ಶಿವಮೊಗ್ಗ

ಭ್ರಾಂತೇಶ ಸಮುದಾಯ ಭವನ ಲೋಕಾರ್ಪಣೆ ಇಂದು

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ಜ.22
ಸುಂದರ ಉದ್ಯಾನವನ ಸಮೀಪಲ್ಲಿ ಕೆರೆ, ಪುಷ್ಕರಣಿ, ಪ್ರಸಿದ್ಧ ದೇವಾಲಯ ಸುತ್ತಮುತ್ತ ಕಾಂಕ್ರೀಟ್ ರಸ್ತೆ, ಇಷ್ಟೆಲ್ಲ ಸುಂದರ ಪರಿಸರದ ಮಧ್ಯೆ ಇದೀಗ ಕೋಟ್ಯಂತರ ರು. ವೆಚ್ಚದ ಬೃಹತ್ ಶ್ರೀ ಭ್ರಾಂತೇಶ ಸಮುದಾಯ ಭವನ...
ಇದು ಕಡಿಮೆ ವೆಚ್ಚದಲ್ಲಿ ಸಾಮಾನ್ಯ ಜನರ ಕಲ್ಯಾಣ ಕಾರ್ಯಗಳಿಗೆಂದೇ ಸುಸಜ್ಜಿತವಾಗಿ ನಿರ್ಮಿಸಿರುವ ಮುಜರಾಯಿ ಇಲಾಖೆ ಅಧೀನದ ನೂತನ ಸಮುದಾಯ ಭವನದ ಪರಿಸರ. ಈ ಭವನ ಈಗ ಲೋಕಾರ್ಪಣೆಗೆ ಸಿದ್ಧಗೊಂಡು ಕಂಗೊಳಿಸುತ್ತಿದೆ. ಶಾಸಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಹಲವು ವರ್ಷಗಳ ಕನಸಾಗಿದ್ದ ಈ ಭವನ ನಿರ್ಮಾಣ ಈಗ ಸಂಪೂರ್ಣವಾಗಿದೆ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವಾಲಯ, ಉದ್ಯಾನವನ, ಕೆರೆ ಅಭಿವೃದ್ಧಿ, ಶಾಲಾ -ಕಾಲೇಜು, ರಸ್ತೆ, ನೀರು, ವಿದ್ಯುತ್, ಕೈಗಾರಿಕೆ ಮತ್ತಿತರ ಅಭಿವೃದ್ಧಿ ಮೂಲಕ ಶಿಕಾರಿಪುರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದರು. ಈ ಕಾರ್ಯದಿಂದ ಶಿಕಾರಿಪುರ ರಾಜ್ಯದ ನಕ್ಷೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿತ್ತು.
ಅಂದಾಜು 2 ಕೋಟಿ ವೆಚ್ಚದ ಬೃಹತ್ ಶ್ರೀ ಭ್ರಾಂತೇಶ ಸಮುದಾಯ ಭವನ 16 ಕೊಠಡಿಗಳನ್ನು ಹೊಂದಿದೆ. ವಿಶಾಲವಾದ ಒಳಾಂಗಣ, ನೆಲ ಅಂತಸ್ತಿನಲ್ಲಿ ಏಕಕಾಲದಲ್ಲಿ 500 ಜನ ಕುಳಿತುಕೊಳ್ಳಲು ಅವಕಾಶ ಕಲ್ಪಿಸುವಷ್ಟು ಬೃಹತ್ ಭೋಜನಾಲಯ ವ್ಯವಸ್ಥೆ, ಪ್ರತ್ಯೇಕ ಬೋರ್‌ವೆಲ್ ಮುಂತಾಯ ಅಗತ್ಯ ಸೌಕರ್ಯಗಳಿಂದ ಸಾಮಾನ್ಯರ ಸೇವೆಗೆ ಸಿದ್ಧವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.