಾದೇಶದಲ್ಲಿ ಇಂದು ಪರಿಸರಕ್ಕೆ ಪ್ರಾಧಾನ್ಯತೆ ನೀಡುವ ಸಲುವಾಗಿ ಅಧಿಕಾರಿಗಳಿಂದ ಶ್ರೀಸಾಮಾನ್ಯರವರೆಗೂ ಸೈಕಲ್ ಬಳಸುತ್ತಾರೆ.
ಇಂತಹ ವ್ಯವಸ್ಥೆಯನ್ನು ಭಾರತ ದೇಶದಲ್ಲಿ ಕಡ್ಡಾಯವಾಗಿ ಅಳವಡಿಸಿಕಂಡಲ್ಲಿ ಪರಿಸರ ಪ್ರಕೃತಿಯನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇಂಧನವನ್ನು ಉಳಿಸಬಹುದು ಎಂದರು.
ಪಪಂ ಉಪಾಧ್ಯಕ್ಷ ಬಿ. ಸರೋಜ, ಪಪಂ ಸದಸ್ಯರಾದ ಅಂಬ್ರೋಜ್ ಮೇರಿ, ಶ್ರೀಲತ, ನಿಗಮದ, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎಸ್. ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತನುಶ್ರೀ ಪ್ರಾರ್ಥಿಸಿದರೆ, ಬಸವರಾಜಪ್ಪ ಸ್ವಾಗತಿಸಿದರು.
ಪ್ರಾಸ್ತಾವಿಕ ಭಾಷಣವನ್ನು ಮುಖ್ಯೋಪಧ್ಯಾಯ ಎ.ಎಂ. ಠಾಕೂರ್ ವಾಚಿಸಿದರು. ಎ.ಎಂ. ರೋಹಿತ್ ನಿರೂಪಿಸಿ, ವಿ.ಕೆ. ಹಿರೇಮಠ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

